ಹುಲಸೂರ | ಸೌಹಾರ್ದತೆ, ಸಹಿಷ್ಣುತೆ ಲೋಕದ ಚಾಲಕ ಶಕ್ತಿಗಳು : ತಹಸೀಲ್ದಾರ್ ಶಿವಾನಂದ ಮೇತ್ರೆ

Date:

ಬಹುತ್ವ ಹಾಗೂ ಬಹುಸಂಸ್ಕೃತಿಯ ನಮ್ಮ ದೇಶದ ನಾಡಿಮಿಡಿತಗಳು. ಸಾಮಾಜಿಕ ಸೌಹಾರ್ದತೆ ಹಾಗೂ ಧಾರ್ಮಿಕ ಸಹಿಷ್ಣುತೆ ಇಡೀ ಲೋಕದ ಚಾಲಕ ಶಕ್ತಿಗಳಾವೆ ಎಂದು ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.

- Advertisement -

‌ಹುಲಸೂರ ತಾಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ಧೂಳಪ್ಪ ಭರಮಶೆಟ್ಟೆ ಅವರ ತೋಟದಲ್ಲಿ ಎಳ್ಳ ಅಮಾವಾಸ್ಯೆ ಪ್ರಯುಕ್ತ ಬಸವಕಲ್ಯಾಣದ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ರಂಗಭೂಮಿ, ಸಮಾಜ ಮತ್ತು ರಾಜಕಾರಣ’ ಕುರಿತ ಪ್ರತಿಷ್ಠಾನದ 95ನೇ ಉಪನ್ಯಾಸ ಸಮಾರಂಭವನ್ನು ಸಾಹಿತ್ಯ ಕೃತಿಗಳು ಓದುಗರಿಗೆ ನೀಡಿ, ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಮಾನವೀಯತೆ ಎಲ್ಲವನ್ನೂ ಮೀರಿದ ತತ್ವವಾಗಿದೆ ಮತ್ತು ಸತ್ವವೂ ಆಗಿದೆʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಪತ್ರಕರ್ತ ಮಾಣಿಕ ಭುರೆ ಮಾತನಾಡಿ, ಪ್ರತಿಯೊಂದು ಪ್ರಭುತ್ವಗಳು ಸೈದ್ಧಾಂತಿಕ ವಿಚಾರಗಳಿಗೆ ಬದ್ಧವಾಗಿರುತ್ತವೆ. ಜನಪರ ಚಿಂತನೆ ಮತ್ತು ಪ್ರಗತಿಪರತೆಯ ವಿವೇಚನೆಗಳು ಮನುಷ್ಯ ಲೋಕವನ್ನು ಹೆಚ್ಚು ಎಚ್ಚರದಿಂದ ಇಟ್ಟಿವೆ. ಭಾವನಾತ್ಮಕ ಸಂಗತಿಗಳಿಗಿಂತ ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆಗೆ ಅಧಿಕಾರ ಕೇಂದ್ರಗಳು ಆದ್ಯತೆ ಕೊಡಬೇಕು. ಆ ಮುಖಾಂತರ ಸಾಮಾಜಿಕ ಏಳಿಗೆ ಸಾಧ್ಯʼ ಎಂದರು.

ಕಲಬುರಗಿಯ ರಂಗಕರ್ಮಿ ಉಮೇಶ ಪಾಟೀಲ ಮಾತನಾಡಿ, ʼಸಮಾಜದ ಸಂಕೀರ್ಣತೆಗಳು, ಸಮಕಾಲೀನ ಸಂದಿಗ್ಧತೆಗಳು, ಮನುಷ್ಯನ ಆತಂಕಗಳು ರಂಗಭೂಮಿ ತನ್ನ ಪ್ರದರ್ಶನದ ಸ್ವರೂಪದಲ್ಲಿ ಅನಾವರಣ ಮಾಡುತ್ತ ಬಂದಿದೆ. ಎಲ್ಲ ಕಾಲಕ್ಕೂ ಕಾಡಿದ ಕಾಮ, ಸಂಪತ್ತು ಮತ್ತು ಅಧಿಕಾರದ ದಾಹ, ಅಧಿಕಾರದ ಬೆನ್ನಟ್ಟಿ ನಡೆಸಿದ ಹಿಂಸೆ, ಕ್ರೌರ್ಯ, ಮಹಿಳೆಯರ ಮತ್ತು ದುರ್ಬಲರ ಅಸಹಾಯಕತೆ ಇಂಥ ಹಲವು ಸಂಗತಿಗಳ ಬಗೆಗೆ ರಂಗಭೂಮಿ ನಿರಂತರ ಮಾತನಾಡುತ್ತ ಬಂದಿದೆʼ ಎಂದರು.

ಬಸವಕಲ್ಯಾಣದ ಐಡಿಯಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುಜಾಹಿದ್ ಪಾಶಾ ಖುರೇಷಿ ಮಾತನಾಡಿ, ʼನಾಟಕ ಮತ್ತು ರಂಗಭೂಮಿ ಸಮಾಜವನ್ನು ಜಾಗ್ರತವಾಗಿಡುವ ಕಲಾ ಮಾಧ್ಯಮವಾಗಿವೆ. ಎದೆಯಿಂದ ಎದೆಗೆ ಮಾನವೀಯತೆಯ ಸೇತುವೆ ಕಟ್ಟುವ ಕಲೆ ಎಲ್ಲಾ ಕಾಲಕ್ಕೂ ಜೀವಂತವಾಗಿರುತ್ತದೆʼ ಎಂದರು.

WhatsApp Image 2025 12 19 at 10.21.02 PM
ಎಳ್ಳ ಅಮವಾಸ್ಯೆ ಅಂಗವಾಗಿ ಹೊಲದಲ್ಲಿ ಭಜ್ಜಿ, ರೊಟ್ಟಿ ಸವಿದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿ, ʼಈ ಕಾಲಕ್ಕೆ ರಾಜಕಾರಣದ ಪರಿಭಾಷೆ ಬದಲಾಗಿದೆ. ತತ್ವ ಸಿದ್ಧಾಂತಗಳ ಬದ್ಧತೆಗಿಂತ ಅಧಿಕಾರದ ಆಮಿಷ ಹೆಚ್ಚಾಗಿದೆ. ಭಾವನಾತ್ಮಕ ಸಂಗತಿಗಳೇ ಆಗಲಿ, ಸಂವೇದನೆ ರಹಿತ ಸಂಗತಿಗಳೇ, ಜಾತಿ, ಧರ್ಮದಂಥ ಸಂಗತಿಗಳೇ ಆಗಲಿ ರಾಜಕೀಯ ಅಧಿಕಾರದ ಪರಿಕರಗಳಾಗಿ ಬಳಕೆಯಾಗುತ್ತಿವೆʼ ಎಂದರು.

ಬಸವಕಲ್ಯಾಣ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಮನುಷ್ಯನ ಬಿಕ್ಕಟ್ಟಿನ ಸಂದರ್ಭದಲ್ಲಿ ಸೃಜನಶೀಲತೆ ಸದಾ ಹೊಸ ದಾರಿ ತೋರುತ್ತ ಬಂದಿದೆ. ಸಾಹಿತ್ಯ, ನಾಟಕ, ರಂಗಭೂಮಿ , ಸಿನಿಮಾಗಳು ಪ್ರಭುತ್ವ, ಲೋಕವನ್ನು ನಿರಂತರ ವಿಮರ್ಶಿಸುತ್ತ ಬಂದಿವೆ. ಗ್ರೀಕ್ ನಾಟಕಗಳಿಂದ ಕನ್ನಡದ ರಂಗಭೂಮಿಯವರೆಗೆ ಎಲ್ಲಾ ಕಾಲದಲ್ಲಿಯೂ ನಾಟಕ ಮತ್ತು ರಂಗಭೂಮಿ ಪ್ರಜ್ಞೆಯಾಗಿ ಮನುಷ್ಯನೊಟ್ಟಿಗೆ ಇದೆʼ ಎಂದರು.

ಮುಖಂಡ ವಿಜಯಕುಮಾರ ಪಾಟೀಲ ಶಿವಪುರ, ಪತ್ರಕರ್ತ ಬಸವಕುಮಾರ ಕವಟೆ ಮಾತನಾಡಿದರು. ರಂಗಕರ್ಮಿ ಉಮೇಶ ಪಾಟೀಲ ಅವರು ತಾವು ಬರೆದ ‘ಟ್ಯಾಬ್ಲೆಟ್’ ನಾಟಕದ ವಾಚಸಿ, ಏಕಪಾತ್ರಾಭಿನಯಲ್ಲಿ ಅಭಿನಯಿಸಿದ್ದು ಗಮನ ಸೆಳೆಯಿತು.

ಇದನ್ನೂ ಓದಿ : ಬೀದರ್‌ | ದ್ವಿಚಕ್ರ ವಾಹನಕ್ಕೆ ಕೆಕೆಆರ್‌ಟಿಸಿ ಬಸ್‌ ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು

ಪತ್ರಕರ್ತ ನಾಗಪ್ಪ ನಿಣ್ಣೆ, ಶಿಕ್ಷಕ ಎಂಡಿ. ಅಲ್ತಾಫ್, ಧೂಳಪ್ಪ ಭರಮಶೆಟ್ಟೆ, ದತ್ತಾತ್ರಿ ರಾಘೋ, ಕಂಟೆಪ್ಪ ಮೇತ್ರೆ, ಸತೀಶ್ ಹಿರೇಮಠ, ಬಸವರಾಜ ಬಿರಾದಾರ ಖಂಡಾಳ, ಪ್ರಭಾಕರ ನೌಗಿರೆ, ಡಾ. ಪ್ರವೀಣ ದಸ್ತಾಪುರೆ, ಅಂಬರೀಶ್ ಮಹಾಲಿಂಗ, ಕಾಶಿನಾಥ ಬಿರಾದಾರ, ಜಗನ್ನಾಥ ಭೋಪಳೆ, ಸಿದ್ರಾಮ ಕಾವಳೆ, ನಾಗಪ್ಪ ನಿಣ್ಣೆ, ದಯಾನಂದ ಭರಮಶೆಟ್ಟೆ, ಸಿದ್ದರಾಮ ಖ್ಯಾಡೆ ಮೊದಲಾದವರಿದ್ದರು. ಪ್ರತಿಷ್ಠಾನದ ನಿರ್ದೇಶಕ ಡಾ.ಶಿವಾಜಿ ಮೇತ್ರೆ ಸ್ವಾಗತಿಸಿದರು. ಗಂಗಾಧರ ಸಾಲಿಮಠ ನಿರೂಪಿಸಿ, ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಶಿಕ್ಷಕರು ಸಮಾಜದ ಭವಿಷ್ಯ ನಿರ್ಮಿಸುವ ಶಿಲ್ಪಿಗಳು: ಪುಣ್ಯವತಿ ವಿಸಾಜಿ

ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಜೊತೆಗೆ ಸಮಾಜದ...

ಬೀದರ್‌ | ಅಂಬೇಡ್ಕರ್ ಚಿಂತನೆ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನವಾಗಲಿ: ಸಿದ್ರಾಮ ಸಿಂಧೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಸಾಧನೆ ಹಾಗೂ ಬರಹಗಳನ್ನು ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ...

Bhalki Ground Report | ಮುಸ್ಲಿಮರ ಮತ ಹಕ್ಕಿಗೆ ಕನ್ನ: ಬಗೆದಷ್ಟು ಬಯಲಾಗ್ತಿದೆ ‘ಫಾರ್ಮ್-7’ರ ಸಂಚು?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಬಿ.ಖಂಡ್ರೆ ಅವರು ಪ್ರತಿನಿಧಿಸುವ...

ಹುಲಸೂರ | ಮುಚಳಂಬ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಆಗ್ರಹ

ಹುಲಸೂರ ತಾಲೂಕಿನ ಮುಚಳಂಬ ಗ್ರಾಮದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತ ಬಸ್ ತಂಗುದಾಣ...