ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ಸೀಟುಗಳಿಗೆ ಪ್ರವೇಶ ಪಡೆಯುವ ಅವಧಿಯನ್ನು ಡಿಜಿಟಿ, ನವದೆಹಲಿಯ ಆದೇಶದಂತೆ ಅ. 15ರವರೆಗೆ ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ಪ್ರಭಾರ ಪ್ರಾಚಾರ್ಯ ರವಿ ದಳವಾಯಿ ತಿಳಿಸಿದ್ದಾರೆ..
ಎಸ್‌ಎಸ್‌ಎಲ್‌ಸಿ, ಪಿಯುಸಿ ಅಥವಾ ಪದವಿ ಉತ್ತೀರ್ಣ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಐಟಿಐ ಕಲಿಯಲು ಆಸಕ್ತಿ ಹೊಂದಿರುವವರು ಪ್ರವೇಶ ಪಡೆಯಬಹುದು. ಹಾಗೆಯೇ, ಆಸಕ್ತರು ಸಂಸ್ಥೆಗೆ ನೇರವಾಗಿ ಭೇಟಿ ನೀಡಿ, ಸೀಟುಗಳ ಕುರಿತು ಮಾಹಿತಿ ಪಡೆದು ಪ್ರವೇಶ ಪಡೆಯಬಹುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಈ ಅವಕಾಶವನ್ನು ಬಳಸಿಕೊಂಡು ಕೌಶಲ ಶಿಕ್ಷಣ ಪಡೆದು ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಇದನ್ನೂ ಓದಿದ್ದೀರಾ?ಹಾಸನ | SIR ರದ್ದು;,ಗ್ಯಾನೇಶ್ ಕುಮಾರ್ ವಜಾಕ್ಕೆ DYFI, SFI, AIDSO ಆಗ್ರಹ.
ಹೆಚ್ಚಿನ ಮಾಹಿತಿಗೆ 9483087591, 7975317499 ಸಂಪರ್ಕಿಸಬಹುದು. 261011-126-1697174130




