ಪೊಲೀಸ್ ಠಾಣೆಗೆ ದೂರು ನೀಡಿರುವ ವಿಚಾರವಾಗಿ ಮಹಿಳೆಯ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ ಮಾಂಗಲ್ಯ ಸರ ಕಿತ್ತು ಹಲ್ಲೆ ನಡೆಸಿರುವ ಘಟನೆ ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾರ್ಡ್ ನಂ:02 ರ.ಆಶ್ರಯ ಬಡಾವಣೆಯ ಗಂಗಾ ನಗರದಲ್ಲಿ ರಾತ್ರಿ ಘಟನೆ ನಡೆದಿದೆ.ಘಟನೆಯ ದೃಶ್ಯಾವಳಿಗಳು ಸಿ ಸಿ ಟಿ ವಿ ಯಲ್ಲಿ ಸೆರೆಯಾಗಿದ್ದು ಘಟನಾ ಸ್ಥಳಕ್ಕೆ 112 ಪೊಲೀಸರು ದೌಡಾಯಿಸಿ ಬಂದಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಕಸಬಾ ಹೋಬಳಿ ಕಾಗತಿ ಗ್ರಾಮದ ಸರ್ವೆ ನಂಬರ್ 67ರ ಜಮೀನಿನ ವಿವಾದದ ವಿಚಾರವಾಗಿ ದೊಡ್ಡ ನರಸಿಂಹಪ್ಪ ಬಿನ್ ಕದಿರಪ್ಪ ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಗೆ ಇತ್ತೀಚಿಗೆ ದೂರು ನೀಡಿದ್ದರು.
ರಾತ್ರಿ ಸುಮಾರು 08 ಗಂಟೆ ಸಮಯದಲ್ಲಿ ದೊಡ್ಡ ನರಸಿಂಹಪ್ಪ ಬಿನ್ ಕದಿರಪ್ಪ ರವರು ಅವರ ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿರುವ ಸೊಸೆ ಯದಾ ಗೌತಮಿ ರವರ ಮನೆಯಲ್ಲಿದ್ದ ಸಂದರ್ಭದಲ್ಲಿ,ಸುಮಾರು ಹತ್ತರಿಂದ ಹದಿನೈದು ಜನ ಗುಂಪು ಕಟ್ಟಿಕೊಂಡು ಬಂದು ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಗೌತಮಿ ಎಂಬ ಮಹಿಳೆಯ ಮಾಂಗಲ್ಯ ಸರ ಕಿತ್ತು ಕೊಂಡು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯ ವಿಷಯ ಸ್ಥಳೀಯರು 112 ಪೊಲೀಸರ ಗಮನಕ್ಕೆ ತಂದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಗೌತಮಿ ಕೂಡಲೇ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು,ಆಸ್ಪತ್ರೆಗೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಗೌತಮಿಯಿಂದ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ದೆಹಲಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಪಿಐಎಂ ಬೆಂಬಲ
ಈ ಕುರಿತು ಗೌತಮಿ ರವರು ಮಾತನಾಡಿ ತನ್ನ ಮನೆಗೆ ನುಗ್ಗಿ ತನಗೂ ಹಾಗೂ ತನ್ನ ಮಕ್ಕಳಿಗೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.ಸುಮಾರು 10-15 ಜನರು ಒಟ್ಟಾಗಿ ಬಂದು ಗಲಾಟೆ ಮಾಡಿ,ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.




