ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 2026-27ರ ಶೈಕ್ಷಣಿಕ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯೊಂದನ್ನು ನೀಡಿದ್ದು, ಪ್ರಾಯೋಗಿಕ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ.
ಮಂಡಳಿ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ನಿಯಮಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು, ಪ್ರಾಜೆಕ್ಟ್ ಕಾರ್ಯಗಳು ಮತ್ತು ಆಂತರಿಕ ಮೌಲ್ಯಮಾಪನಗಳು 2027ರ ಜನವರಿ 1ರಿಂದ ಪ್ರಾರಂಭವಾಗಲಿವೆ. ಈ ಪರೀಕ್ಷೆಗಳು 2027ರ ಫೆಬ್ರವರಿ 13ರವರೆಗೆ ನಡೆಯಲಿವೆ.
ಇದನ್ನೂ ಓದಿ: ಸಿಬಿಎಸ್‌ಸಿ 10 ಮತ್ತು 12 ನೇ ತರಗತಿ ಫಲಿತಾಂಶ ಪ್ರಕಟ
ಹಿಮಪಾತ ಮತ್ತು ತೀವ್ರ ಚಳಿಯ ಹಿನ್ನೆಲೆಯಲ್ಲಿ ಜನವರಿಯಲ್ಲಿ ಮುಚ್ಚಲ್ಪಡುವ ‘ವಿಂಟರ್ ಬಾಂಡ್’ ಶಾಲೆಗಳಿಗೆ ಪ್ರತ್ಯೇಕ ವೇಳಾಪಟ್ಟಿ ನೀಡಲಾಗಿದೆ. ಈ ಶಾಲೆಗಳಲ್ಲಿ 10 ಮತ್ತು 12ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳು ನವೆಂಬರ್ 9ರಿಂದ ಡಿಸೆಂಬರ್ 19ರವರೆಗೆ ನಡೆಯಲಿವೆ.
ಪ್ರಾಯೋಗಿಕ ಪರೀಕ್ಷೆಗಳು ಮುಗಿದ ತಕ್ಷಣವೇ ಶಾಲೆಗಳು ಮಂಡಳಿಯ ಅಧಿಕೃತ ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ರವಾನಿಸಬೇಕಾಗುತ್ತದೆ. ಪರೀಕ್ಷೆಯ ಪಾರದರ್ಶಕತೆಗಾಗಿ ಪ್ರತಿಯೊಂದು ಬ್ಯಾಚ್‌ನ ಪ್ರಾಯೋಗಿಕ ಪರೀಕ್ಷೆಯ ಗ್ರೂಪ್ ಫೋಟೋವನ್ನು ಜಿಯೋ-ಟ್ಯಾಗ್ ಮಾಡುವ ಮೂಲಕ, ಮಂಡಳಿಯ ಅಧಿಕೃತ ಆ್ಯಪ್ ಲಿಂಕ್ ಬಳಸಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕಾಗಿದೆ. ನಿಗದಿತ ದಿನಾಂಕದ ನಂತರ ಅಂಕಗಳನ್ನು ನಮೂದಿಸಲು ಅವಕಾಶ ನೀಡಲಾಗುವುದಿಲ್ಲ ಎಂದು CBSE ಸ್ಪಷ್ಟಪಡಿಸಿದೆ.




