ಚಿಕ್ಕಮಗಳೂರು | ತಾಲೂಕು ವೈದ್ಯಾಧಿಕಾರಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

Date:

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕು ವೈದ್ಯಾಧಿಕಾರಿಯಾಗಿದ್ದ ಡಾ. ಎಲ್ಡೋಸ್ ಎಂಬ ವ್ಯಕ್ತಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಜೈಲು ಪಾಲಾಗಿದ್ದಾನೆ.

ಡಿ ದರ್ಜೆಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ, ಈ ಮೊದಲು ಕಳಸದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿಗೆ ವರ್ಗಾವಣೆಯಾಗಿ ಬಂದಿದ್ದರು.

ಸೆ.20ರಂದು ಬಾಳೆಹೊನ್ನೂರು ವಸತಿ ಗೃಹಕ್ಕೆ ಡಿ ದರ್ಜೆ ನೌಕರೆಯನ್ನು ಈ ವೈದ್ಯ ಬರಲು ಹೇಳಿದ್ದ. ಮಹಿಳೆ ತನ್ನ ಗಂಡ ಹಾಗೂ ಕುಟುಂಬಸ್ಥರಿಗೆ ವಿಷಯ ತಿಳಿಸಿ, ಬಾಳೆಹೊನ್ನೂರು ಪಟ್ಟಣದ ಸರ್ಕಾರಿ ವೈದ್ಯರ ವಸತಿಗೃಹಕ್ಕೆ ಎಲ್ಲರನ್ನು ಕರೆತಂದಿದ್ದರು. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ವೈದ್ಯನನ್ನು ಸಾರ್ವಜನಿಕರು ಹಾಗೂ ಮಹಿಳೆಯ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್‌ ವಶಕ್ಕೆ ನೀಡಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಘಟನೆಯ ನಂತರ ವೈದ್ಯನನ್ನು  ನರಸಿಂಹರಾಜಪುರ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಹುದ್ದೆಯಿಂದ ವಜಾ ಮಾಡಲಾಗಿತ್ತು. ಡಾ. ಎಲ್ಡೋಸ್ ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಸದ್ಯ ವಿಚಾರಣೆ ನಡೆಸಿದ ನರಸಿಂಹರಾಜಪುರ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ರದ್ದುಗೊಳಿಸಿ ಆದೇಶ ನೀಡಿದ್ದಾರೆ.

ಜಾಮೀನು ರದ್ದುಗೊಳಿಸಿರುವ ಎನ್.ಆರ್. ಪುರ, ಜೆ.ಎಂ.ಎಫ್.ಸಿ ನ್ಯಾಯಾಲಯ, ಅಕ್ಟೋಬರ್ 7 ರವರೆಗೆ ಆರೋಪಿ ಡಾ. ಎಲ್ಡೋಸ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ವೈದ್ಯ ಜೈಲು ಪಾಲಾಗಿದ್ದಾನೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಲೇಬರ್ ಕಾಲೋನಿಯಲ್ಲಿ ಮೂಲಸೌಕರ್ಯ ಮರೀಚಿಕೆ; ಶಿಕ್ಷಣದಿಂದ ವಂಚಿತರಾದ ಮಕ್ಕಳು

ದಟ್ಟವಾಗಿ ಕಾಡನ್ನು ಆವರಿಸಿಕೊಂಡಿರುವ ಕಳಸ ತಾಲೂಕು ನೋಡುಗರಿಗೆ ಪ್ರವಾಸಿ ತಾಣವಾಗಿ ಕಂಗೊಳಿಸುತ್ತದೆ....

ಚಿಕ್ಕಮಗಳೂರು | ಆದಿವಾಸಿಗಳ ಬದುಕು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯಬೇಕು: ಚೇತನ್ ಅಹಿಂಸಾ

ಆದಿವಾಸಿ ಸಮುದಾಯಗಳಿಗೆ ನ್ಯಾಯ ಸಿಗಬೇಕು. ಸಾಂಸ್ಕೃತಿಕ ಆದಿವಾಸಿ ಆಧ್ಯಾತ್ಮಿಕ ವಿಷಗಳನ್ನು ಅರಿಯಬೇಕು...

ಚಿಕ್ಕಮಗಳೂರು | ಗಿರಿಜನರ ಹತ್ತಾರು ಸಮಸ್ಯೆಯ ಬದುಕಿನ ಸಮಾವೇಶ ʼಆದಿವಾಸಿ ಸಮಾವೇಶʼ: ಶಾಸಕ ಟಿ.ಡಿ. ರಾಜೇಗೌಡ

ಕೊಪ್ಪ ಗಿರಿಜನರ ಹತ್ತಾರು ಸಮಸ್ಯೆಯ ಬದುಕಿನ ಸಮಾವೇಶ ಆದಿವಾಸಿ ಸಮಾವೇಶ, ನಮಗೆ...

ಚಿಕ್ಕಮಗಳೂರು | ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ಪ್ರಕರಣ; ತಾಯಿ ಸೇರಿ ನಾಲ್ವರು ದೋಷಿ ಎಂದ ಕೋರ್ಟ್‌

ರಾಜ್ಯಾದ್ಯಂತ ಸುದ್ದಿಯಾಗಿದ್ದ ಕಾಫಿನಾಡು ಚಿಕ್ಕಮಗಳೂರಿನ ಪೋಕ್ಸೋ ಕೇಸ್‌ನ ತೀರ್ಪು ಇಂದು ಪ್ರಕಟವಾಗಿದೆ.ಆತಂಕ...