ಬೀದರ್‌ | ಸಾರ್ವತ್ರಿಕ ಶಿಕ್ಷಣದಿಂದ ಸಾಮಾಜಿಕ ಬಿಕ್ಕಟ್ಟಿಗೆ ಪರಿಹಾರ: ಶಿವಾನಂದ ಮೇತ್ರೆ

Date:

ಸಾರ್ವತ್ರಿಕ ಶಿಕ್ಷಣ ಸರಿಯಾದ ಅನುಷ್ಠಾನದಿಂದ ನಮ್ಮ ದೇಶದ ಸಾಮಾಜಿಕ, ಆರ್ಥಿಕವಾಗಿ ಸಂವರ್ಧನೆ ಸಾಧ್ಯವಾಗುತ್ತದೆ. ಎಲ್ಲರಿಗೂ ಶಿಕ್ಷಣ ದೊರೆತರೆ ಸಾಮಾಜಿಕ ಬಿಕ್ಕಟ್ಟುಗಳಿಂದ ಪಾರಾಗಬಹುದು ಎಂದು  ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.
ಹುಲಸೂರು ತಾಲೂಕಿನ ಗಡಿಗೌಂಡಗಾಂವನ ಧೂಳಪ್ಪಾ ಭರಮಶಟ್ಟೆ ಅವರ ತೋಟದ ಮನೆಯಲ್ಲಿ ಎಳ್ಳ ಅಮಾವಾಸ್ಯೆ ನಿಮಿತ್ತ  ಬಸವಕಲ್ಯಾಣದ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ಇಂದಿನ ಶಿಕ್ಷಣದ ಬಿಕ್ಕಟ್ಟುಗಳು’ ಕುರಿತ ಪ್ರತಿಷ್ಠಾನದ 76ನೇ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಶಿಕ್ಷಣ ನೌಕರಿಗಷ್ಟೇ  ಸೀಮಿತ ಬೇಡ. ಬದುಕಿನುದ್ದಕ್ಕೂ ಧನಾತ್ಮಕ ಚಿಂತನೆ ಬೆಳೆಸಲಿ, ಶತಮಾನಗಳಿಂದ ಅಕ್ಷರ ವಂಚಿತ  ಸಮುದಾಯಗಳಿಗೆ ಬಸವಣ್ಣನವರು ಪ್ರಧಾನ ಧಾರೆಗೆ ತಂದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಾರ್ವತ್ರಿಕ ಶಿಕ್ಷಣ ಜಾರಿಗೊಳಿಸಿದರು. ಇದು ಶಿಕ್ಷಣಕ್ಕಾಗಿ ಸಾಮಾಜಿಕ ಬಿಕ್ಕಟ್ಟು ನೀಗಿಸಿತು. ಸಾರ್ವತ್ರಿಕ ಶಿಕ್ಷಣದಿಂದ ಆರ್ಥಿಕವಾಗಿ ದುರ್ಬಲರಿದ್ದವರಿಗೆ ವಿದ್ಯ ತಲುಪಿತು” ಎಂದರು.
ಬಸವಕಲ್ಯಾಣ ತಾಂತ್ರಿಕ ಕಾಲೇಜು ರೆಜಿಸ್ಟ್ರರ್ ಪ್ರೇಮಸಾಗರ ಪಾಟೀಲ ಮಾತನಾಡಿ, “ಶಿಕ್ಷಣ ವ್ಯವಸ್ಥೆಯಲ್ಲಿನ ಕೆಲವು ತಾಂತ್ರಿಕ ಸಂಗತಿಗಳು ಎಲ್ಲರಿಗೂ ಗೊತ್ತಾದರೆ ಭಾಗಶಃ ಶೈಕ್ಷಣಿಕ ಬಿಕ್ಕಟ್ಟು ಬಗೆಹರಿಯಬಹುದು. ತಾಂತ್ರಿಕ ಶಿಕ್ಷಣದಲ್ಲಿ ಕಾಶ್ಮೀರ, ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಶೇ 5 ರಷ್ಟು ಹಾಗೂ 371(ಜೆ) ಅಡಿಯಲ್ಲಿ ಬರುವವರಿಗೆ ಶೇ 8ರಷ್ಟು ಮೀಸಲಾತಿ ಇಡೀ ದೇಶದಲ್ಲಿದೆ. ಎಲ್ಲರೂ ಕಡ್ಡಾಯವಾಗಿ ಕೌಶಲ್ಯಾಧಾರಿತ ಶಿಕ್ಷಣ ಪಡೆದರೆ ಆರ್ಥಿಕತೆ ಸುಧಾರಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಹುಲಸೂರು ಕಸಾಪ ಅಧ್ಯಕ್ಷ ನಾಗರಾಜ ಹಾವಣ್ಣ ಮಾತನಾಡಿ, “ಶಿಕ್ಷಣ ಖಾಸಗೀಕರಣಗೊಂಡು ತುಟ್ಟಿಯಾಗಿದೆ. ಅಂಚಿನ ಕೊನೆಯವರೆಗೆ, ಆರ್ಥಿಕವಾಗಿ ದುರ್ಬಲರಿಗೆ ವೈದ್ಯಕೀಯ ಶಿಕ್ಷಣ ಮುಟ್ಟುವುದು ಕಷ್ಟ. ಬಹುಸಂಸ್ಕೃತಿಯ ದೇಶದಲ್ಲಿ ಪಠ್ಯಕ್ರಮದ ರಚನೆಯ ಸಂದರ್ಭದಲ್ಲಿ ಪ್ರಾದೇಶಿಕತೆಗೆ ಮಹತ್ವ ನೀಡಬೇಕು” ಎಂದರು.
ಉಪನ್ಯಾಸಕ ಶ್ರೀನಿವಾಸ ಉಮಾಪುರೆ ಮಾತನಾಡಿ, “ಶಿಕ್ಷಣ ಕ್ಷೇತ್ರದಲ್ಲಿ ಹಲವು ನ್ಯೂನತೆಗಳಿವೆ. ಆರ್ಥಿಕ ಅಭಾವ, ಅಧ್ಯಾಪಕರ ನೇಮಕಾತಿಯಲ್ಲಿ ವಿಳಂಬ, ಅಧ್ಯಾಪಕರ ವಿದ್ಯಾರ್ಥಿಗಳ ಅನಾಸಕ್ತಿ ಬಿಕ್ಕಟ್ಟುಗಳಾಗಿವೆ. ಸೆಮಿಸ್ಟರ್ ಪದ್ದತಿಯಲ್ಲಿ ವಿದ್ಯಾರ್ಥಿಗಳಲ್ಲಿ ಸಹ ಸಂಬಂಧದ ಓದು ಕುಂಠಿತವಾಗಿದೆ. ಶಿಕ್ಷಣವಿಲ್ಲದೆ ಜೀವನವಿಲ್ಲ. ಕೋವಿಡ್ ಕಾಲಘಟ್ಟದಲ್ಲಿ ಸೃಷ್ಟಿಯಾದ ಬಿಕ್ಕಟ್ಟಿನಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಿನ್ನೆಡೆಯಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.
ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, “ಎಲ್ಲ ಜ್ಞಾನ ಶಾಖೆಗಳಿಗೆ ಮುಕ್ತವಾಗಿ ತೆರೆದುಕೊಳ್ಳುವ ಮನೋವೃತ್ತಿ ಬಂದಾಗಲೇ ಬಹುತೇಕ ಬಿಕ್ಕಟ್ಟುಗಳಿಂದ ಬಿಡುಗಡೆ ಸಾದ್ಯ. ಶಿಕ್ಷಣ ಮಾನವೀಯಗೊಳಿಸಬೇಕು ಹೊರತು ಆಳುವವರ ಅಗತ್ಯ ಪೂರೈಸುವ ಮಾಧ್ಯಮವಾಗಬಾರದು. ಆಳುವ ವರ್ಗಕ್ಕೆ ಬಿಕ್ಕಟ್ಟಿಲ್ಲ. ಮಧ್ಯಮವರ್ಗ, ಮಹಿಳೆಯರು, ದುಡಿವ ವರ್ಗದವರು ಬಿಕ್ಕಟ್ಟು ಎದುರಿಸುತ್ತಿವೆ. ಜ್ಞಾನಕ್ಕೂ, ಸಮಾಜಕ್ಕೂ, ಕೈ ಕೆಲಸಕ್ಕೂ, ಆರ್ಥಿಕತೆಗೂ ಶಿಕ್ಷಣದ ಜೊತೆಗೆ ಸಂಬಂಧವಿರಬೇಕು. ಅಮಾನವೀಯ ತಿಳುವಳಿಕೆ ಕುಗ್ಗಿಸುವ, ಡೆಮಾಕ್ರಟಿಕ್ ವಿಚಾರಗಳು, ವಿವೇಚನೆಗಳು  ಬೆಳೆಸುವ, ವೈಚಾರಿಕ ನಿಲುಗಳು ಮೂಡಿಸುವ ವಿದ್ಯಾಕೇಂದ್ರಗಳ ಅಗತ್ಯವಿದೆ. ಏನನ್ನೂ ಓದಬೇಕು. ಏಕೆ ಓದಬೇಕು. ಓದಿದ ಮೇಲೆ ಏನು ಮಾಡಬೇಕು ಅನ್ನುವುದೇ ಗೊತ್ತಾಗದ ಬಿಕ್ಕಟ್ಟು ಇಂದ ನಿರ್ಮಾಣಗೊಂಡಿದೆ. ಸೆಮಿಸ್ಟರ್ ಪದ್ದತಿ ಹಲವು ಅಧ್ಯಾಪಕರ ಮತ್ತು ಮಕ್ಕಳ ಸೃಜನಶೀಲತೆ ಕಸಿದುಕೊಂಡಿದೆ” ಎಂದರು.
ಜಿ.ಪಂ.ಮಾಜಿ ಸದಸ್ಯ ಮಲ್ಲಿಕಾರ್ಜುನ ಧಬಾಲೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಹುಲೆಪ್ಪ ಮಹಾಜನ, ಧೂಳಪ್ಪಾ ಭರಮಶಟ್ಟೆ, ಜಗನ್ನಾಥ ಖ್ಯಾಡೆ,  ಕಸಾಪ ಉಪಾಧ್ಯಕ್ಷ ಬಸವಕುಮಾರ ಕವಟೆ, ಬಸವರಾಜ ಬಿರಾದಾರ ಖಂಡಾಳ, ಲಿಂಗರಾಜ ಜಡಗೆ, ಸತೀಶ್ ಹಿರೇಮಠ, ದಯಾನಂದ ಭರಮಶಟ್ಟೆ, ಕಂಟೆಪ್ಪ ಮೇತ್ರೆ, ಸೂರ್ಯಕಾಂತ ಪಸರಗೆ ಸೇರಿದಂತೆ ಇತರರಿದ್ದರು, ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ಸ್ವಾಗತಿಸಿದರು. ಗಂಗಾಧರ ಸಾಲಿಮಠ  ನಿರೂಪಿಸಿದರು. ಪ್ರಶಾಂತ ಬುಡಗೆ  ವಂದಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಜನೆ ಬಾಲ್ಯವಿವಾಹ ತಡೆಗೆ ದಾರಿ: ಆರ್ ಕೆ ಸರ್ದಾರ್

ನಮ್ಮ ಭಾರತದ ಕಾನೂನಿನ ಅಡಿಯಲ್ಲಿ ಬಾಲ್ಯವಿವಾಹ ಕಾಯ್ದೆ ಪ್ರಕಾರ 18 ವರ್ಷದೊಳಗಿನವರಿಗೆ...

ಬಾಗೇಪಲ್ಲಿ | ಸಿಪಿಎಂ ಸಂಘಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ; ಎಂ.ಪಿ.ಮುನಿವೆಂಕಟಪ್ಪ

ಆಧುನಿಕ ಶೋಷಣೆಯಂತಹ ದಬ್ಬಾಳಿಕಾ ಪ್ರವೃತ್ತಿಯನ್ನು ತಡೆದು, ಸಿಪಿಎಂ ಪಕ್ಷದ ಬಲಿಷ್ಟ ಸಂಘಟನೆಯ...

ಗುಬ್ಬಿ | ಬಡ್ಡಿ ದಂಧೆಗೆ ಮತ್ತೋರ್ವ ಬಲಿ : ನಿಟ್ಟೂರು ವಾಸಿ ನೇಣಿಗೆ ಶರಣು; ಆತಂಕದಲ್ಲಿ ಜನತೆ

ಮೀಟರ್ ಬಡ್ಡಿ ದಂಧೆಗೆ ಬೇಕರಿ ಮಾಲೀಕ ಬಲಿಯಾದ ಘಟನೆ ಮಾಸುವ ಮುನ್ನವೇ...

ರಾಮನಗರ | ಸಾಲ ತೀರಿಸಲು ನೆರೆಮನೆಯ ಬಾಲಕಿಯ ಅಪಹರಣಕ್ಕೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ

ಮನೆ ಬಾಡಿಗೆ ಸೇರಿದಂತೆ ಕೈ ಸಾಲ ತೀರಿಸಲು ಪಕ್ಕದ ಮನೆಯಲ್ಲಿನ ಬಾಲಕಿಯನ್ನೇ...