ಗದಗ | ಕತೆಗಾರ ಮೊಗಳ್ಳಿ ಗಣೇಶ ಅವರು ನೇರ ಮಾತು, ನಿಷ್ಠುರ ವ್ಯಕ್ತಿತ್ವ: ಚಿಂತಕ ಬಸವರಾಜ ಸೂಳಿಬಾವಿ

Date:

“ಮೊಗಳ್ಳಿ ಗಣೇಶ ಅವರ ಸಾವಿನ ನಂತರ ಯಾವುದೇ ಸರಕಾರಿ ಸೌಲಭ್ಯಗಳು ಇಲ್ಲದೆ ಹೋದರು. ನನ್ನನ್ನು ಭೇಟಿ ಮಾಡಿದಾಗ ‘ನನ್ನ ಕೃತಿಗಳನ್ನು ಯಾರು ಓದುತ್ತಿಲ್ಲ’ ಎಂಬ ಮಾತುಗಳನ್ನು ಹೇಳಿದ್ದರು. ಸಾಹಿತ್ಯ ವಲಯದಲ್ಲಿ ಪಿ. ಲಂಕೇಶ ನಿಷ್ಠುರವಾಗಿ ಮಾತನಾಡುತ್ತಿದ್ದರು. ಇವರನ್ನು ಬಿಟ್ಟರೆ ಮೊಗಳ್ಳಿ ಗಣೇಶ ಅವರು ನೇರ ಮಾತು, ನಿಷ್ಠುರವಾಗಿ ಮಾತನಾಡುತ್ತಿದ್ದರು “ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಹೇಳಿದರು.

- Advertisement -

ಗದಗ ಪಟ್ಟಣದ ನಿಸರ್ಗ ಬಡಾವಣೆ ಬಸವ ಸದನದಲ್ಲಿ ಲಡಾಯಿ ಪ್ರಕಾಶನ, ದಲಿತ ಕಲಾ ಮಂಡಳಿ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಕತೆಗಾರ, ಚಿಂತಕಮೊಗಳ್ಳಿ ಗಣೇಶ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ಮೊಗಳ್ಳಿ ಗಣೇಶ್ ಅವರ ಕತೆಗಳನ್ನು ಹಿರಿಯ ತಲೆಮಾರು, ಕಿರಿಯ ತಲೆಮಾರು ಸ್ವಲ್ಪ ಸ್ವಲ್ಪ ಓದಿದ್ದೀವಿ ಎಂದು ಹೇಳುವರು. ಅವರು ಏಳು ಕಥಾ ಸಂಕಲನ, ಕಾವ್ಯ, ವಿಮರ್ಶೆ ಎಷ್ಟೆಲ್ಲ ಬರೆದರೂ ಸಂಪೂರ್ಣವಾಗಿ ಓದಲಿಕ್ಕೆ ಆಗಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.

“ಮೊಗಳ್ಳಿ ಗಣೇಶ ಅವರ ತಕರಾರು ಇರುವುದು ಸಾಹಿತಿಗಳೊಂದಿಗೆ ಅಷ್ಟೇ ಇರಲಿಲ್ಲ. ನನ್ನ ಸಾಹಿತ್ಯ ಓದದ ಜನಸಾಮಾನ್ಯರು, ನನ್ನ ಬಗ್ಗೆ ಪ್ರೀತಿ ಇಲ್ಲದೆ ಇರುವುದು, ನನ್ನ ಸಾಹಿತ್ಯದ ಕುರಿತು ಚರ್ಚೆ ನಡೆಸದೆ ಇರುವುದರಿಂದ ಅವರು ಈ ತಲೆಮಾರಿನೊಂದಿಗೆ ಅಡ್ಡಗೋಡೆಯನ್ನು ನಿರ್ಮಿಸಿಕೊಂಡಿದ್ದರು” ಎಂದು ಅಭಿಪ್ರಾಯ ಪಟ್ಟರು.

“ಮೊಗಳ್ಳಿ ಗಣೇಶ್ ಅವರ ನಿಷ್ಠುರತೆ, ಬಿಡೆಯಿಲ್ಲದ ನೇರ ಮಾತು. ಅವರ ವಿಮರ್ಶೆ ಪರಿಭಾಷೆಯನ್ನು ನಾವು ಕಲಿಯಬೇಕು. ಅವರ ತಕರಾರು ಸಾಹಿತ್ಯದ ಜೊತೆಗೆನೇ ತಕರಾರಿನ ವೈಚಾರಿಕತೆ ಹಿನ್ನಲೆಯಲ್ಲಿಯೇ ಚರ್ಚಿಸಬೇಕು” ಎಂದು ಹೇಳಿದರು.

ಹರಿನಾಥ ಬಾಬು ಅವರು ಪ್ರಸ್ತಾವಿಕವಾಗಿ ಮಾತನಾಡಿದ ಅವರು “ಮೊಗಳ್ಳಿ ಗಣೇಶ ಒಬ್ಬ ಸಾಹಿತಿ, ಚಿಂತಕ, ಪ್ರಾಧ್ಯಾಪಕರಾಗಿ ಏನು ದಕ್ಕಬೇಕಿತ್ತೋ ಅದು ದಕ್ಕಿಲ್ಲ. ಮೊಗಳ್ಳಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರ ವಿಚಾರಗಳನ್ನು, ತಕರಾರುಗಳನ್ನು ಚರ್ಚಿಸಲು ಇದು ಒಂದು ವೇದಿಕೆಯಾಗಿದೆ. ಬದುಕಿನ ಆಶಯಗಳನ್ನು ಇಟ್ಟುಕೊಂಡು ಮುಖಾಮುಖಿ ಆಗುವ ಪ್ರಯತ್ನ ಮಾಡೋಣ” ಎಂದು ಹರಿನಾಥ ಬಾಬುಅವರು ಹೇಳಿದರು.

IMG 20251008 WA0341

“ಮೊಗಳ್ಳಿಯವರ ಅಕಾಲಿಕ ಮರಣ ಶೂನ್ಯವನ್ನು ಉಂಟು ಮಾಡಿದೆ. ಆ ಶೂನ್ಯವನ್ನು ತುಂಬಿಕೊಳ್ಳವುದಕ್ಕೆ ಈ ನುಡಿ ನಮನ ಆಗಿದೆ. ಹಂಪಿ ಪರಿಸರ ಬೌದ್ಧಿಕ ದಾರಿ ದೀಪ ಆದರೆ, ಅದರ ಜೊತೆಗೆ ಈ ನಾಡಿನ ದಲಿತ ಶಕ್ತಿಯಾಗಿ ನೋಡಿದರೆ ಸರಿಯಾಗಬಹುದೇನೋ… ” ಎಂದರು.

“ಅವರು ದಲಿತರಾದ ಕಾರಣಕ್ಕೆ ಕಡಗಣನೆ ಆಗಿರಬಹುದು. ಅವರ ಒಡನಾಡಿಯಾಗಿ, ಅವರ ಕತೆ, ಬರಹದಲ್ಲಿ, ಕಹಿ ಸತ್ಯಗಳನ್ನು ಹೇಳಿದರೂ, ಅವರ ನೇರ ನುಡಿ ಹೀಗೆ ಮಾಡಿರಬಹುದು ಎಂಬ ಸಂದೇಹಗಳು ಹುಟ್ಟಿಕೊಳ್ಳುತ್ತವೆ” ಎಂದರು.

“ಮೊಗಳ್ಳಿಯವರು ಆತ್ಮಕತೆಯಲ್ಲಿ ‘ನಾನು ಏರಿದ ಎತ್ತರಕ್ಕೆ, ನನ್ನ ವಿಮರ್ಶೆ, ಈ ನಾಡಿನ ಜನ ಗುರುತಿಸಲಿಲ್ಲ ಎಂಬ ಅಸಮಾಧಾನ ಅವರಲ್ಲಿ ಇತ್ತು’ ಎಂಬುದನ್ನು ಹಂಚಿಕೊಂಡಿದ್ದಾರೆ” ಎಂದು ನೆನಪಿಸಿದರು.

ಸತೀಶ ಪಾಸಿ ಅವರು ಮಾತನಾಡಿ, “ಅವರು ರಚಿಸಿದ ಸಾಹಿತ್ಯ, ಜಾನಪದ, ವಿಮರ್ಶೆ ಕುರಿತು ಚರ್ಚೆ ನಡೆಸಿದರು. ಮೊಗಳ್ಳಿ ಗಣೇಶ್ ಅವರು ದೇವನೂರು ಮಹದೇವ ಅವರ ದೇಶೀ ಭಾಷೆಯಲ್ಲಿಯೇ ಕತೆಗಳನ್ನು ರಚಿಸಿದರು. ನಂತರ ಇತ್ತೀಚೆಗೆ ಕಾವ್ಯ ರಚಿಸಲು ಆರಂಭಿಸಿದ್ದರು. ಗಟ್ಟಿ ದ್ವನಿ ಇದ್ದುದ್ದನ್ನು ಇದ್ದ ಹಾಗೆ ನೇರ ಮಾತಿನಲ್ಲಿ ಹೇಳುತ್ತಿದ್ದರು. ಪ್ರಶಸ್ತಿ, ಕೇಂದ್ರ ಸಾಹಿತ್ಯ ಪ್ರಶಸ್ತಿಗೆ ಬಕೆಟ್ ಸಂಸ್ಕೃತಿ ಅವರಲ್ಲಿ ಇರಲಿಲ್ಲ. 

ಸಂತೋಷ ಅಂಗಡಿ ಅವರು “ಬುಗುರಿ” ಓದಿದ ಅನುಭವ ಹಚ್ಚಿಕೊಂಡರು. ಡಾ. ಅಂದಯ್ಯ ಅರವಟಗಿಮಠ, ಬಸವ ಅನುಯಾಯಿ ಅಶೋಕ ಬರಗುಂಡಿ ಅವರು ಮಾತನಾಡಿದರು.

ಶರೀಫ ಬಿಳಿಯಲಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ ಆರಂಭಿಸಿದರು. ನುಡಿನಮನ ಕಾರ್ಯಕ್ರಮದಲ್ಲಿ ಎಸ್ ಏನ್ ವೆಂಕಟಾಪುರ, ಡಾ ಜಿ. ಬಿ ಪಾಟೀಲ, ಬಿ ಎ ಹಿರೇಮಠ್, ರಾಮಚಂದ್ರ ಹಂಸನೂರ, ಮುತ್ತು ಬಿಳಿಯಲಿ,  ಮಲ್ಲೇಶ ಹೊಸಮನಿ ಪರಶು ಕಾಳೆ, ಸೋಮಶೇಖರ ಕನಕಾಚಲ ಇನ್ನೂ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...