ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ತಯಾರಕರ ಸಂಘಟನೆ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರಗೆ ಮನವಿ ಸಲ್ಲಿಸಿದರು.
ದಾವಣಗೆರೆಯ ಜಿಎಂಐಟಿ ಕ್ಯಾಂಪಸ್‌ನ ಆವರಣದಲ್ಲಿರುವ ಅತಿಥಿ ಗೃಹಕ್ಕೆ ತೆರಳಿ ಎಐಟಿಯುಸಿ ನೇತೃತ್ವದ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಮತ್ತು ಬಿಸಿಯೂಟ ತಯಾರಕರ ಸಂಘಟನೆ ಕಾರ್ಯಕರ್ತೆಯರು ಜಿ.ಎಂ.ಸಿದ್ದೇಶ್ವರ ಎದುರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಕೆಲಸಕ್ಕೆ ತಕ್ಕಂತೆ ವೇತನ ದೊರೆಯುತ್ತಿಲ್ಲ. ಸಂಸದರ ಗಮನಕ್ಕೆ ತಂದು ಮುಂಬರುವ ಬಜೆಟ್ ನಲ್ಲಿ ಸ್ಕೀಮ್ ವರ್ಕರ್ಸ್ ಗಳಿಗೆ ಕನಿಷ್ಠ ವೇತನ ಜಾರಿಗೊಳಿಸುವುದು, ನಿವೃತ್ತಿ ಪಿಂಚಣಿ ಜಾರಿಗೊಳಿಸುವುದು, ಆರೋಗ್ಯ ವಿಮೆ, ಗ್ರಾಚ್ಯುಟಿ, ಮರಣ ಪರಿಹಾರ ಹಾಗೂ ಮತ್ತಿತರೆ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ಒತ್ತಾಯ ಮಾಡಬೇಕೆಂದರು.
ಇದಕ್ಕೆ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿ ಕೇಂದ್ರದಲ್ಲಿ ಈ ಕುರಿತು ಸಂಬಂಧಿಸಿದಂತೆ ಇಲಾಖೆ ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಒತ್ತಾಯಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ವೇಳೆ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಆವರಗೆರೆ ಚಂದ್ರು, ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಜಿಲ್ಲಾಧ್ಯಕ್ಷೆ ಕಾಂ ಎಂ.ಬಿ. ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಮಲ್ಲಮ್ಮ, ಖಜಾಂಚಿ ವಿಶಾಲಾಕ್ಷಿ, ಮುಖಂಡರುಗಳಾದ ನಿರ್ಮಲ, ಗೀತಾ, ರೇಣುಕಮ್ಮ, ಅಶ್ವಿನಿ, ಜಿಲ್ಲಾ ಸಂಚಾಲಕ ಆವರಗೆರೆ ವಾಸು, ಎಐವೈಎಫ್‌ನ ಕೆರನಹಳ್ಳಿ ರಾಜು, ಸುಶೀಲಮ್ಮ, ಭರಮಕ್ಕ, ಬಿಸಿಯೂಟ ತಯಾರಕರ ಮುಖಂಡರುಗಳಾದ ಸರೋಜಾ, ಜ್ಯೋತಿ ಲಕ್ಷ್ಮಿ, ಪದ್ಮಾ, ಸುಭದ್ರಮ್ಮ, ಮಂಜುಳಾ ಇತರ ಕಾರ್ಯಕರ್ತರು ಹಾಜರಿದ್ದರು.