ಮನೆಯ ಮ್ಯೂಟೇಷನ್ ಮಾಡಿಕೊಡಲು ₹2.50 ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಮಂಗಳವಾರ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬೀದರ್ ತಾಲೂಕಿನ ಮರಕುಂದಾ ಗ್ರಾಮದ ಮಹಾದೇವ ಶಾಂತಪ್ಪ ಎಂಬುವವರು ತಮ್ಮ ಮನೆಯ ಮ್ಯೂಟೇಷನ್ ಮಾಡಿಕೊಡುವಂತೆ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದರು. ಮ್ಯುಟೇಷನ್‌ಗಾಗಿ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ ಹಾಗೂ ಅವರ ಸಹಚರ ಶರಣಯ್ಯ ಸ್ವಾಮಿ ಅವರು ₹5 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಲಂಚದ ಹಣ ನೀಡಲು ಇಚ್ಛಿಸದ ಮಹಾದೇವ ಅವರು ಬೀದರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಮರಕುಂದಾ ಗ್ರಾಮದ ಹೊರವಲಯದಲ್ಲಿರುವ ದಾಬಾವೊಂದರಲ್ಲಿ ಲಂಚದ ಹಣದ ₹2.5 ಲಕ್ಷ ನೀಡಲು ನಿರ್ಧರಿಸಲಾಗಿತ್ತು.
ಮಹಾದೇವ ಅವರಿಂದ ₹2.5 ಲಕ್ಷ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಮತ್ತು ಆತನ ಸಹಚರ ಶರಣಯ್ಯ ಇಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಬೀದರ್ | ಟನ್ ಕಬ್ಬಿಗೆ ₹2,950 ದರ ನೀಡಿ, ಕಬ್ಬಿನ ಬಿಲ್ ಶೀಘ್ರ ಪಾವತಿಸಿ : ರೈತರ ಆಗ್ರಹ
ಬೀದರ್ ಲೋಕಾಯುಕ್ತ ಡಿವೈಎಸ್ಪಿ ಹಣಮಂತರಾಯ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಲೋಕಾಯುಕ್ತ ಸಿಬ್ಬಂದಿ ಪಾಲ್ಗೊಂಡಿದ್ದರು.




