ಚಿಕ್ಕಮಗಳೂರು | ‘ಡೆತ್ ನೋಟ್’ ಬರೆದಿಟ್ಟು ಮಹಿಳೆ ನಾಪತ್ತೆ 

Date:

ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ಸಾಲ ಬಾಧೆ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ “ನನ್ನ ಸಾವಿಗೆ ನಾನೇ ಕಾರಣ” ಎಂದು ಡೆತ್‌ನೋಟ್ ಬರೆದಿಟ್ಟು ಗೃಹಿಣಿಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.

- Advertisement -

ಯೋಗೇಶ್‌ ಎಂಬುವರ ಪತ್ನಿ ಶೈಲಾ (45), ನಾಪತ್ತೆಯಾದ ಮಹಿಳೆ. ಗುತ್ತಿಗೆ ಕೆಲಸ ಮಾಡುತ್ತಿದ್ದ ಪತಿ ಯೋಗೇಶ್ ಅವರಿಗೆ ಇತ್ತೀಚೆಗೆ ಭಾರಿ ಹಣದ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದ ನಿರ್ವಹಣೆಗಾಗಿ ಶೈಲಾ ಅವರು ತಮಗೆ ಪರಿಚಯವಿದ್ದವರಿಂದ ಕೈಸಾಲ ಮಾಡಿಸಿ ಕೊಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸಾಲದ ಹಣ ಮರುಪಾವತಿ ಮಾಡುವ ವಿಷಯದಲ್ಲಿ ದಂಪತಿ ನಡುವೆ ಮನೆಯಲ್ಲಿ ತೀವ್ರ ಮಾತಿನ ಚಕಮಕಿ ಹಾಗೂ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇದರಿಂದ ತೀವ್ರ ಬೇಸತ್ತಿದ್ದ ಶೈಲಾ ಅವರು ಮೇ 26 ರ ಬೆಳಿಗ್ಗೆ ಮನೆಯಿಂದ ಹೊರಟು ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಹೆಸರಿಗಷ್ಟೇ; ಇಂದಿಗೂ ಅಧಿಕಾರ...

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯ ಮೂಲಕ ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಆದರೂ ಕೆಲವು ಕಡೆ ಮಹಿಳಾ ಪ್ರತಿನಿಧಿಗಳ ಬದಲಿಗೆ ಅವರ ಪತಿ, ತಂದೆ, ಸಹೋದರ ಅಥವಾ ಕುಟುಂಬದ ಇತರ ಪುರುಷರು ಆಡಳಿತದಲ್ಲಿ ಹಸ್ತಕ್ಷೇಪ...

ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ

ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಅಕ್ಟೋಬರ್ 10ರಂದು ದೆಹಲಿಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಓಟ್ ಚೋರಿ: ಜಿಲ್ಲೆಯಲ್ಲಿ 1.32 ಲಕ್ಷ ಮತದಾರರು ಹೊರಕ್ಕೆ; ಅನಿಲ್ ಹೊಸಕೊಪ್ಪ ಆರೋಪ 

ಮನೆಯಿಂದ ಹೊರಡುವ ಮುನ್ನ ಶೈಲಾ ಅವರು ತಮ್ಮ ಆಧಾರ್ ಕಾರ್ಡ್, 2,500 ರೂಪಾಯಿ ನಗದು ಹಾಗೂ ಸಾಲಗಾರರ ಹೆಸರು ಬರೆದಿರುವ ಚೀಟಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ತಮ್ಮ ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪತ್ನಿಯನ್ನ ಪತ್ತೆ ಮಾಡಿಕೊಡುವಂತೆ ಪತಿ ಯೋಗೇಶ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು,  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾದೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ದಸರಾ ರಜೆಯಲ್ಲೇ ಸೆಮಿಸ್ಟರ್ ಪರೀಕ್ಷೆ: ಸಂತ ಆಗ್ನೆಸ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ದಸರಾ ಹಬ್ಬದ ರಜೆ ಹಾಗೂ ಪದವಿ ಸೆಮಿಸ್ಟರ್ ಪರೀಕ್ಷೆಗಳ ವೇಳಾಪಟ್ಟಿ ವಿಚಾರವಾಗಿ...

ಕಲಬುರಗಿ | ವ್ಯಾಪಾರದಲ್ಲಿ ₹62.77 ಲಕ್ಷ ವಂಚನೆ : ಪ್ರಕರಣ ದಾಖಲು

ಮೆಣಸಿನಕಾಯಿ ವ್ಯಾಪಾರದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸರಕು ಖರೀದಿಸಿ, ಹಣ...

ಕಲಬುರಗಿ | ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ನಗರದ ಹುಮನಾಬಾದ್ ರಸ್ತೆಯ ಹೋಟೆಲ್‌ವೊಂದರ ಸಮೀಪ ನಡೆದಿದ್ದ ಸಿದ್ದಲಿಂಗ ಸಾವಳಗಿ ಕೊಲೆ...

ಯಾದಗಿರಿ | ಭತ್ತದ ಬೆಳೆ ಉಳಿಸಲು ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ರೈತರ ಧರಣಿ

ಈಗಾಗಲೇ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಭತ್ತದ ಬೆಳೆ ಉಳಿಸಲು ತಕ್ಷಣ...