‘ನಥಿಂಗ್ ನೈಸ್’: ಸಿಎಂ ಡಿಕೆಶಿ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಭೂಕಬಳಿಕೆ ಆರೋಪ

Date:

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಬಿಡದಿ ಟೌನ್‌ಶಿಪ್ ಹಾಗೂ ನೈಸ್ (NICE) ಯೋಜನೆಯಲ್ಲಿ ಬೃಹತ್ ಭೂಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ‘ನಥಿಂಗ್ ನೈಸ್’ (Nothing NICE) ಎಂಬ ಹೆಸರಿನಲ್ಲಿ ಕರೆದಿದ್ದ ವಿಶೇಷ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಹಲವು ದಾಖಲೆಗಳು ಮತ್ತು ಆಡಿಯೋಗಳನ್ನು ಬಿಡುಗಡೆ ಮಾಡಿದರು. ನೈಸ್ ಯೋಜನೆಯಲ್ಲಿ ನಡೆದಿರುವ ಅಕ್ರಮಗಳನ್ನು ಬಿಚ್ಚಿಟ್ಟ ಅವರು, 2003ರಲ್ಲಿ ಕೇವಲ 4 ಕೋಟಿ ರೂಪಾಯಿಗಳಷ್ಟಿದ್ದ ಡಿ.ಕೆ. ಶಿವಕುಮಾರ್ ಕುಟುಂಬದ ಆಸ್ತಿ ಮೌಲ್ಯವು 2023ರ ವೇಳೆಗೆ ಬರೋಬ್ಬರಿ 1,413 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದಕ್ಕೆ ಒಡಿಪಿ (ಭೂ ಬಳಕೆ ಉದ್ದೇಶ – ODP) ಬದಲಾವಣೆಯೇ ಪ್ರಮುಖ ಕಾರಣ ಎಂದು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

​ಸರ್ಕಾರದ ಯೋಜನೆಗಾಗಿ 1997ರಲ್ಲೇ ನೋಟಿಫೈ ಮಾಡಲಾಗಿದ್ದ ಸುಮಾರು 10 ಎಕರೆ ಜಮೀನನ್ನು 2004ರಲ್ಲಿ ಡಿ.ಕೆ. ಸುರೇಶ್ ಅವರು ಖರೀದಿಸಿದ್ದರು ಎಂಬ ದಾಖಲೆಗಳನ್ನು ಎಚ್‌ಡಿಕೆ ಪ್ರದರ್ಶಿಸಿದರು. ಮುಂದುವರಿದು, ಅದೇ ಜಮೀನಿನ ಭಾಗವನ್ನು 2026ರಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಆಭರಣ ಅವರು ಖರೀದಿಸಿದ್ದಾರೆ. ನಮಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದೇವೆ ಎಂದು ದೂರುವ ಬದಲು, ಮುಖ್ಯಮಂತ್ರಿಗಳು ಮೊದಲು ಈ ಅಕ್ರಮ ಭೂ ವ್ಯವಹಾರಗಳಿಗೆ ಉತ್ತರ ನೀಡಲಿ ಎಂದು ಅವರು ನೇರ ಸವಾಲು ಹಾಕಿದರು.

​ಇದೇ ವೇಳೆ ಬಿಎಂಐಸಿ (BMIC) ಯೋಜನೆಗಾಗಿ ಸಿದ್ಧಗಂಗಾ ಮಠಕ್ಕೆ ಸೇರಿದ 7 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ರಸ್ತೆ ನಿರ್ಮಾಣದ ಬಳಿಕ ಉಳಿದ ಭೂಮಿಯನ್ನು ಮರಳಿಸುವಂತೆ ಮಠದ ಶ್ರೀಗಳು ಕೋರಿದಾಗ, ಅವರ ಮೇಲೆಯೇ ಅನಗತ್ಯ ಒತ್ತಡ ಹೇರಲಾಗಿದೆ ಎಂಬ ಗಂಭೀರ ವಿಚಾರವನ್ನು ಕುಮಾರಸ್ವಾಮಿ ಬಹಿರಂಗಪಡಿಸಿದರು. ಈ ಕುರಿತಾದ ದೂರವಾಣಿ ಸಂಭಾಷಣೆಯ ಆಡಿಯೋ ತುಣುಕನ್ನು ಸಹ ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

​ಮಾಜಿ ಮುಖ್ಯಮಂತ್ರಿಗಳಾದ ಜೆ.ಹೆಚ್. ಪಟೇಲ್ ಮತ್ತು ಎಚ್.ಡಿ. ದೇವೇಗೌಡರ ಕಾಲದಲ್ಲಿ ಆರಂಭವಾದ ಈ ಯೋಜನೆಗೆ ರಾಜ್ಯದ ಅಭಿವೃದ್ಧಿಯ ಮೂಲ ಉದ್ದೇಶವಿತ್ತು. ಒಪ್ಪಂದದ ಪ್ರಕಾರ ಒಣ ಭೂಮಿಯನ್ನು ಮಾತ್ರ ಬಳಸಿಕೊಳ್ಳಬೇಕಿತ್ತು. ಆದರೆ, ನಗರಾಭಿವೃದ್ಧಿ ಸಚಿವರಾಗಿದ್ದ ಕಾಲದಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಟೌನ್‌ಶಿಪ್ ಜಾಗವನ್ನು ಕಡಿತಗೊಳಿಸಿ, ಟೋಲ್ ರಸ್ತೆಗಳ ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ ಅಶೋಕ್ ಖೇಣಿ ಹಾಗೂ ಡಿ.ಕೆ. ಶಿವಕುಮಾರ್ ‘ಹಕ್ಕ-ಬುಕ್ಕ’ರ ರೀತಿಯಲ್ಲಿ ಹಗರಣ ಎಸಗಿದ್ದಾರೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.

​ನೈಸ್ ಯೋಜನೆಯ ಜೊತೆಗೆ ಬಿಡದಿ ಟೌನ್‌ಶಿಪ್ ಯೋಜನೆಯನ್ನೂ ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು. ಬಿಡದಿ ಭಾಗದಲ್ಲಿ ರೈತರ ಫಲವತ್ತಾದ ಜಮೀನುಗಳನ್ನು ಕಿತ್ತುಕೊಂಡು ಟೌನ್‌ಶಿಪ್ ನಿರ್ಮಿಸಲು ಹೊರಟಿರುವುದು ಅಭಿವೃದ್ಧಿಯಲ್ಲ, ಅದೊಂದು ಬೃಹತ್ ‘ರಿಯಲ್ ಎಸ್ಟೇಟ್ ದಂಧೆ’ ಎಂದರು. ಸಾವಿರಾರು ಎಕರೆ ಒಣಭೂಮಿ ಇರುವಾಗ, ಹಾಲಿನ ಡೇರಿಗೆ ನಿತ್ಯ ಲಕ್ಷಾಂತರ ಲೀಟರ್ ಹಾಲು ಪೂರೈಸುವ ಬಿಡದಿ ರೈತರ ಜಮೀನೇಕೆ ಬೇಕು ಎಂದು ಪ್ರಶ್ನಿಸಿ, ಸಿಎಂ ರಿಯಲ್ ಎಸ್ಟೇಟ್ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

​ರೈತರ ಜಮೀನಿನ ಹೆಸರಿನಲ್ಲಿ ಹುಡ್ಕೋ (HUDCO) ಬ್ಯಾಂಕ್‌ನಿಂದ ಸುಮಾರು 12,000 ಕೋಟಿ ರೂಪಾಯಿ ಸಾಲ ಪಡೆಯಲು ಸರ್ಕಾರ ಸಂಚು ರೂಪಿಸಿದೆ. ಜಮೀನು ಕೊಡಲು ನಿರಾಕರಿಸುತ್ತಿರುವ ರೈತರನ್ನು ಬೆದರಿಸಲು ಪೊಲೀಸರನ್ನು ಮತ್ತು ರೌಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇದರಲ್ಲಿ ಜಮೀನು ಕಳೆದುಕೊಳ್ಳುವ ರೈತರಿಗೆ ಒಂದು ರೂಪಾಯಿ ಲಾಭವೂ ಇಲ್ಲ. ತಾವು ಬಿಡದಿ ರೈತರ ಪರವಾಗಿ ಬೀದಿಗಿಳಿದು ಹೋರಾಡುವುದಾಗಿ ಅವರು ಎಚ್ಚರಿಸಿದರು.

​ಈ ವಿವಾದ ಕೇವಲ ಆರೋಪಗಳಿಗೆ ಸೀಮಿತವಾಗದೆ, ನಾಯಕರ ನಡುವಿನ ‘ಪೋಸ್ಟರ್ ಸಮರ’ಕ್ಕೂ ಕಾರಣವಾಗಿದೆ. ಬಿಡದಿಯಲ್ಲಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಹಾಗೂ ಪುತ್ರ ನಿಖಿಲ್ ನೂರು ಎಕರೆ ಜಮೀನು ಹೊಂದಿದ್ದಾರೆ ಎಂಬ ಅವಹೇಳನಕಾರಿ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ತಮ್ಮ ಬಳಿ ಇರುವುದು 40 ವರ್ಷಗಳ ಹಿಂದೆ ಖರೀದಿಸಿದ 46 ಎಕರೆ ಮತ್ತು ಪತ್ನಿ ಹೆಸರಿನಲ್ಲಿರುವ 36 ಎಕರೆ ಜಮೀನು ಮಾತ್ರ. ಸುಳ್ಳು ಆರೋಪ ಮಾಡುವ ಮೊದಲು ದಾಖಲೆಗಳಿದ್ದರೆ ಜನರ ಮುಂದೆ ಇಡಲಿ ಎಂದು ತಿರುಗೇಟು ನೀಡಿದರು.

​ಹಿಂದೆ ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಂಡು ಜಮೀನು ಲಪಟಾಯಿಸಿದ ಕರಾಳ ಇತಿಹಾಸ ಶಿವಕುಮಾರ್ ಅವರಿಗೆ ಇದೆ ಎಂದು ನೆನಪಿಸಿದ ಕುಮಾರಸ್ವಾಮಿ, ವಿಪಕ್ಷಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ಇಂತಹ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಜರಿದರು. ಅಲ್ಲದೆ, ಸಿಎಂ ವಿರುದ್ಧದ ಈ ದಾಖಲೆಗಳ ಬಿಡುಗಡೆ ಇಲ್ಲಿಗೇ ಮುಗಿಯುವುದಿಲ್ಲ. ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ‘ಪಾರ್ಟ್-2 ಮತ್ತು ಪಾರ್ಟ್-3’ (Part 2 and Part 3) ಕೂಡ ಬರಲಿದೆ ಎಂದು ಗುಡುಗಿದರು.

​ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ತಾವು ಯಾವುದೇ ಬೆದರಿಕೆ ಅಥವಾ ಷಡ್ಯಂತ್ರಗಳಿಗೆ ಅಂಜುವುದಿಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿಗಳಿಗೆ ಮತ್ತೊಂದು ಬಹಿರಂಗ ಸವಾಲು ಎಸೆದಿದ್ದಾರೆ. “ನಿಮಗೆ ಧೈರ್ಯವಿದ್ದರೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬನ್ನಿ, ಅಲ್ಲಿಯೇ ಮುಖಾಮುಖಿಯಾಗಿ ಬಹಿರಂಗ ಚರ್ಚೆ ಮಾಡೋಣ” ಎಂದು ಸವಾಲು ಹಾಕಿದ್ದಾರೆ. ಜಮೀನುಗಳ ಒಡೆತನ ಹಸ್ತಾಂತರ ಹಾಗೂ ಅಕ್ರಮಗಳ ಕುರಿತಾದ ಈ ಆರೋಪ-ಪ್ರತ್ಯಾರೋಪಗಳು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಂಡವಾರ ಬಳಿ ಭೂಕಂಪ; ಸ್ಥಳೀಯರು ಆತಂಕಪಡುವ ಅಗತ್ಯವಿಲ್ಲ: KSNDMC ಅಧಿಕಾರಿಗಳು

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ 3.5 ತೀವ್ರತೆಯ ಭೂಕಂಪ ಉಂಟಾಗಿರುವುದಾಗಿ ಕರ್ನಾಟಕ...

ಔರಾದ್ : ನಕಲಿ ವೈದ್ಯಕೀಯ ವೃತ್ತಿ: ಕ್ಲಿನಿಕ್ ಸೀಜ್

ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದೆ ನಕಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಆರೋಪದ...

ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಖಿನ್ನತೆ, ಆತ್ಮಹತ್ಯೆಯ ಆಲೋಚನೆ: NTF ವರದಿ ಹೊರತಂದ ಆಘಾತಕಾರಿ ಸತ್ಯ!

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕುರಿತು ಸುಪ್ರೀಂ ಕೋರ್ಟ್...