ಡಿಜಿಟಲ್ ಕನ್ನ, ನಕಲಿ ಶಿಕ್ಷಕರು; ಶಿಕ್ಷಣ ಇಲಾಖೆಯ ಹಗರಣ ಬಯಲು!

Date:

ಬಿಹಾರದ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಸಂಬಳ ನೀಡಲು ಬಳಸುವ ಆನ್‌ಲೈನ್ ವ್ಯವಸ್ಥೆಯನ್ನು (HRMS Portal) ದುರುಪಯೋಗಪಡಿಸಿಕೊಂಡು, ಬರೋಬ್ಬರಿ 1.85 ಕೋಟಿ ರೂ.ಗಳಿಗೂ ಹೆಚ್ಚು ಸಾರ್ವಜನಿಕ ಹಣವನ್ನು ಲೂಟಿ ಮಾಡಿರುವ ದೊಡ್ಡ ಹಗರಣ ಬೆಳಕಿಗೆ ಬಂದಿದೆ.

- Advertisement -

ಸಂಬಳ ಪಾವತಿಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಈ ಆನ್‌ಲೈನ್ ಸಿಸ್ಟಮ್ ಜಾರಿಗೆ ತಂದಿತ್ತು. ಆದರೆ, ಕೆಲ ಕೆಳಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳು ಕೋಟ್ಯಂತರ ಹಣವನ್ನು ತಮ್ಮದೇ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದು ಇಲಾಖೆಯ ಆಂತರಿಕ ತನಿಖೆಯಲ್ಲಿ ಪತ್ತೆಯಾಗಿದೆ. ಸದ್ಯ ಈ ಹಗರಣ ರಾಜ್ಯದ ಮೂರು ಪ್ರಮುಖ ಜಿಲ್ಲೆಗಳಲ್ಲಿ  ಸದ್ದು ಮಾಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ನವಾಡ ಜಿಲ್ಲೆ: ಇಲ್ಲಿನ ರಾಜೌಲಿ ತಾಲೂಕಿನ ಶಾಲೆಯೊಂದರ ಶಿಕ್ಷಕಿಯೊಬ್ಬರಿಗೆ ಏಪ್ರಿಲ್ ತಿಂಗಳಲ್ಲಿ ಬರಬೇಕಿದ್ದ ಮೂಲ ಸಂಬಳ 46,772 ರೂ. ಆದರೆ, ಆನ್‌ಲೈನ್ ಸಿಸ್ಟಮ್‌ ಬಳಸುತ್ತಿದ್ದ ಸಿಬ್ಬಂದಿ, ಆಕೆಗೆ ಹೆಚ್ಚುವರಿಯಾಗಿ 4,52,222 ರೂ. ಸೇರಿಸಿ ಒಟ್ಟು 4,91,772 ರೂ. ಜಮೆ ಮಾಡಿದ್ದಾರೆ. ಮೇ ತಿಂಗಳಲ್ಲೂ ಇದೇ ರೀತಿ 3.49 ಲಕ್ಷ ರೂ. ಹಾಕಲಾಗಿದೆ. ಇಷ್ಟೇ ಅಲ್ಲದೆ, ಸರ್ಕಾರದ ಬೇರೆ ನಿಧಿಯಿಂದಲೂ 2.86 ಲಕ್ಷ ರೂ. ಈಕೆಯ ಖಾತೆಗೆ ಹೋಗಿದ್ದು, ಒಟ್ಟಾರೆಯಾಗಿ ಆ ಶಿಕ್ಷಕಿ 10.43 ಲಕ್ಷ ರೂ.ಗಳನ್ನು ಸುಮ್ಮನೆ ಪಡೆದಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.

ಪಟ್ನಾ ಜಿಲ್ಲೆ: ಇಲ್ಲಿನ ಶಾಲೆಯೊಂದರ ಕ್ಲರ್ಕ್ ವಿಜಯ್ ಕುಮಾರ್ ಎಂಬಾತ, ನೇರವಾಗಿ ಜಿಲ್ಲಾ ಶಿಕ್ಷಣಾಧಿಕಾರಿಗಳ ಅಧಿಕೃತ ಪಾಸ್‌ವರ್ಡ್ ಬಳಸಿ ಆನ್‌ಲೈನ್‌ನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾನೆ. ಈ ಮೂಲಕ ಸುಮಾರು 76.71 ಲಕ್ಷ ರೂ. ಸರ್ಕಾರಿ ಹಣವನ್ನು ಡಿಜಿಟಲ್‌ ಸುಲಿಗೆ ಮಾಡಿದ್ದಾನೆ. ವಿಷಯ ಗೊತ್ತಾಗುತ್ತಿದ್ದಂತೆ ಡಿಇಒ ಆತನನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.

ಭಾಗಲ್ಪುರ ಜಿಲ್ಲೆ: ಇಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ‘ತನುಶ್ರೀ’ ಎನ್ನುವ ಅಸ್ತಿತ್ವದಲ್ಲೇ ಇಲ್ಲದ ನಕಲಿ ಶಿಕ್ಷಕಿಯ ಹೆಸರನ್ನು ಸಿಸ್ಟಮ್‌ನಲ್ಲಿ ಸೃಷ್ಟಿಸಲಾಗಿದೆ. ಈ ನಕಲಿ ಹೆಸರಿಗೆ ತಿಂಗಳುಗಟ್ಟಲೆ ಬರೋಬ್ಬರಿ 98 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಸಂಬಳದ ರೂಪದಲ್ಲಿ ಡ್ರಾ ಮಾಡಿಕೊಳ್ಳಲಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಒಬ್ಬ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದರೆ, ಜಿಲ್ಲಾ ಶಿಕ್ಷಣಾಧಿಕಾರಿಯನ್ನೂ ಸಸ್ಪೆಂಡ್ ಮಾಡಲಾಗಿದೆ. ಅಷ್ಟೇ ಅಲ್ಲ, ಪೊಲೀಸರು ತನಿಖೆಗೆ ಹೋದಾಗ ಈ ಹಗರಣಕ್ಕೆ ಸಂಬಂಧಿಸಿದ ಮುಖ್ಯ ಕಡತಗಳೇ ನಾಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಸಿಸ್ಟಮ್ ನಿಯಮದ ಪ್ರಕಾರ ಒಬ್ಬರು ಲೆಕ್ಕ ನಮೂದಿಸಿದರೆ, ಮತ್ತೊಬ್ಬ ಹಿರಿಯ ಅಧಿಕಾರಿ ಅದನ್ನು ಪರಿಶೀಲಿಸಬೇಕು. ಆದರೆ ಇಲ್ಲಿ ಇಬ್ಬರೂ ಸೇರಿಕೊಂಡೇ ಹಣ ಗುಳುಂ ಮಾಡಿದ್ದಾರೆ. 

ಹಿರಿಯ ಅಧಿಕಾರಿಗಳ ಬಳಿ ಇರಬೇಕಿದ್ದ ಪಾಸ್‌ವರ್ಡ್‌ಗಳು ಕಚೇರಿಯ ಕ್ಲರ್ಕ್‌ಗಳ ಕೈಯಲ್ಲೇ ಇದ್ದವು, ಇದರಿಂದ ವಂಚನೆ ಸುಲಭವಾಯಿತು. ಸರ್ಕಾರದ ಬೇರೆ ಯೋಜನೆಗಳಿಗೆ ಬರಬೇಕಿದ್ದ ಹಣವನ್ನು ನೇರವಾಗಿ ವೈಯಕ್ತಿಕ ಖಾತೆಗಳಿಗೆ ಹಾಕಿಕೊಳ್ಳಲಾಗಿದೆ. 

ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ, ಈ ಹಗರಣದ ಗಂಭೀರತೆಯನ್ನು ಒಪ್ಪಿಕೊಂಡಿದ್ದಾರೆ. “ಈ ಮೂರು ಜಿಲ್ಲೆಗಳ ಪ್ರಕರಣಗಳು ನಮಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿವೆ. ರಾಜ್ಯದ ಎಲ್ಲಾ 38 ಜಿಲ್ಲೆಗಳಲ್ಲೂ HRMS ಆಡಿಟ್ ನಡೆಸಲು ಆದೇಶಿಸಿದ್ದು, ನವೆಂಬರ್ 15ರ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ. ಪೋರ್ಟಲ್‌ನ ತಾಂತ್ರಿಕ ಲೋಪಗಳನ್ನು ಸರಿಪಡಿಸಲು ಪ್ರತ್ಯೇಕ ಸೈಬರ್ ಹಾಗೂ ಐಟಿ ತಜ್ಞರ ತಂಡವನ್ನು ನಿಯೋಜಿಸಲಾಗುತ್ತಿದೆ. ಭ್ರಷ್ಟ ಅಧಿಕಾರಿಗಳು ಮತ್ತು ಶಿಕ್ಷಕರ ವಿರುದ್ಧದ ಈ ಕಾರ್ಯಚರಣೆ ಇಲ್ಲಿಗೆ ನಿಲ್ಲುವುದಿಲ್ಲ.”  ಎಂದಿದ್ದಾರೆ. 

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ʼಸೂಪರ್ ಎಲ್ ನಿನೊʼ ಅಬ್ಬರಕ್ಕೆ ಮಾರ್ಚ್‌ ವೇಳೆಗೆ ಭಾರತದಲ್ಲಿ 55 ಸಾವಿರ ಸಾವು? ಹೊಸ ಟ್ರ್ಯಾಕರ್ ವರದಿ!

ಎಲ್ ನಿನೊ ಹವಾಮಾನ ವಿದ್ಯಮಾನವು ಈ ವರ್ಷ ಜಗತ್ತಿನಾದ್ಯಂತ ತೀವ್ರ ಉಷ್ಣಾಂಶ...

2011ರ ‘ನೇಮಕಾತಿ ರಕ್ಷಣೆ ಕಾಯ್ದೆ’ ರದ್ದುಗೊಳಿಸಿದ ಸುಪ್ರೀಂ ಕೋರ್ಟ್; 362 ಕೆಎಎಸ್‌ ಅಧಿಕಾರಿಗಳ ಉದ್ಯೋಗಕ್ಕೆ ಕುತ್ತು!

2011ನೇ ಸಾಲಿನ ‘ಕರ್ನಾಟಕ ಆಡಳಿತ ಸೇವೆ’ (ಕೆಎಎಸ್) ನೇಮಕಾತಿ ಪ್ರಕ್ರಿಯೆಯನ್ನು ಊರ್ಜಿತಗೊಳಿಸಲು...

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಡಿಲೀಟ್: ಮೋದಿ ಸರ್ಕಾರದ ವಿರುದ್ಧ ಧ್ರುವ್ ರಾಠಿ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪೋಸ್ಟ್‌ಗಳನ್ನು ಮೋದಿ ಸರ್ಕಾರ ತೆಗೆದುಹಾಕಲಾಗುತ್ತಿದೆ ಎಂದು...

30 ದಿನ ಕಳೆದರೂ ʼRTIʼಗೆ ಉತ್ತರವಿಲ್ಲ; ECI ಮೇಲೊಂದು ಪ್ರಶ್ನಾರ್ಥಕ ಚಿಹ್ನೆ! 

'ಚುನಾವಣಾ ಆಯೋಗ ಏನು ಮುಚ್ಚಿಡಲು ಪ್ರಯತ್ನಿಸುತ್ತಿದೆ?' ಎಂಬ ಗಂಭೀರ ಅನುಮಾನ ಈಗ...