ಚಿತ್ರದುರ್ಗ | ಜಂಬೂದ್ವೀಪ ಹಾಗೂ ಅಂಬೇಡ್ಕರ್ ವಿಚಾರ ವೇದಿಕೆಯಿಂದ ಸಾವಿತ್ರಿ ಬಾಪುಲೆ ಜನ್ಮದಿನಾಚರಣೆ

Date:

ಚಿತ್ರದುರ್ಗದ ಮಹಾತ್ಮ ಜ್ಯೋತಿಬಾ ಪುಲೆ ಸ್ಪರ್ಧಾತ್ಮಕ ಕೇಂದ್ರದಲ್ಲಿ ಜಂಬೂದ್ವೀಪ ಕರ್ನಾಟಕ ಹಾಗೂ ಚಿತ್ರದುರ್ಗದ ಅಂಬೇಡ್ಕರ್ ವಿಚಾರ ವೇದಿಕೆ ಜಂಟಿಯಾಗಿ ಸಾವಿತ್ರಿಬಾ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಿತ್ರದುರ್ಗದ ಬುದ್ಧನಗರ ಮಾರ್ಗದಲ್ಲಿನ ಸಾವಿತ್ರಿ ಬಾಪುಲೆ ವೃತ್ತದ ನಾಮಫಲಕಕ್ಕೆ ಅಂಬೇಡ್ಕರ್ ವಿಚಾರ ವೇದಿಕೆಯ ಸದಸ್ಯರು ಹೂವಿನ ಹಾರ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

- Advertisement -

ಕಾರ್ಯಕ್ರಮದಲ್ಲಿ ಉಪನ್ಯಾಸಕ ವೇದಾಂತ ಏಳಂಜಿ ಮಾತನಾಡಿ “ಸಾವಿತ್ರಿಬಾ ಪುಲೆ ಮತ್ತು ಜ್ಯೋತಿಬಾ ಪುಲೆ ದಂಪತಿಗಳನ್ನು ಒಬ್ಬರು ಮತ್ತೊಬ್ಬರನ್ನು ಹೊರತು ಪಡಿಸಿ ನೋಡಲು ಸಾಧ್ಯವಿಲ್ಲ. ದೇಶದ ಎಲ್ಲಾ ಸಮುದಾಯಗಳು ಸಾವಿತ್ರಿ ಬಾಪುಲೆ ಅವರ ಜೀವನವನ್ನು ಅರಿಯಬೇಕು. ಕುಟುಂಬ ಮೇಲ್ವರ್ಗದ ವಿರೋಧದ ನಡುವೆ ಸ್ವತಃ ಗಂಡನಿಂದ ಅಕ್ಷರ ಕಲೆತು ದೇಶದ ಪ್ರಥಮ ಶಿಕ್ಷಕಿಯಾದರು. ಅಸ್ಪೃಶ್ಯರ ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಶಾಲೆಗಳನ್ನು ತೆರೆದು ಸಾವಿರಾರು ಜನರಿಗೆ ಅಕ್ಷರ ಕಲಿಸುವ ಜೊತೆಗೆ ಸ್ವಾಭಿಮಾನದ ಘನತೆಯ ಬದುಕನ್ನು ಕಲಿಸಿಕೊಟ್ಟವರು ಸಾವಿತ್ರಿ ಭಾಪುಲೆ” ಎಂದು ಸ್ಮರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...
1003449882

“ಬಡ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ, ವಿದ್ಯಾರ್ಥಿ ಭತ್ಯೆ, ಬಟ್ಟೆಗಳನ್ನು ನೀಡಿದರು. ಮನೆಮನೆಗಳಿಗೆ ತೆರಳಿ ತಂದೆ-ತಾಯಿಯರಿಗೆ ಶಿಕ್ಷಣದ ಮಹತ್ವ ತಿಳಿಸಿಕೊಟ್ಟರು. ಒಳಜಾತಿ, ವೈವಿವಾಹಿಕ ಕಟ್ಟುಪಾಡುಗಳು ಜಾತಿಯತೆಗೆ ಮೂಲ ಕಾರಣವೆಂದು ಅರಿತು ಅಂತರ್ಜಾತಿ ವಿವಾಹಗಳನ್ನು ಮಾಡಿದರು. ಪುರೋಹಿತರಿಲ್ಲದ, ಮಂತ್ರಘೋಷಗಳಿಲ್ಲದ ಕಡಿಮೆ ಖರ್ಚಿನ ಸರಳ ವಿವಾಹಗಳನ್ನು ಮಾಡಿಸಿದರು. ಜ್ಯೋತಿಬಾ ಪುಲೆ ಸ್ವತಃ ಮಂಗಳಷ್ಟಾಕಗಳನ್ನು ಬರೆದು ಓದಿಸಿದರು. ಗಂಡು-ಹೆಣ್ಣಿನ ಸಮಾನತೆಯನ್ನು ಸಾರಿದರು” ಎಂದು ತಿಳಿಸಿದರು.

“ಮಹಿಳಾ ಸಂಘಟನೆಗಳನ್ನು ಸ್ಥಾಪಿಸಿ ಹಲವು ಮಹಿಳೆಯರಿಗೆ ಪ್ರೇರಣೆಯಾದರು. ಪುಲೆ ದಂಪತಿಗಳ ಸತ್ಯಶೋಧಕ ಸಮಾಜದಿಂದ ಮೌಢ್ಯ ನಿರ್ಮೂಲನೆ, ವಿಧವಾ ಪುನರ್ ವಿವಾಹ ಮಾಡಿದರು. ಕ್ಷಾಮ ಬರಗಾಲದ ಪರಿಸ್ಥಿತಿಯಲ್ಲಿಯೂ ದೀನದಲಿತರ ಪರವಾಗಿದ್ದು ಜೀವತೆತ್ತರು” ಎಂದು ಹೇಳಿದರು.

ಶಿಕ್ಷಕ ಪ್ರದೀಪ್ ಮಾತನಾಡಿ “ಶಾಲೆಗಳಲ್ಲಿ ಸರಸ್ವತಿ ಪೂಜಿಸುತ್ತೇವೆ. ಸರಸ್ವತಿ ಪುಸ್ತಕ ಬರೆದವರು ಅಲ್ಲ ಶಾಲೆಗಳನ್ನು ಕಟ್ಟಿಸಿದವರು ಅಲ್ಲ. ನಿಜವಾಗಿ ಶಾಲೆ ಕಟ್ಟಿಸಿ ಪುಸ್ತಕ ಕೊಟ್ಟವರು ಫುಲೆ ದಂಪತಿಗಳು. ಮೇಲ್ವರ್ಗಗಳ ಮೋಸಕ್ಕೆ ಸಿಲುಕಿ ಪಶುಗಳಂತೆ ದುಡಿವ ಶೂದ್ರಾತಿಶೂದ್ರರಿಗೆ ಯೋಚಿಸಲು ಕಲಿಸಿದರು. ಸ್ವತಃ ಅಂಬೇಡ್ಕರರಿಗೆ ಸ್ಫೂರ್ತಿಯಾದರು” ಎಂದು ಅಭಿಪ್ರಾಯಪಟ್ಟರು.

1003449885

ಸಾವಿತ್ರಮ್ಮ ಸಾವಿತ್ರಮ್ಮ ಸಾಟಿಯುಂಟೆ ಅಕ್ಷರದಮ್ಮ ಎಂಬ ಸ್ವರಚಿತ ಪದ್ಯವನ್ನು ಹಾಡಿ ಮಾತನಾಡಿದ ಕವಿ ಶಿವಶಂಕರ ಸೀಗೆಹಟ್ಟಿ “ಜ್ಯೋತಿಬಾ ಪುಲೆ ಅವರನ್ನು ಇತಿಹಾಸ ಸದಾ ಸ್ಮರಿಸಬೇಕು. ಅವರನ್ನು ಕೊಲ್ಲಲು ೫೦ ರೂ.ಗಳನ್ನು ನೀಡಿದ್ದ ವ್ಯಕ್ತಿ ಅಸ್ಪೃಶ್ಯರಿಗಾಗಿ ಜೀವನವನ್ನು ಮೂಡುಪಾಗಿಟ್ಟಿದ್ದನ್ನು ಕೇಳಿ ಪರಿವರ್ತನೆಯಾದನು. ತನ್ನನ್ನು ಕೊಲ್ಲಲು ಬಂದವರನ್ನು ಮನಃ ಪರಿವರ್ತನೆ ಮಾಡಿದ್ದು ಚರಿತ್ರೆಯಲ್ಲಿ ಬುದ್ಧ ಗುರು.‌ ಸಾವಿತ್ರಿ ಭಾಪುಲೆ ದೇಶದ ಪ್ರಥಮ ಶಿಕ್ಷಕಿಯಾಗಿ ಅಂದಿನ ಬ್ರಾಹ್ಮಣರ ವಿರೋಧದ ನಡುವೆಯೂ ಅಸ್ಪೃಶ್ಯರು, ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಟ್ಟು ದಲಿತ ಸಮಾಜಕ್ಕೆ ತಾಯಿಯಂತೆ ಸಲುಹಿದರು” ಎಂದರು.

ಅಧ್ಯಕ್ಷತೆ ವಹಿಸಿದ್ದ ಜಂಬೂದ್ವೀಪ ರಾಮಣ್ಣ “ಅನಕ್ಷರಸ್ಥ ಸಾವಿತ್ರಿ ಬಾಪುಲೆ, ಅಕ್ಷರಸ್ಥೆಯಾಗಿ ದೇಶದ ಪ್ರಥಮ ಶಿಕ್ಷಕಿಯಾಗಿ ದೇಶಕ್ಕೆ ಮಾದರಿಯಾದರು. ಸದಾ ಪುಸ್ತಕಗಳನ್ನು ಓದುವಂತೆ. ಕಷ್ಟಕಾಲದಲ್ಲೂ ಕೈಬಿಡದೆ ಓದಿದರೆ ಉತ್ತಮ ಜೀವನ ಕಟ್ಟಿಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಾಮಾಜಿಕ ಪರಿವರ್ತನಾ ಚಳುವಳಿಯ ಮಹಾಚೇತನ ಮಾತೆ ಸಾವಿತ್ರಿ ಭಾಪುಲೆ ಜನ್ಮದಿನಾಚರಣೆ

ಕಾರ್ಯಕ್ರಮದಲ್ಲಿ ಸಾವಿತ್ರಿಬಾ ಪುಲೆ ಸರ್ಕಲ್ ಸ್ಥಾಪಕರಾದ ಚಕ್ರವರ್ತಿ, ಶ್ರೀನಿವಾಸರಾಜು, ವಿಶ್ವಾನಂದ(ವಿಕೆವಿ), ಶಿಕ್ಷಕ ಸಿದ್ದೇಶ್.ಕೆ. ಪ್ರಾಧ್ಯಾಪಕರಾದ ಮಂಜುನಾಥ ಆರ್, ಕುಮಾರ್ ಹೆಚ್, ಶಿಕ್ಷಕ ಯಾದಲಗಟ್ಟೆ ಪ್ರಕಾಶ್, ವಾರ್ಡನ್ ರುದ್ರಮುನಿ, ಸಮಯ ಏಳಂಜಿ ಮುಂತಾದವರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯಕ್ಕೆ ಬಾಕಿ ಅನುದಾನ: ಶೀಘ್ರದಲ್ಲೇ ‘ಸಿಹಿ ಸುದ್ದಿ’- ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಳೆಯ ಬಾಕಿ ಅನುದಾನದ ಕುರಿತಂತೆ ಶೀಘ್ರದಲ್ಲೇ...

ಸರ್ಕಾರ ಬೀಳಿಸಲು ಬಂದಿಲ್ಲ, ಅಕ್ರಮ ಪ್ರಶ್ನಿಸಲು ಬಂದಿದ್ದೇನೆ: ಖ್ಯಾತ ಯೂಟ್ಯೂಬರ್ ಧೃವ್ ರಾಠಿ

"ನಾನು ಯಾವುದೇ ಸರ್ಕಾರವನ್ನು ಕೆಡವಲು ಅಥವಾ ಬದಲಾಯಿಸಲು ಇಲ್ಲಿಗೆ ಬಂದಿಲ್ಲ. ನನಗೆ...

ಪ್ರಜಾಪ್ರಭುತ್ವದ ಹಕ್ಕು ಕಿತ್ತುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ, ಜೆನ್-ಝೀಗಳು ಸಹಿಸುವುದಿಲ್ಲ: ಐಶೀ ಘೋಷ್

"ನಾವು ಪ್ರಸ್ತುತ ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ದೇಶದ...

ಮತ ಕಳೆದುಹೋದರೆ ಪ್ರಜಾಪ್ರಭುತ್ವ ಕಳೆದುಹೋಗುತ್ತದೆ: ಅಭಿಜೀತ್ ದೀಪ್ಕೆ

ದೇಶದಲ್ಲಿ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಂಡು...