ಕಂಬ ಕುಸಿದು ಬಾಲಕಿ ಸಾವು ಪ್ರಕರಣ: ಶಾಲಾ ಆಡಳಿತ ಮಂಡಳಿ ವಿರುದ್ಧದ ಪ್ರಕರಣ ಕೈಬಿಟ್ಟ ಸುಪ್ರೀಂ ಕೋರ್ಟ್

Date:

ಶಾಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಂಬ ಕುಸಿದು 12 ವರ್ಷದ ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣದಲ್ಲಿ, ಶಾಲೆಯ ಅಧ್ಯಕ್ಷ ಮತ್ತು ಅಧೀಕ್ಷಕರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಕಂಬದ ನಿರ್ಮಾಣ ಗುಣಮಟ್ಟವನ್ನು ಖಾತರಿಪಡಿಸದ ಲೋಪವೊಂದನ್ನೇ ಆಧರಿಸಿ, ಈ ಪ್ರಕರಣದಲ್ಲಿ ಅವರ ವಿರುದ್ಧ ಅಪರಾಧಿಕ ನರಹತ್ಯೆ ಅಥವಾ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದ ವಿಚಾರಣೆ ಮುಂದುವರಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

- Advertisement -

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನಮೋಹನ್ ಅವರ ಪೀಠವು, ಮತೀನ್ ಶಂಕರರಾವ್ ಭೋಸಲೆ ಹಾಗೂ ಮತ್ತೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ. ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು ಬದಿಗಿರಿಸಿ, ನವೆಂಬರ್ 2ರಂದು ಈ ತೀರ್ಪು ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮಂಗ್ರೂಲ್ ಚವಾಲಾದಲ್ಲಿರುವ ಪ್ರಶ್ನಚಿಹ್ನ ಆದಿವಾಸಿ ಆಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ಏಳನೇ ತರಗತಿ ವಿದ್ಯಾರ್ಥಿನಿ ಭಾರತಿ ಮೇಲೆ ಇಟ್ಟಿಗೆ ಮತ್ತು ಸಿಮೆಂಟ್‌ನ ಕಂಬ ಕುಸಿದುಬಿದ್ದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಳು. ಕಳಪೆ ನಿರ್ಮಾಣಕ್ಕೆ ಅವಕಾಶ ನೀಡಿ, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಿಲ್ಲ ಎಂದು ಆರೋಪಿಸಿ ಆಕೆಯ ತಂದೆ 2020ರ ಫೆಬ್ರುವರಿ 19ರಂದು ದೂರು ನೀಡಿದ್ದರು. ತನಿಖೆಯ ಬಳಿಕ ಐಪಿಸಿ ಸೆಕ್ಷನ್ 304ರ ಜತೆಗೆ ಸೆಕ್ಷನ್ 34ರ ಅಡಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಕೊಲೆಗೆ ಸಮನಾಗದ ಅಪರಾಧಿಕ ನರಹತ್ಯೆಗೆ ಸಂಬಂಧಿಸಿದ ಸೆಕ್ಷನ್ 304ರ ಆರೋಪಕ್ಕೆ, ಸಾವನ್ನುಂಟುಮಾಡುವ ಉದ್ದೇಶ ಅಥವಾ ತನ್ನ ಕೃತ್ಯದಿಂದ ಸಾವು ಸಂಭವಿಸುವ ಸಾಧ್ಯತೆಯ ಅರಿವು ಸೇರಿದಂತೆ ಕಾನೂನು ನಿಗದಿಪಡಿಸಿರುವ ಅಂಶಗಳು ಇರಬೇಕು ಎಂದು ಪೀಠ ವಿವರಿಸಿದೆ. ಕಳಪೆ ನಿರ್ಮಾಣದಿಂದ ವಿದ್ಯಾರ್ಥಿಯ ಸಾವು ಸಂಭವಿಸಬಹುದೆಂಬ ಅರಿವು ಈ ಇಬ್ಬರು ಆಡಳಿತಾಧಿಕಾರಿಗಳಿಗೆ ಇತ್ತೆಂದು, ಅವರ ವಿರುದ್ಧದ ಆರೋಪಗಳಿಂದಲೇ ನಿರ್ಣಯಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.

ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವ ಅಪರಾಧಕ್ಕೆ ಸಂಬಂಧಿಸಿದ ಸೆಕ್ಷನ್ 304ಎ ಅನ್ವಯವಾಗಲು, ಆರೋಪಿಯ ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯವೇ ಸಾವಿಗೆ ನೇರ ಮತ್ತು ಪರಿಣಾಮಕಾರಿ ಕಾರಣವಾಗಿರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಘಟನೆಯ ಹಿನ್ನೆಲೆಯಲ್ಲಿರುವ ಹಲವು ಕಾರಣಗಳಲ್ಲಿ ಆರೋಪಿಯ ಲೋಪವೂ ಒಂದಾಗಿರಬಹುದೆಂಬುದಷ್ಟೇ ಸಾಕಾಗುವುದಿಲ್ಲ. ಸಾವಿನೊಂದಿಗೆ ಆ ಕೃತ್ಯಕ್ಕೆ ನೇರವಾದ ಕಾರಣ ಸಂಬಂಧ ಇರಬೇಕು ಎಂದು ಹೇಳಿದೆ.

ಸಾಮಾನ್ಯ ಅಜಾಗರೂಕತೆ ಮತ್ತು ಕ್ರಿಮಿನಲ್ ಹೊಣೆಗಾರಿಕೆಗೆ ಕಾರಣವಾಗುವ ಗಂಭೀರ ನಿರ್ಲಕ್ಷ್ಯದ ನಡುವೆ ವ್ಯತ್ಯಾಸವಿದೆ ಎಂದೂ ಪೀಠ ತಿಳಿಸಿದೆ. ಪರಿಹಾರ ಪಾವತಿಸಬೇಕಾದ ನಾಗರಿಕ ಹೊಣೆಗಾರಿಕೆ ಉದ್ಭವಿಸಿದ ಮಾತ್ರಕ್ಕೆ, ಅದು ಸ್ವಯಂಚಾಲಿತವಾಗಿ ಕ್ರಿಮಿನಲ್ ಹೊಣೆಗಾರಿಕೆಯಾಗುವುದಿಲ್ಲ. ಅಪರಾಧಿಕ ನಿರ್ಲಕ್ಷ್ಯವನ್ನು ನಿರ್ಧರಿಸುವಾಗ ಅದರ ತೀವ್ರತೆ, ಅಪಾಯದ ಕಡೆಗಿನ ಅಲಕ್ಷ್ಯ ಹಾಗೂ ಪ್ರಕರಣದ ಸಂದರ್ಭಗಳನ್ನು ಪರಿಗಣಿಸಬೇಕು ಎಂದು ವಿವರಿಸಿದೆ.

ಕಂಬದ ನಿರ್ಮಾಣವನ್ನು ವಾಸ್ತವವಾಗಿ ಗುತ್ತಿಗೆದಾರ ಮತ್ತು ಅವರ ತಂಡ ನಿರ್ವಹಿಸುತ್ತಿತ್ತು ಎಂಬುದನ್ನು ಪೀಠ ಗಮನಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಗುತ್ತಿಗೆದಾರರು ಅಗತ್ಯ ಕಾಳಜಿ ವಹಿಸಿದ್ದರೆ ಘಟನೆ ತಪ್ಪಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ. ಶಾಲಾ ಆಡಳಿತದ ಇಬ್ಬರ ಕಡೆಯಿಂದ ಲೋಪವಿತ್ತು ಎಂದು ಭಾವಿಸಿದರೂ, ಅದನ್ನೇ ಬಾಲಕಿಯ ಸಾವಿಗೆ ತಕ್ಷಣದ ಮತ್ತು ನೇರ ಕಾರಣವೆಂದು ಪರಿಗಣಿಸಲಾಗದು ಎಂದು ಹೇಳಿದೆ.

ಗುತ್ತಿಗೆದಾರರ ಹೊಣೆಗಾರಿಕೆ ಕುರಿತ ತನ್ನ ಅಭಿಪ್ರಾಯ ಮೇಲ್ನೋಟದ್ದು ಮಾತ್ರ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಗುತ್ತಿಗೆದಾರರು ಪ್ರಕರಣದಲ್ಲಿ ಆರೋಪಿಯಾಗಿದ್ದರೆ, ವಿಚಾರಣೆಯಲ್ಲಿ ಸಲ್ಲಿಕೆಯಾಗುವ ಸಾಕ್ಷ್ಯಗಳ ಆಧಾರದಲ್ಲೇ ಅವರ ಹೊಣೆಗಾರಿಕೆ ನಿರ್ಧಾರವಾಗಬೇಕು ಎಂದು ತಿಳಿಸಿದೆ.

ಬಾಲಕಿಯ ಸಾವಿನ ಬಗ್ಗೆ ಪೀಠ ತೀವ್ರ ನೋವು ವ್ಯಕ್ತಪಡಿಸಿದೆ. ತನ್ನದೇ ಶಾಲೆಯ ಕಂಬದಡಿ 12 ವರ್ಷದ ಬಾಲಕಿ ಸಿಲುಕಿ ಮೃತಪಟ್ಟಿರುವುದನ್ನು ನೆನೆಸಿಕೊಂಡರೆ ಹೃದಯ ನೋವಿನಿಂದ ಮಿಡಿಯುತ್ತದೆ; ಆಕೆಯ ಪೋಷಕರು ಅನುಭವಿಸುತ್ತಿರುವ ದುಃಖವನ್ನು ಊಹಿಸಬಹುದು ಎಂದು ಹೇಳಿದೆ. ಆದರೆ, ಇಂತಹ ನೋವಿನ ಭಾವನೆಗಳು ಕಾನೂನಿನ ಆಧಾರದಲ್ಲಿ ನ್ಯಾಯನಿರ್ಣಯ ಮಾಡುವ ಪ್ರಕ್ರಿಯೆಯನ್ನು ಮಸುಕಾಗಿಸಬಾರದು. ಕಾನೂನು ಕಠಿಣವೆನಿಸಿದರೂ ಅದನ್ನು ಗೌರವಿಸಬೇಕು ಎಂದು ತಿಳಿಸಿದೆ.

ಅಂತಿಮವಾಗಿ, ಈ ಇಬ್ಬರು ಮೇಲ್ಮನವಿದಾರರ ವಿರುದ್ಧದ ಆರೋಪಪಟ್ಟಿಯಿಂದ ಉದ್ಭವಿಸಿದ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಪಡಿಸಿದ ಪೀಠವು, ಇತರ ಸಹಆರೋಪಿಗಳಿದ್ದರೆ ಅವರ ವಿರುದ್ಧ ಕಾನೂನಿನ ಪ್ರಕಾರ ವಿಚಾರಣೆ ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಜನರ ಕನಸುಗಳಿಗೆ ರೆಕ್ಕೆ ಮೂಡಿಸಿದ ‘ಬೆಂಗಳೂರು ಕೌಶಲ್ಯ ಶೃಂಗಸಭೆ’ ಯಶಸ್ವಿ ಸಂಪನ್ನ

ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ...

ಬೀದರ್ | 436 ಅಂಗನವಾಡಿ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನ

ಬೀದರ್ ಜಿಲ್ಲೆಯ ವಿವಿಧ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ...

ರಸ್ತೆ ಅಭಿವೃದ್ಧಿಗೆ 20000 ಕೋಟಿ ರೂಪಾಯಿ ಸಂಪುಟ ಅನುಮೋದನೆ

ಲೋಕೋಪಯೋಗಿ ಇಲಾಖೆಯಿಂದ ಒಟ್ಟು 20,000 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಹೆದ್ದಾರಿ,...

SC-ST ಮೀಸಲಾತಿ ರಕ್ಷಣೆಗೆ ಸುಪ್ರೀಂಗೆ ಮೇಲ್ಮನವಿ, 9ನೇ ಅನುಸೂಚಿಗೆ ಸೇರ್ಪಡೆ ಅಗತ್ಯ: ನ್ಯಾ. ನಾಗಮೋಹನ್ ದಾಸ್

ಪ.ಜಾತಿ ಮತ್ತು ಪ.ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ...