ಚಿಕ್ಕಮಗಳೂರು | ಶಿಕ್ಷಣದೊಂದಿಗೆ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಿ; ಡಾ.ಭೀಮೇಶ್ವರ ಜೋಷಿ

Date:

ಕಳಸ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ  ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಹಾಗೂ ಯುವನಿಧಿ ನೋಂದಣಿ ಅಭಿಯಾನ(ಸಂಚಾರಿ ನೋಂದಣಿ) ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಕೂಡ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಅಂದಿನ ಮಟ್ಟಕ್ಕೆ ಪಠ್ಯೇತರ ಚಟುವಟಿಕೆ ಎಂದರೆ ಕೆಲವೇ ಕೆಲವು ಆಟಗಳಿಗೆ ಸೀಮಿತವಾಗಿತ್ತು, ಆದರೆ ಇಂದು ಆಟೋಟದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಜೊತೆಗೆ ಕಾಲೇಜು ಗ್ರೇಡ್ ಮಟ್ಟದ ಸಾಧನೆಗಳನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಜೀವನ ಉಜ್ವಲಗೊಳ್ಳಲು ಕೈಯಲ್ಲಿನ ಮೊಬೈಲ್ ಫೋನ್ ಅನ್ನು ಶಿಕ್ಷಣಕ್ಕೆ, ತಮ್ಮ ಕೌಶಲ್ಯ ಅಭಿವೃದ್ಧಿಗೆ ಸಕಾರಾತ್ಮಕವಾಗಿ ಬಳಸಿಕೊಳ್ಳಿ ಎಂದರು.

- Advertisement -

ಕಾಲೇಜಿನ ಉನ್ನತೀಕರಣಕ್ಕೆ ಸ್ಥಳೀಯರು, ಕಾಲೇಜು ಅಭಿವೃದ್ಧಿ ಸಮಿತಿ ಸೇರಿದಂತೆ ಹಲವಾರು ಜನರು ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳಾದ ತಾವು ಕಾಲೇಜಿನ ಎಲ್ಲ ಸೌಕರ್ಯ, ಸಂಪನ್ಮೂಲಗಳನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಣದ ಜೊತೆಗೆ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರಾದ ಡಾ.ಭೀಮೇಶ್ವರ ಜೋಷಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ ಮಾತನಾಡಿ, ನಮ್ಮ ಕಳಸ ಕಾಲೇಜಿನ ವಿಶೇಷವೆಂದರೆ, ಕಾಲೇಜು ವಿಭಾಗದಲ್ಲಿ ಅದರಲ್ಲೂ ಪದವಿ ಕಾಲೇಜಿನಲ್ಲಿ ಊಟ ನೀಡುತ್ತಿರುವುದು ನಮ್ಮಲ್ಲಷ್ಟೇ, ಇದಕ್ಕೆ ಕಾರಣರಾದ ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರು, ಮತ್ತು ಕಾಲೇಜು ಅಭಿವೃದ್ಧಿ ಕೆಲಸಕ್ಕೆ ಸಹಾಯ ಹಸ್ತ ಚಾಚುವ ಎಲ್ಲ ಸ್ಥಳೀಯರಿಗೂ ಧನ್ಯವಾದ ತಿಳಿಸಿದರು. ಕಾಲೇಜಿನಲ್ಲಿ ಬಿಎ, ಬಿಕಾಂ ಮತ್ತು ಬಿಸಿಎ ವಿಭಾಗದ ವಿವಿಧ ಸೆಮಿಸ್ಟರಗಳಲ್ಲಿ ಓದುತ್ತಿರುವ 84 ಬಡ ವಿದ್ಯಾರ್ಥಿಗಳಿಗೆ 3,71,297 ರೂ.ಗಳನ್ನು ಸಹಾಯಧನವಾಗಿ ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ ನೀಡಿದ್ದು, ಕಾಲೇಜು ವತಿಯಿಂದ ಅವರಿಗೆ ಸನ್ಮಾನಿಸಲಾಯಿತು.

ಯುವನಿಧಿ ನಿರುದ್ಯೋಗ ಭತ್ಯೆಯಲ್ಲ ಯುವನಿಧಿ ನೊಂದಣಿ ಬಗ್ಗೆ ಮಾತನಾಡಿದ ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್, ಯುವನಿಧಿ ಯೋಜನೆ ನಿರುದ್ಯೋಗ ಭತ್ಯೆಯಲ್ಲ, ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ, ಉದ್ಯೋಗ ಹುಡುಕಾಟದಲ್ಲಿವವರಿಗೆ ಸಹಾಯವಾಗಲು ನೀಡುವ ಆರ್ಥಿಕ ಸಹಾಯಧನವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 18 ಕೋಟಿ ರೂ.ಗಳಷ್ಟು ಹಣ ಯುವನಿಧಿ ಫಲಾನುಭವಿಗಳಿಗೆ ಜಮೆಯಾಗಿದೆ ಎಂದು ತಿಳಿಸಿದರು. 

Advertisements

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ವಿಶುಕುಮಾರ್.ಎನ್, ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಸದಾ ಕಾಲ ಜೊತೆಯಾಗಿ ನಿಲ್ಲುವ ಕಾಲೇಜು ಅಭಿವೃದ್ಧಿ ಸಮಿತಿ, ಶ್ರೀ ಕ್ಷೇತ್ರ ಹೊರನಾಡು ಮತ್ತು ಸ್ಥಳೀಯರಿಗೆ ನಮ್ಮ ಧನ್ಯವಾದ. 

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕುಕ್ಕೂಡಿಗೆ ರವೀಂದ್ರ: ಇಒ ಅಧಿಕಾರಿಗೆ ಹಲ್ಲೆ, ಜೀವ ಬೆದರಿಕೆ; ಪ್ರಕರಣ ದಾಖಲು 

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ವಿನಯ ಕುಮಾರ್ ಶೆಟ್ಟಿ.ಎಸ್ ಅವರನ್ನು ಕಾಲೇಜಿನ ಅಭಿವೃದ್ಧಿಗೆ ಅವರ ಕೊಡುಗೆ ಸಲುವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶ್ರೇಣಿಕ್ ಕೆ. ಎ, ಅಕ್ರಮ ಸಕ್ರಮ ಸಮಿತಿ, ಮೂಡಿಗೆರೆ ಸದಸ್ಯ ವಿಶ್ವನಾಥ್, ಕಳಸ ರೋಟರಿ ಕ್ಲಬ್ ಕಾರ್ಯದರ್ಶಿ ಸತೀಶ್ ಕಲ್ಲಾನೆ,  ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯಾ ಸದಾನಂದ, ಪೋಷಕರ ಸಮಿತಿಯ ಅಜಿತ್ ಕುಮಾರ್ ಜೈನ್, ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ಸಂಚಾಲಕ ಡಾ. ಆದಿತ್ಯ ಅಡಿಗ ಎ.ಜಿ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ಪುನೀತ್ ಕುಮಾರ್ ಕೆ.ಆರ್, ಉದ್ಯೋಗ ಕೋಶ ಘಟಕ ಟಿ.ಎಂ., ಸಂಚಾಲಕ ಡಾ. ದಿನೇಶ್ ಸೇರಿದಂತೆ ಬೋಧಕ-ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು ಸಾಕಣೆದಾರರಿಗೂ ಸಂಕಷ್ಟ

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ...

ಉಡುಪಿ | ಇಸ್ಲಾಮಿಕ್ ವೆಲ್ಫೇರ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ

ಇಸ್ಲಾಮಿಕ್ ವೆಲ್ಫೇರ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿಯಮಿತ, ಉಡುಪಿ ಇದರ 2025-26ನೇ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ ಸಾಕೇ, ಇನ್ನಷ್ಟು ಬೇಕೇ?

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು....

ಚಿಕ್ಕಬಳ್ಳಾಪುರ | ದಲಿತರ ಕೇರಿಗೆ ಹೋದರೆ ‘ನಾನು ಸಾಯ್ತೀನಿ’: ಉದ್ಧಟತನ ಮೆರೆದ ಪೂಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯ ಪಿಡಚಲಹಳ್ಳಿ ಗ್ರಾಮದಲ್ಲಿ ದಲಿತರ ಕೇರಿಗೆ ದೇವರ ಮೂರ್ತಿ ಹೋಗುವುದನ್ನು...