ಬಿಸಿಯೂಟಕ್ಕೂ ಖಾಸಗೀಕರಣದ ಬಿಸಿ! ಕೆಲಸ ಕಸಿಯುವ ಹುನ್ನಾರ ವಿರೋಧಿಸಿ ಪ್ರತಿಭಟನೆ

Date:

ಬಿಸಿಯೂಟ ತಯಾರಕ ಮಹಿಳೆಯರನ್ನು ಕೆಲಸದಿಂದ ವಜಾಗೊಳಿಸಿ, ಎನ್‌ಜಿಓ ಖಾಸಗಿ ಸಂಘ ಸಂಸ್ಥೆಗಳಿಗೆ ಅಡುಗೆ ತಯಾರಿಕೆ ವಹಿಸುವ ಸರ್ಕಾರದ ಹುನ್ನಾರ ವಿರೋಧಿಸಿ ದಾವಣಗೆರೆ ಜಿಲ್ಲಾ ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಎಐಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ರಾಜ್ಯ ಸಮಿತಿ ಕರೆ ಮೇರೆಗೆ ದಾವಣಗೆರೆ ಜಿಲ್ಲೆಯಲ್ಲಿ ಶಾಲೆಗಳಲ್ಲಿ ಅಡುಗೆ ತಯಾರಿಕೆ ಬಂದ್ ಮಾಡಿ ಪ್ರತಿಭಟಿಸಲಾಯಿತು.

ಬಿಸಿಯೂಟ ತಯಾರಕರು ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಫೆಡರೇಶನ್‌ನ ರಾಜ್ಯಾಧ್ಯಕ್ಷ ಆವರಗೆರೆ ಚಂದ್ರು ಮಾತನಾಡಿ, ಕಳೆದ 25 ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಅಡುಗೆಯವರಾಗಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರನ್ನು ಕೆಲಸದಿಂದ ಬಿಡಿಸಿ ಎನ್ ಜಿ ಒ ಖಾಸಗಿ ಸಂಘ ಸಂಸ್ಥೆಗಳಿಗೆ ವಹಿಸುವ ಸರ್ಕಾರದ ಹುನ್ನಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“ಶಾಲೆಗಳಲ್ಲಿ ಅಡುಗೆ ಕೆಲಸದ ಬಗ್ಗೆ ಮಧ್ಯಾಹ್ನ ಉಪಹಾರ ಯೋಜನೆ ಕೈಪಿಡಿಯಲ್ಲಿ ಆ ಶಾಲೆಯ ಮುಖ್ಯ ಅಡಿಗೆಯವರು ಅಡುಗೆ ಕೆಲಸದ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಮಧ್ಯಾಹ್ನ ಉಪಹಾರ ಯೋಜನೆಯ ಕೈಪಿಡಿಯಲ್ಲಿದ್ದರೂ, ಶಿಕ್ಷಕರ ಸಂಘವೊಂದು ರಾಜ್ಯ ನಿರ್ದೇಶಕರಿಗೆ ಮನವಿ ಸಲ್ಲಿಸಿ ಶಿಕ್ಷಕರ ಕೆಲಸ ಕಡಿಮೆಗೊಳಿಸಲು ಎನ್‌ಜಿಒ ಖಾಸಗಿ ಸಂಘ ಸಂಸ್ಥೆ, ಕ್ಲಸ್ಟರ್ ಕಿಚನ್ ಸೆಂಟರ್ ಮೂಲಕ ಅಡಿಗೆ ತಯಾರಿಸಿ ವಿತರಿಸುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ” ಎಂದಿದ್ದಾರೆ.

- Advertisement -

“ಬಿಸಿಯೂಟ ತಯಾರಿಕೆಯಲ್ಲಿ ರಾಜ್ಯದ ಯಾವ ಶಿಕ್ಷಕರು ಭಾಗವಹಿಸುವುದು ಬೇಡ, ಅದು ಕೈಪಿಡಿಯಲ್ಲಿ ಎಲ್ಲಿಯೂ ಇಲ್ಲ ಎಲ್ಲಾ ಜವಾಬ್ದಾರಿಯೂ ಮುಖ್ಯ ಅಡಿಗೆಯವರೇ ಮಾಡಬೇಕೆಂದು ಕೈಪಿಡಿಯಲ್ಲಿ ಇದೆ. ಮಧ್ಯಾಹ್ನ ಉಪಹಾರ ಯೋಜನೆ ರಾಜ್ಯ ನಿರ್ದೇಶಕರು, ಶಿಕ್ಷಕರ ಸಂಘ ಕೊಟ್ಟಿರುವ ಮನವಿ ಪತ್ರವನ್ನೇ ನೆಪವಾಗಿಟ್ಟುಕೊಂಡು ಏಕಪಕ್ಷೀಯವಾಗಿ ತೀರ್ಮಾನಿಸಿ ಕ್ಲಸ್ಟರ್ ಮಟ್ಟದ ಅಡುಗೆ ಕೇಂದ್ರದ ಮೂಲಕ ಅಡುಗೆ ತಯಾರಿಸಿ ವಿತರಿಸಲು ಮುಂದಾಗಿರುವುದನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ ಮತ್ತು ರಾಜ್ಯಾದ್ಯಂತ ಹಾಲಿ ಕೆಲಸ ನಿರ್ವಹಿಸುತ್ತಿರುವ ಒಂದು ಲಕ್ಷದ ಹದಿಮೂರು ಸಾವಿರ ಬಿಸಿಯೂಟ ತಯಾರಕ ಮಹಿಳೆಯರನ್ನು ಕೆಲಸದಿಂದ ಬಿಡಿಸಿ ಬೀದಿ ಪಾಲು ಮಾಡಲು ಹುನ್ನಾರ ನಡೆಸಿರುವ ಸರ್ಕಾರದ ಧೋರಣೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಿ.ಡಿ. ಕೋಸಾಂಬಿ | ಜ್ಞಾನದ ಹಲವು ಜಗತ್ತುಗಳನ್ನು ಶೋಧಿಸಿದ...

ಡಿ.ಡಿ. ಕೋಸಾಂಬಿಯವರ ಬದುಕು ಕೇವಲ ಯಶಸ್ಸಿನ ಕಥೆಯಷ್ಟೇ ಅಲ್ಲ; ಅದು ಅಸಾಧಾರಣ ಪ್ರತಿಭೆ ಹಾಗೂ ಮನುಷ್ಯ ಸಹಜ ಭಾವನೆಗಳ ನಡುವಿನ ಸುಂದರ ಪಯಣ. ತಮಿಳು ಇತಿಹಾಸಕಾರ ಎ.ಆರ್. ವೆಂಕಟಾಚಲಪತಿ ಅವರಂತಹ ವಿಮರ್ಶಕರು ಈ...

ಒಂದು ಬದಿ ಅಧಿಕಾರ ನಿರಾಕರಣೆ, ಮತ್ತೊಂದು ಬದಿ ಕರ್ತವ್ಯದ...

ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯ ಆಯ್ದ ಭಾಗಗಳು ಕೇವಲ ರಾಜಕೀಯ ಇತಿಹಾಸದ ದಾಖಲೆಯಷ್ಟೇ ಅಲ್ಲ, ಬದಲಿಗೆ ಮನುಷ್ಯನ ಮನಸ್ಸಿನ ಆಳದ ಸಂವೇದನೆಗಳ ಕನ್ನಡಿ. ಅಧಿಕಾರ ಸಿಕ್ಕ ಕೂಡಲೇ ಅದನ್ನು ಬಾಚಿಕೊಳ್ಳಲು ಹಾತೊರೆಯುವ...

ಕಾಲಜ್ಞಾನ ಸಾರಿದ ಮಂಟೇದಲಿಂಗಯ್ಯ’: ನೀಲಗಾರರ ಸ್ವರವಚನಗಳಲ್ಲಿ ಅಡಗಿರುವ ಜನಪದ...

ಕಾಲದ ಬದಲಾವಣೆಯನ್ನು ಗ್ರಹಿಸುವ ಕಾಲಜ್ಞಾನ, ಎಲ್ಲರೊಳಗೂ ಬೆಳಗುವ ಪರಂಜ್ಯೋತಿಯ ತತ್ವ, ಕಪಟ ಧಾರ್ಮಿಕ ಆಚರಣೆಗಳನ್ನು ಪ್ರಶ್ನಿಸುವ ಮಂಟೇಸ್ವಾಮಿಯ ನಿಲುವು ಮತ್ತು ತಲೆಮಾರುಗಳಿಂದ ಈ ಮಹಾಕಾವ್ಯವನ್ನು ಜೀವಂತವಾಗಿಟ್ಟಿರುವ ನೀಲಗಾರರ ಗಾಯನ ಪರಂಪರೆ ತಂಬೂರಿಯ ನಾದ ಮೊಳಗುತ್ತದೆ....

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಂಘಟನೆಯ ಜಿಲ್ಲಾಧ್ಯಕ್ಷೆ ಕಾಂ ಮಳಲ್ಕೆರೆ ಜಯಮ್ಮ ಮುಖಂಡರುಗಳಾದ ಸಿ ರಮೇಶ್ ದಾಸರ್, ಜಿ ಯಲ್ಲಪ್ಪ, ಎ ತಿಪ್ಪೇಶ್ ಸರೋಜಾ ಮತ್ತಿತರರು ಮಾತನಾಡಿದರು. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬಿಸಿಯೂಟ ಸಿಬ್ಬಂದಿ ಮಹಿಳೆಯರು ಭಾಗವಹಿಸಿದ್ದರು.

ನಗರದ ಅಶೋಕ ರಸ್ತೆಯಲ್ಲಿನ ಕಾಂ ಪಂಪಾಪತಿ ಭವನದಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗಾಂಧಿ ಸರ್ಕಲ್, ಪಿ ಬಿ ರಸ್ತೆ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿ ಬಳಿ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ನಂತರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ದೇವಸುಗೂರಿನಲ್ಲಿ ಶಾಸಕ ಬಸನಗೌಡ ದದ್ದಲ್ ನೇತೃತ್ವದಲ್ಲಿ ಪ್ರಜಾ ಸೇವೆ ಕಾರ್ಯಕ್ರಮ

ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರ ನೇತೃತ್ವದಲ್ಲಿ ಜನರ ಮನೆಬಾಗಿಲಿಗೆ ಆಡಳಿತವನ್ನು...

ನಕಲಿ ಕೋರ್ಟ್ ಆದೇಶ ಆಧರಿಸಿ ಬೆಟ್ಟಿಂಗ್ ವೆಬ್‌ಸೈಟ್‌ ಬ್ಲಾಕ್‌: ಟೆಲಿಕಾಂ ಕಾರ್ಯದರ್ಶಿಗೆ ಪ್ರಧಾನಿ ಕಚೇರಿ ಸಮನ್ಸ್

ನಕಲಿ ನ್ಯಾಯಾಲಯದ ಆದೇಶಗಳನ್ನು ಆಧರಿಸಿ 100ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ (ಬ್ಲಾಕ್)...

ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿ ಇಲ್ಲವೇ ಎಕರೆಗೆ 50,000 ಪರಿಹಾರ ನೀಡಿ: ರೈತರ ಒತ್ತಾಯ

ತುಂಗಭದ್ರಾ ಜಲಾಶಯದಿಂದ ರೈತರ ಕೃಷಿ ಬೆಳೆಗಳ ರಕ್ಷಣೆಗಾಗಿ ಡಿಸೆಂಬರ್ 31ರವರೆಗೆ ತುಂಗಭದ್ರಾ...

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಸಹಕರಿಸಬೇಕು: ಡಿಕೆಶಿ

"ತಮಿಳುನಾಡಿನ 177 ಟಿಎಂಸಿ ನೀರಿನ ಹಕ್ಕಿನ ರಕ್ಷಣೆಯ ಜೊತೆಗೆ ಕರ್ನಾಟಕದ ಹಿತಾಸಕ್ತಿ...