ಪೂರ್ಣಗೊಳ್ಳದ ಕಾಮಗಾರಿ | ಮಂಗಳೂರು – ಕಾಸರಗೋಡು ರಸ್ತೆಯಲ್ಲಿ ಹೆಚ್ಚಿದ ಅಪಘಾತ

Date:

ಹೊಸದಾಗಿ ನಿರ್ಮಾಣವಾಗಿರುವ ಮಂಗಳೂರು ತಲಪಾಡಿ – ಕೇರಳ ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ವಾಹನಗಳು ಹಾಗೂ ಜೀವ ಹಾನಿ ಸಂಭವಿಸುತ್ತಿರುವುದು ಆಗಾಗ ವರದಿಯಾಗುತ್ತಿವೆ.

- Advertisement -

ಕೇರಳ ರಾಜ್ಯದ ಗಡಿಯಾದ ಮಂಗಳೂರಿನ ತಲಪಾಡಿಯಿಂದ – ಕಾಸರಗೋಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ಅನ್ನು ಆರು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಹೆದ್ದಾರಿಯುದ್ದಕ್ಕೂ ಎರಡೂ ಬದಿಯಲ್ಲಿ ಸರ್ವೀಸ್‌ ರಸ್ತೆಯನ್ನು ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣದ ಕಾಮಗಾರಿ ಶೇ. 80ರಷ್ಟು ಮುಕ್ತಾಯವಾಗಿದ್ದು ಉಳಿದ ಕಾಮಗಾರಿ ಪ್ರಗತಿಯಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಹೆದ್ದಾರಿಯ ಕುಂಬ್ಳೆ ಶಿರಿಯಾ – ಉಪ್ಪಳ ಗೇಟ್‌ – ಮಂಜೇಶ್ವರ ಪೆಟ್ರೋಲ್‌ ಬಂಕ್‌ವರೆಗೆ ಅಪಘಾತ ವಲಯಗಳಾಗಿ ಮಾರ್ಪಟ್ಟಿದೆ. ಪದೇ ಪದೇ ಅಪಘಾತಗಳು ಸಂಭವಿಸಿ ಹಲವು ವಾಹನಗಳು ಜಖಂಗೊಂಡಿವೆ. ಅಲ್ಲದೆ ಜೀವ ಹಾನಿ, ಹಲವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗುವ ಘಟನೆಗಳು ಹೆಚ್ಚುತ್ತಿವೆ. ಹಿಂದೆ ಈ ರಸ್ತೆ ದ್ವಿಪಥವಾಗಿತ್ತು. ವಾಹನ ಸಂಚಾರ ದಟ್ಟಣೆಯಿಂದ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದವು. ಇದೀಗ ರಸ್ತೆ ಷಟ್ಪಥವಾಗಿ ಅಭಿವೃದ್ಧಿಗೊಂಡ ಬಳಿಕವೂ ಅಪಘಾತಗಳು ಮರುಕಳಿಸುತ್ತಲೇ ಇವೆ.

ಸುಸಜ್ಜಿತವಾಗಿ ನಿರ್ಮಾಣವಾದ ಹೆದ್ದಾರಿಯಲ್ಲಿ ಮಿತಿ ಮೀರಿದ ವೇಗದ ಚಾಲನೆಯೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಜಾಗರೂಕತೆಯಿಂದ, ಹೆದ್ದಾರಿಯಲ್ಲಿ ಸೂಚಿಸಿದಷ್ಟೇ ವೇಗದಿಂದ ಚಾಲನೆ ಮಾಡಿದರೆ ಅಪಘಾತಗಳನ್ನು ತಪ್ಪಿಸಬಹುದು. ಹೆಚ್ಚಿನ ಅಪಘಾತಗಳಿಗೆ ಚಾಲಕರ ಅತಿಯಾದ ವೇಗ, ಅಜಾಗರೂಕತೆಯೇ ಕಾರಣ ಎಂದು ಮಂಜೇಶ್ವರ, ಉಪ್ಪಳ, ಕುಂಬ್ಳೆ ಪರಿಸರದ ನಾಗರಿಕರ ಆರೋಪವಾಗಿದೆ.

ಕುಂಬ್ಳೆ ಉಪ್ಪಳ ಗೇಟ್ ಬಳಿ ಮೇ 20ರಂದು ಸಂಜೆ ಸಂಭವಿಸಿದ ಸರಣಿ ಅಪಘಾತದಲ್ಲಿ ಆಂಬುಲೆನ್ಸ್ ನಿಂದ ಹೊರಗೆ ಎಸೆಯಲ್ಪಟ್ಟು ಕಣ್ಣೂರು ವಾರಂ ನಿವಾಸಿ ಶಾಹಿನಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಶಾಹಿನಾ ಅವರ ಪುತ್ರಿ ರಿಯಾ ಫಾತಿಮಾ, ಸಹೋದರಿ ಶಜಿನಾ, ಆಸೀಫ್‌, ಚಾಲಕ ಅಕ್ರಂ ಗಾಯಗೊಂಡಿದ್ದರು. ಉಪ್ಪಳ ಗೇಟಿನಲ್ಲಿ ಕಾರೊಂದರ ಹಿಂಭಾಗಕ್ಕೆ ಮತ್ತೊಂದು ಕಾರು ಢಿಕ್ಕಿ ಹೊಡೆದಿದೆ. ಅದರ ಹಿಂದೆ ಸಂಚರಿಸುತ್ತಿದ್ದ ಆಂಬುಲೆನ್ಸ್ ಕೂಡಾ ಕಾರಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ.

ಕಾರು ಅಪಘಾತ 5

“ರಾಷ್ಟ್ರೀಯ ಹೆದ್ದಾರಿಗೆ ಹೊಸದಾಗಿ ಡಾಂಬರು ಹಾಕಿರುವುದರಿಂದ ಮಳೆ ನೀರು ಬಿದ್ದಾಗ ರಸ್ತೆಯಲ್ಲಿ ಆಯಿಲ್‌ ಅಂಶ ಕಂಡುಬರುತ್ತಿದೆ. ಜೋರು ಮಳೆ ಬಂದಾಗ ರಸ್ತೆ ಜಾರುವ ಅಪಾಯವೂ ಹೆಚ್ಚಿದೆ. ಮಳೆ ಸುರಿಯುವ ಸಂದರ್ಭದಲ್ಲಿ ವಾಹನಗಳ ಸವಾರರು ಇನ್ನಷ್ಟು ಜಾಗೂರುಕತೆಯಿಂದ ಸಂಚರಿಸಬೇಕು. ವಾಹನ ಸವಾರರು ನಿಗದಿತ ವೇಗ ಮತ್ತು ವಾಹನಗಳ ನಡುವೆ ಹೆಚ್ಚಿನ ಅಂತರ ಕಾಯ್ದುಕೊಳ್ಳಬೇಕು. ಮಳೆ ಸುರಿಯುತ್ತಿರುವ ಸಮಯದಲ್ಲೇ ಹೆಚ್ಚಿನ ಅಪಘಾತಗಳು ಕಂಡು ಬರುತ್ತಿದೆ” ಎಂದು ಉಪ್ಪಳ ನಿವಾಸಿ ಫಾಝಿಲ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಹೆದ್ದಾರಿ ಕಾಮಗಾರಿ ಸಂರ್ಪೂಣಗೊಂಡಿಲ್ಲ. ಇನ್ನೂ ಶೇ. 20ರಷ್ಟು ಕಾಮಗಾರಿ ಬಾಕಿ ಇದೆ. ಸರ್ವೀಸ್ ರಸ್ತೆಗೆ ಇರುವ ತಿರುವುಗಳ ಬಳಿ ಸೂಚನಾ ಫಲಕಗಳನ್ನು ಅಳವಡಿಸುವ ಕೆಲಸಗಳು ಕೂಡಾ ಬಾಕಿ ಇದೆ. ಹೆದ್ದಾರಿ ಅಭಿವೃದ್ಧಿಗೊಂಡ ಹಿನ್ನೆಲೆಯಲ್ಲಿ ಹೆದ್ದಾರಿ ಹಾದು ಹೋದ ಊರಿನ ಗುರುತು ಸಿಗುವುದು ಕಷ್ಟಕರವಾಗಿದೆ. ವೇಗವಾಗಿ ಬರುವ ವಾಹನಗಳ ಸವಾರರು ತಮ್ಮ ಊರಿನ ಸರ್ವೀಸ್‌ ರಸ್ತೆಗೆ ತಿರುವು ಪಡೆಯಲು ಏಕಾಏಕಿ ಬ್ರೇಕ್‌ ಹಾಕುವುದರಿಂದಲೂ ಅಪಘಾತಗಳು ಸಂಭವಿಸುತ್ತಿದೆ ಎಂದು ಅಪಘಾತಗಳ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

“ಮಂಗಳೂರು, ಉಡುಪಿ ಸಹಿತ ಕರ್ನಾಟಕ ಭಾಗದಿಂದ ಅಪರೂಪಕ್ಕೆ ಕೇರಳಕ್ಕೆ ಬರುವ ವಾಹನಗಳ ಸವಾರರು ಅತೀ ಜಾಗೂರುಕತೆಯಿಂದ ವಾಹನ ಚಾಲನೆ ಮಾಡಬೇಕು. ಹೆಚ್ಚಿನ ತಿರುವು, ಹೆದ್ದಾರಿಯ ಪ್ರವೇಶ ದ್ವಾರ, ನಿರ್ಗಮನ ದ್ವಾರಗಳ ಅರಿವು ಅವರಿಗೆ ಇಲ್ಲದಿರುವುದರಿಂದ ಅಪಘಾತಗಳು ಸಂಭವಿಸುವ ಅಪಾಯ ಹೆಚ್ಚಿರುತ್ತದೆ. ಯಾವುದೇ ಕಾರಣಕ್ಕೂ ಅವಸರದ ಚಾಲನೆ ಮಾಡಬಾರದು. ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ನಿಧಾನವಾಗಿ ಸಂಚರಿಸಬೇಕು” ಎಂದು ಮಂಜೇಶ್ವರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಅನೂಬ್‌ ಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ ಬಾನು ಮುಷ್ತಾಕ್‌ ಬರಹಕ್ಕೆ ಇನ್ನಾದರೂ ʼಸಾಹಿತ್ಯಕ ಮನ್ನಣೆʼ ಸಿಗಲಿ

ರಸ್ತೆ ಕಾಮಗಾರಿ ಸಂಪೂರ್ಣಗೊಳ್ಳದ ಕಾರಣ ಕೆಲವು ಭಾಗದಲ್ಲಿ ಏಕಮುಖ ಸಂಚಾರ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹೀಗಾಗಿಯೂ ಕೆಲವು ಅಪಘಾತಗಳು ಸಂಭವಿಸಿವೆ. ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಅಪಘಾತ ಮುಕ್ತವಾಗಲಿದೆ. ಕಾಮಗಾರಿ ಮುಗಿಯುವ ವರೆಗೆ ರಸ್ತೆಯಲ್ಲಿ ಅಳವಡಿಸಿರುವ ಶೈನ್‌ ಬೋರ್ಡ್ ಗಳು, ಸೂಚನಾ ಫಲಕಗಳನ್ನು ಅನುಸರಿಸುತ್ತಾ ಸಂಚರಿಸಬೇಕು. ಹೈ ಸ್ಪೀಡ್‌ ಪಥ ಆಗಿರುವುದರಿಂದ ವಾಹನ ಸವಾರರು ಮೊಬೈಲ್‌ ಫೋನ್‌ನಲ್ಲಿ ಹಾಗೂ ವಾಹನದಲ್ಲಿರುವ ಇತರರ ಜೊತೆ ಮಾತನಾಡಬಾರದು. ಇದರಿಂದ ಗಮನ ಬೇರೆಡೆಗೆ ತಿರುಗಿ ಅಪಘಾತಗಳು ಸಂಭವಿಸುತ್ತಿವೆ. ಎಲ್ಲಾ ಸವಾರರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿದಾಗ ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯಕ್ಕೆ ಬಾಕಿ ಅನುದಾನ: ಶೀಘ್ರದಲ್ಲೇ ‘ಸಿಹಿ ಸುದ್ದಿ’- ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಳೆಯ ಬಾಕಿ ಅನುದಾನದ ಕುರಿತಂತೆ ಶೀಘ್ರದಲ್ಲೇ...

ಸರ್ಕಾರ ಬೀಳಿಸಲು ಬಂದಿಲ್ಲ, ಅಕ್ರಮ ಪ್ರಶ್ನಿಸಲು ಬಂದಿದ್ದೇನೆ: ಖ್ಯಾತ ಯೂಟ್ಯೂಬರ್ ಧೃವ್ ರಾಠಿ

"ನಾನು ಯಾವುದೇ ಸರ್ಕಾರವನ್ನು ಕೆಡವಲು ಅಥವಾ ಬದಲಾಯಿಸಲು ಇಲ್ಲಿಗೆ ಬಂದಿಲ್ಲ. ನನಗೆ...

ಪ್ರಜಾಪ್ರಭುತ್ವದ ಹಕ್ಕು ಕಿತ್ತುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ, ಜೆನ್-ಝೀಗಳು ಸಹಿಸುವುದಿಲ್ಲ: ಐಶೀ ಘೋಷ್

"ನಾವು ಪ್ರಸ್ತುತ ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ದೇಶದ...

ಮತ ಕಳೆದುಹೋದರೆ ಪ್ರಜಾಪ್ರಭುತ್ವ ಕಳೆದುಹೋಗುತ್ತದೆ: ಅಭಿಜೀತ್ ದೀಪ್ಕೆ

ದೇಶದಲ್ಲಿ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಂಡು...