ಭಗವಾನ್ ಬುದ್ಧರ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಶಿವಾನಂದ ಮೇತ್ರೆ ಅವರು ಅಭಿಪ್ರಾಯಪಟ್ಟರು.
ಹುಲಸೂರ ಪಟ್ಟಣದ ತಹಸೀಲ್ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಭಗವಾನ್ ಬುದ್ಧರ ಜಯಂತಿ ಆಚರಣೆಯಲ್ಲಿ ಭಗವಾನ್ ಬುದ್ಧರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿ ಅವರು ಮಾತನಾಡಿದರು.
ಬುದ್ಧರು ಇಡೀ ಜಗತ್ತಿಗೆ ಶಾಂತಿ, ಕರುಣೆ ಹಾಗೂ ಸಹಬಾಳ್ವೆ ಸಂದೇಶ ನೀಡಿ ಜಗಕ್ಕೆ ಬೆಳಕಾದವರು. ಅವರ ವಿಚಾರಧಾರೆಗಳನ್ನು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಬುದ್ಧರ ಚಿಂತನೆ ಅಗತ್ಯ. ಸರ್ಕಾರದಿಂದ ಗೌತಮ ಬುದ್ಧರ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಚಾರʼ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗಳಾದ ರಾಜಕುಮಾರ ಅವಂತಿ, ಶ್ರೀಧರ ಬಲ್ಲೂರೆ, ಅಮಿತ್ ಪಲಾಪುರೆ, ನಾಗರಾಜ ವಂದನೂರು, ಅಜಯ, ರಾಸುರೆ, ಗಿರೀಶ ಮೆಹಕರೆ ಸೇರಿದಂತೆ ಸಮಾಜದ ಮುಖಂಡರಾದ ರಾಜಕುಮಾರ, ವಿದ್ಯಾಸಾಗರ ಬನ್ಸೂಡೆ, ಭಗವಂತ ಜಾನಬಾ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕದಲ್ಲಿ ಹೊಸ 6 ಜಿಲ್ಲೆ, 12 ತಾಲೂಕು ರಚನೆಗೆ ಒತ್ತಾಯ




