ಮುಂದಿನ ಪೀಳಿಗೆಗಾಗಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ. ವೇಷ, ಭಾಷೆ, ಸಂಸ್ಕೃತಿ ಬೇರೆಯಾದರು ನಾವೆಲ್ಲರೂ ಭಾರತ ಮಾತೆಯ ಮಕ್ಕಳು. ಎನ್‌ಎಸ್‌ಎಸ್ ಗೀತೆ ರಚಿಸಿದ ಡಾ. ಎಂ ಬಿ ದಿಲ್ ಶಾದ್ ಅವರ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ರೂಪಿಸಿಕೊಳ್ಳಬೇಕು ಎಂದು ಕವಿವಿ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಕಾರ್ಯಕ್ರಮ ಸಂಯೋಜಕ ಡಾ ಎಂ ಬಿ ದಳಪತಿ ಅವರು ಹೇಳಿದರು.
ಧಾರವಾಡ ನಗರದ ಅಂಜುಮನ್ ಕಾಲೇಜಿನ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ಅಂಜುಮನ್ ಕಾಲೇಜ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಂಸ್ಕೃತಿಕ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಬೇರೆ ಬೇರೆ ಭಾಷೆ, ಸಂಸ್ಕೃತಿ ಇದ್ದರೂ ಕೂಡ ನಮ್ಮ ದೇಶ ಏಕತೆ ಮತ್ತು ಭಾವೈಕ್ಯತಗೆ ಹೆಸರಾಗಿದೆ. ಯುವ ಜನಾಂಗದಲ್ಲಿ ಏಕತೆ ಮತ್ತು ರಾಷ್ಟ್ರೀಯ ಭಾವೈಕ್ಯತ ಮೂಡಲಿ, ಒಂದು ರಾಷ್ಟ್ರದ ಭೌಗೋಳಿಕ ಪರಿಸರದಲ್ಲಿ ಜನರು ವಾಸಿಸುವ ಪ್ರದೇಶವನ್ನು ರಾಷ್ಟ್ರ ಎನ್ನುತ್ತೇವೆ. ವಿವಿಧತೆಯಲ್ಲಿ ಏಕತೆಯಿಂದ ಇರುವುದನ್ನು ಭಾವೈಕ್ಯತೆ ಎನ್ನುವರು” ಎಂದರು.
“ಭಾಷೆ, ಪ್ರದೇಶ, ಉಡುಗೆ ತೊಡುಗೆ, ಕಲೆ, ಸಾಹಿತ್ಯ, ವಾಸ್ತುಶಿಲ್ಪ, ನೀತಿ ನಿಯಮಗಳು, ನಡೆ ನುಡಿಯಿಂದ ಭಿನ್ನವಿದ್ದರು ನಾವೆಲ್ಲರೂ ಒಂದೇ. ವಸು ದೈವ ಕುಟುಂಬಕಂ ಎಂಬುದು ನಮ್ಮ ಸಂಸ್ಕೃತಿಯ ಮೂಲ ಮಾತ್ರವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?ಕೊಪ್ಪಳ | ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡಿ ಭಾವೈಕ್ಯತೆ ಸಾರಿದ ಮುಸ್ಲಿಂ ಕುಟುಂಬ
ಅಂಜುಮನ್ ಸಂಸ್ಥೆಯ ನಿರ್ದೇಶಕ ಇಕ್ಬಾಲ್ ಕೆ ಜಮಾಧಾರ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದರು. ಪತ್ರಿಕೋದ್ಯಮದ ಮುಖ್ಯಸ್ಥ ಡಾ ಎಸ್ ಎಸ್ ಅದೋನಿ ಐಕ್ಯೂಎಸಿ ಡಾ ಎನ್ ಬಿ ನಾಲತವಾಡ ಡಾ.ನಾಗರಾಜ ಗುದಾಗನವರ, ಡಾ.ಜಯನಂದ ಹಟ್ಟಿ, ಆಸಿಫ್ ತೋರಗಲ್, ಎಸ್ ಎಂ ಕೋಟಬಾಗಿ, ಗುಜರಾತ್, ಗೋವಾ, ಮಧ್ಯಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾಲಯದ 150 ಮಂದಿ ಎನ್‌ಎಸ್‌ಎಸ್ ಸ್ವಯಂ ಸೇವಕರು ಇದ್ದರು.