ಶಿವಮೊಗ್ಗ | ಚಿನ್ನಕ್ಕೆ ತುಕ್ಕು ಹಿಡಿಯುವ ಕಾಲ ಬಂದಿದೆ: ಮಹಮ್ಮದ್ ಕುಂಞಿ

Date:

ಚಿನ್ನದಂತಹ ಮನಸ್ಸು ಹೊಂದಿದ್ದ ಭಾರತೀಯರು ಇಂದು ಪರಸ್ಪರ ಜನಾಂಗ ದ್ವೇಷ ಮಾಡುವ ಸ್ಥಿತಿ ತಲುಪಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿ ಚಿನ್ನಕ್ಕೆ ತುಕ್ಕು ಹಿಡಿಯುವ ಕಾಲ ಬಂದಿದೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಹೇಳಿದರು.

ಶಿವಮೊಗ್ಗದ ಸದ್ಭಾವನಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಂದು ಕುಟುಂಬ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ, ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಹಾಕಲಾಗುತ್ತದೆ, ತಂದೆ ತಾಯಿಗಳ ಶವ ಸಂಸ್ಕಾರಕ್ಕೆ ಕೂಡ ಮಕ್ಕಳು ಬರುತ್ತಿಲ್ಲ. ಮನುಷ್ಯರಲ್ಲಿ ಮನುಷ್ಯತ್ವ ಮರೆಯಾಗಿದೆ” ಎಂದು ವಿಷಾದಿಸಿದರು.

- Advertisement -

“ನಾವು ನಮ್ಮೊಳಗೆ ಮನುಷ್ಯತ್ವ ತುಂಬಿಕೊಂಡಿದ್ದರೆ ಯಾರು ಏನು ಮಾಡಲು ಸಾಧ್ಯವಿಲ್ಲ, ಏಕೆಂದರೆ ಮನುಷ್ಯತ್ವದ ಗುಣ ಇದ್ದವರನ್ನು ಯಾರು ಏನು ಮಾಡಲು ಸಾಧ್ಯವಿಲ್ಲ, ಅದು ನಮ್ಮನ್ನು ಕಾಪಾಡುತ್ತದೆ. ಮನುಷ್ಯರನ್ನು ಒಂದುಗೂಡಿಸಲು ಹಿಂದಿನವರು ಧರ್ಮ ಅನುಸರಿಸಿದರು. ಜನರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು, ನಾವು ನಮ್ಮ ಅನುಪಸ್ಥಿತಿಯಲ್ಲಿಯೂ ಜನರ ನಮ್ಮನ್ನು ನೆನೆಯುವಂತೆ ಬದುಕಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಾಲಜ್ಞಾನ ಸಾರಿದ ಮಂಟೇದಲಿಂಗಯ್ಯ’: ನೀಲಗಾರರ ಸ್ವರವಚನಗಳಲ್ಲಿ ಅಡಗಿರುವ ಜನಪದ...

ಕಾಲದ ಬದಲಾವಣೆಯನ್ನು ಗ್ರಹಿಸುವ ಕಾಲಜ್ಞಾನ, ಎಲ್ಲರೊಳಗೂ ಬೆಳಗುವ ಪರಂಜ್ಯೋತಿಯ ತತ್ವ, ಕಪಟ ಧಾರ್ಮಿಕ ಆಚರಣೆಗಳನ್ನು ಪ್ರಶ್ನಿಸುವ ಮಂಟೇಸ್ವಾಮಿಯ ನಿಲುವು ಮತ್ತು ತಲೆಮಾರುಗಳಿಂದ ಈ ಮಹಾಕಾವ್ಯವನ್ನು ಜೀವಂತವಾಗಿಟ್ಟಿರುವ ನೀಲಗಾರರ ಗಾಯನ ಪರಂಪರೆ ತಂಬೂರಿಯ ನಾದ ಮೊಳಗುತ್ತದೆ....

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ...

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ ಬಹಳವಾಗಿ ಪ್ರಭಾವಿಸಿದವು. ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿ, ಒಬ್ಬ ವಿಧವೆಯಾಗಿ, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಧಾರ್ಮಿಕ ಹಿನ್ನೆಲೆಯ ಮಹಿಳೆಯಾಗಿ ಮತ್ತು ವಿದೇಶಿ...

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸದ್ಭಾವನಾ ವೇದಿಕೆ ಅಧ್ಯಕ್ಷ ಅಶೋಕ್ ಗಾಂಧಿ ಬಸಪ್ಪ ಮಾತನಾಡಿ, “ನಮ್ಮ ವೇದಿಕೆ ಜನರನ್ನು ಐಕ್ಯತೆ ಗೊಳಿಸಲು ಅನೇಕ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅನೇಕ ಕೋಮು ಸೌಹಾರ್ದ ಕಾರ್ಯಕ್ರಮ ಏರ್ಪಡಿಸಿದ್ದು ಮಸೀದಿಯನ್ನು ನೋಡಲು ಹಿಂದೂಗಳಿಗೆ ಆಹ್ವಾನ ಕಾರ್ಯಕ್ರಮ ಅರ್ಥ ಪೂರ್ಣವಾಗಿ ಆಚರಿಸಿದ್ದೇವೆ” ಎಂದು ಹೇಳಿದರು.

ಪ್ರೊ. ರಾಚಪ್ಪ ಮಾತನಾಡಿ, “ಸದ್ಭಾವನೆ, ಭಾವೈಕ್ಯತೆ ಭಾರತದಲ್ಲಿ ಬಹಳ ಕಡಿಮೆ ಇದೆ. ಬುದ್ದ, ಗಾಂಧಿ ಮಾತ್ರ ಭಾರತದಲ್ಲಿ ಭಾವೈಕ್ಯತೆ ಶಾಂತಿ ಹರಡಲು ಪ್ರಯತ್ನಿಸಿದರು. 1992ರಲ್ಲಿ ಬಾಬರಿ ಮಸೀದಿ ಉರುಳಿಸಿದ ಮೇಲೆ ನಮ್ಮ ಭಾವೈಕ್ಯತೆಗೆ ಬಹಳ ದೊಡ್ಡ ಪೆಟ್ಟು ಬಿದ್ದಿತು.ಇತಿಹಾಸದಲ್ಲಿ ಧರ್ಮದ ಕಾರಣಕ್ಕೆ ಯಾವ ಯುದ್ಧವು ನಡೆಯಲಿಲ್ಲ, ಹಿಂದೂ ರಾಜರಾದ ಪೇಶ್ವೆಗಳು ಶೃಂಗೇರಿ ಮೇಲೆ ದಾಳಿಮಾಡಿ ದೋಚಿದರು. ಅವರ ಉದ್ದೇಶ ಹಣ ಲೂಟಿ ಮಾಡುವುದು ಆಗಿತ್ತೇ ಹೊರತು ಧರ್ಮದ ಉದ್ದೇಶ ಇರಲಿಲ್ಲ” ಎಂದರು.

ಕಾರ್ಯಕ್ರಮದಲ್ಲಿ ಸದ್ಭಾವನ ವೇದಿಕೆ ಗೌರವ ಅಧ್ಯಕ್ಷರಾದ ಅಬ್ದುಲ್ ಮುಜೀಬ್, ಜಮಾತೆ ಇಸ್ಲಾಂ ಅಧ್ಯಕ್ಷರಾದ ವಹಾಬ್, ಉಪಸ್ಥಿತರಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಮಹಮ್ಮದ್ ಇಲಿಯಾಸ್, ಪ್ರಾರ್ಥನೆ ಯನ್ನು ಕುಮಾರಿ ಸೌಪೀಯ, ಹಾಗೂ ಸ್ವಾಗತವನ್ನು ಕಾಂತೇಶ್ ಕದರ ಮಂಡಲಗಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಅನೇಕ ಸಾದಕಿಯರಿಗೆ ಸನ್ಮಾನಿಸಲಾಯಿತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ನಾಳೆ ಕೆಪಿಎಸ್‌ಸಿ ಪರೀಕ್ಷೆ; 4 ಕೇಂದ್ರಗಳಲ್ಲಿ 1,970 ಅಭ್ಯರ್ಥಿಗಳು ಭಾಗಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ನವೆಂಬರ್ 15ರಂದು ನಡೆಯಲಿರುವ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ಸ್...

ಮಕ್ಕಳಲ್ಲಿ ಕಾವ್ಯಾಸಕ್ತಿ ಮೂಡಿಸುತ್ತಿದೆ ‘ಯುವ ಬೆಂಗಳೂರು’: ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ

ಕನ್ನಡವು ವಿಶಾಲವಾದ ಭಾಷೆಯಾಗಿದೆ. ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ...

ಕರ್ನಾಟಕ SIR | ಮುಸ್ಲಿಂ ಶಾಸಕರಿರುವ 10 ಕ್ಷೇತ್ರಗಳಲ್ಲಿ 27.59% ಮತದಾರರು ಡಿಲೀಟ್‌!

ರಾಜ್ಯದಲ್ಲಿ ನಡೆದ ಎಸ್‌ಐಆರ್‌ ಪ್ರಕ್ರಿಯೆಯ ವೇಳೆ, ಮುಸ್ಲಿಂ ಶಾಸಕರು ಪ್ರತಿನಿಧಿಸುವ 10...

2027 ಯುಪಿ ಚುನಾವಣೆ | ಬಿಟ್ಟುಹೋದ 40-80 ಲಕ್ಷ ಹಿಂದೂ ಮತದಾರರನ್ನೇ ಸೇರಿಸಲು ಯೋಗಿ ಸರ್ಕಾರದ ‘ಅಂತಿಮ್ ಮೌಕಾ’ ಅಭಿಯಾನ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಮತದಾರರ ಪಟ್ಟಿ...