ಈದಿನ ವರದಿ ಫಲಶೃತಿ | ಬೀದರ್ ವಿವಿ: ಪಿಜಿ ತರಗತಿ ಪುನರಾರಂಭ ದಿನಾಂಕ ಮುಂದೂಡಿಕೆ

Date:

ಬೀದರ್ ವಿಶ್ವವಿದ್ಯಾಲಯದ ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ತರಗತಿಗಳ ಪುನರಾರಂಭ ದಿನಾಂಕವನ್ನು ವಿಶ್ವವಿದ್ಯಾಲಯ ಮುಂದೂಡಿದೆ.

- Advertisement -

ಸ್ನಾತಕೋತ್ತರ ಎಲ್ಲ ಕೋರ್ಸ್‌ಗಳ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳು ಪೂರ್ಣಗೊಳ್ಳುವ ಮುನ್ನವೇ ನವೆಂಬರ್ 11ರಿಂದ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ತರಗತಿಗಳನ್ನು ಪುನರಾರಂಭಿಸಲು ವಿಶ್ವವಿದ್ಯಾಲಯ ಈ ಹಿಂದೆ ಅಧಿಸೂಚನೆ ಹೊರಡಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಿ.ಡಿ. ಕೋಸಾಂಬಿ | ಜ್ಞಾನದ ಹಲವು ಜಗತ್ತುಗಳನ್ನು ಶೋಧಿಸಿದ...

ಡಿ.ಡಿ. ಕೋಸಾಂಬಿಯವರ ಬದುಕು ಕೇವಲ ಯಶಸ್ಸಿನ ಕಥೆಯಷ್ಟೇ ಅಲ್ಲ; ಅದು ಅಸಾಧಾರಣ ಪ್ರತಿಭೆ ಹಾಗೂ ಮನುಷ್ಯ ಸಹಜ ಭಾವನೆಗಳ ನಡುವಿನ ಸುಂದರ ಪಯಣ. ತಮಿಳು ಇತಿಹಾಸಕಾರ ಎ.ಆರ್. ವೆಂಕಟಾಚಲಪತಿ ಅವರಂತಹ ವಿಮರ್ಶಕರು ಈ...

ಒಂದು ಬದಿ ಅಧಿಕಾರ ನಿರಾಕರಣೆ, ಮತ್ತೊಂದು ಬದಿ ಕರ್ತವ್ಯದ...

ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯ ಆಯ್ದ ಭಾಗಗಳು ಕೇವಲ ರಾಜಕೀಯ ಇತಿಹಾಸದ ದಾಖಲೆಯಷ್ಟೇ ಅಲ್ಲ, ಬದಲಿಗೆ ಮನುಷ್ಯನ ಮನಸ್ಸಿನ ಆಳದ ಸಂವೇದನೆಗಳ ಕನ್ನಡಿ. ಅಧಿಕಾರ ಸಿಕ್ಕ ಕೂಡಲೇ ಅದನ್ನು ಬಾಚಿಕೊಳ್ಳಲು ಹಾತೊರೆಯುವ...

ಕಾಲಜ್ಞಾನ ಸಾರಿದ ಮಂಟೇದಲಿಂಗಯ್ಯ’: ನೀಲಗಾರರ ಸ್ವರವಚನಗಳಲ್ಲಿ ಅಡಗಿರುವ ಜನಪದ...

ಕಾಲದ ಬದಲಾವಣೆಯನ್ನು ಗ್ರಹಿಸುವ ಕಾಲಜ್ಞಾನ, ಎಲ್ಲರೊಳಗೂ ಬೆಳಗುವ ಪರಂಜ್ಯೋತಿಯ ತತ್ವ, ಕಪಟ ಧಾರ್ಮಿಕ ಆಚರಣೆಗಳನ್ನು ಪ್ರಶ್ನಿಸುವ ಮಂಟೇಸ್ವಾಮಿಯ ನಿಲುವು ಮತ್ತು ತಲೆಮಾರುಗಳಿಂದ ಈ ಮಹಾಕಾವ್ಯವನ್ನು ಜೀವಂತವಾಗಿಟ್ಟಿರುವ ನೀಲಗಾರರ ಗಾಯನ ಪರಂಪರೆ ತಂಬೂರಿಯ ನಾದ ಮೊಳಗುತ್ತದೆ....

ಈ ಕುರಿತು ʼಈದಿನ.ಕಾಮ್‌ʼನಲ್ಲಿ ‘ಬೀದರ್ ವಿವಿ | ಪರೀಕ್ಷೆಗೂ ಮುನ್ನವೇ ಮುಂದಿನ ಸೆಮಿಸ್ಟರ್ ತರಗತಿ ಪುನರಾರಂಭ?’ ಎಂಬ ಶೀರ್ಷಿಕೆಯಡಿ ನವೆಂಬರ್ 11ರಂದು ವಿಶೇಷ ವರದಿ ಪ್ರಕಟಿಸಲಾಗಿತ್ತು.

ವರದಿಗೆ ಸ್ಪಂದಿಸಿರುವ ವಿಶ್ವವಿದ್ಯಾಲಯವು ಇದೀಗ ಪಿಜಿ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ನವೆಂಬರ್ 26ರಿಂದ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ತರಗತಿಗಳನ್ನು ಪುನರಾರಂಭಿಸಲು ನಿರ್ಧರಿಸಿದೆ. ಈ ಸಂಬಂಧ ಮೌಲ್ಯಮಾಪನ ಕುಲಸಚಿವ ರಾಜಕುಮಾರ ಪಾಟೀಲ್ ಅವರು ನವೆಂಬರ್ 12ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದಾರೆ.

ಪಿಜಿಯ ಎಲ್ಲ ಕೋರ್ಸ್‌ಗಳ ಪರೀಕ್ಷೆಗಳು ನವೆಂಬರ್ 12ರಿಂದ ಆರಂಭವಾಗಿವೆ. ಆದರೆ, ಪರೀಕ್ಷೆಗಳು ಆರಂಭವಾಗುವ ಒಂದು ದಿನ ಮುಂಚಿತವಾಗಿ, ಅಂದರೆ ನವೆಂಬರ್ 11ರಿಂದಲೇ ಮುಂದಿನ ಸೆಮಿಸ್ಟರ್ ತರಗತಿಗಳನ್ನು ಪ್ರಾರಂಭಿಸುವಂತೆ ವಿಶ್ವವಿದ್ಯಾಲಯ ಅಧಿಸೂಚನೆ ಹೊರಡಿಸಿದ್ದು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.

WhatsApp Image 2026 11 14 at 5.17.48 PM
ಪರಿಷ್ಕೃತ ಅಧಿಸೂಚನೆ

ಒಂದೆಡೆ ಹಿಂದಿನ ಸೆಮಿಸ್ಟರ್ ಪರೀಕ್ಷೆ ಬರೆಯಬೇಕೇ ಅಥವಾ ಮುಂದಿನ ಸೆಮಿಸ್ಟರ್ ತರಗತಿಗಳಿಗೆ ಹಾಜರಾಗಬೇಕೇ ಎಂಬ ಗೊಂದಲ ವಿದ್ಯಾರ್ಥಿಗಳನ್ನು ಕಾಡಿದ್ದರೆ, ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ತರಗತಿಗಳನ್ನು ಆರಂಭಿಸಿದರೆ ವಿದ್ಯಾರ್ಥಿಗಳ ಹಾಜರಾತಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಪ್ರಾಧ್ಯಾಪಕರನ್ನು ಕಾಡುತ್ತಿತ್ತು.

ಕೊನೆಗೂ ವಿಶ್ವವಿದ್ಯಾಲಯವು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ, ಪರೀಕ್ಷೆಗಳು ಮುಗಿದ ಬಳಿಕ ತರಗತಿಗಳನ್ನು ಆರಂಭಿಸಲು ನಿರ್ಧರಿಸಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಕೊಂಚ ನಿರಾಳರಾಗಿದ್ದಾರೆ.

ಇದನ್ನೂ ಓದಿ : ಬೀದರ್‌ | ಕೆಕೆಆರ್‌ಟಿಸಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಚಂದ್ರಕಾಂತ ಹಿಪ್ಪಳಗಾಂವ

WhatsApp Image 2026 11 13 at 8.18.17 PM 1
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪ್ಪಳಿಸಲಿದೆ ಚಂಡಮಾರುತ; ರಾಜ್ಯದ 13 ಜಿಲ್ಲೆಗಳಲ್ಲಿ ನ.19ರವರೆಗೆ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳ ಕೊಲ್ಲಿಯಲ್ಲಿ 'ಅರ್ನಾಬ್ ಮುರಸು' ಚಂಡಮಾರುತದ ಅಬ್ಬರ ತಣ್ಣಗಾದ ಬೆನ್ನಲ್ಲೇ ಇದೀಗ...

ಕಾಲಜ್ಞಾನ ಸಾರಿದ ಮಂಟೇದಲಿಂಗಯ್ಯ’: ನೀಲಗಾರರ ಸ್ವರವಚನಗಳಲ್ಲಿ ಅಡಗಿರುವ ಜನಪದ ತತ್ವ

ಕಾಲದ ಬದಲಾವಣೆಯನ್ನು ಗ್ರಹಿಸುವ ಕಾಲಜ್ಞಾನ, ಎಲ್ಲರೊಳಗೂ ಬೆಳಗುವ ಪರಂಜ್ಯೋತಿಯ ತತ್ವ, ಕಪಟ...

ಉತ್ತರ ಕನ್ನಡ | ಕರಾವಳಿ ಭದ್ರತೆಗೆ ‘ಸೀ ವಿಜಿಲ್-2026’ ಸಮರಾಭ್ಯಾಸ

ಕರಾವಳಿ ಪ್ರದೇಶದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ನೌಕಾಪಡೆಯು...