ಧಾರವಾಡ | ಕಬ್ಬು ಬೆಳೆಗಾರರು; ಬೈಪಾಸ್ ರಸ್ತೆ ತಡೆದು ಪ್ರತಿಭಟನೆ

Date:

ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಇಂದು ಬೆಳಿಗ್ಗೆಯಿಂದ ಧಾರವಾಡ ಬಳಿಯ ಯರಿಕೊಪ್ಪ ಕ್ರಾಸ್ ಬಳಿ ಬೈಪಾಸ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

- Advertisement -

ಮುಂಜಾನೆ 11 ಗಂಟೆಯಿಂದಲೇ ಬೈಪಾಸ್ ರಸ್ತೆಯಲ್ಲಿ ಜಮಾಯಿಸಿದ 100ಕ್ಕೂ ಹೆಚ್ಚು ರೈತರು ರಸ್ತೆ ತಡೆ ನಡೆಸಿ, ಸರ್ಕಾರದ ವಿರುದ್ಧ ಮತ್ತು ಸಕ್ಕರೆ ಕಾರ್ಖಾನೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಬ್ಬಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

20 ಬಂಡುಕೋರ ಟಿಎಂಸಿ ಸಂಸದರು ಮತ ಚಲಾಯಿಸಬಹುದೇ; ಮುಂದೆ...

ಡಿಲಿಮಿಟೇಷನ್ ಹಾಗೂ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲಿ, ಲೋಕಸಭಾ ಸ್ಪೀಕರ್ ಮುಂದೆ ಅನರ್ಹತೆ ವಿಚಾರಣೆ ಎದುರಿಸುತ್ತಿರುವ 20 ಬಂಡುಕೋರ ಟಿಎಂಸಿ...

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ...

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ...

ಈ ವೇಳೆ ಮಾತನಾಡಿದ ರೈತ ಮುಖಂಡ ಶಂಕರ್ ಬೊಬಾಟೆ  ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಜೋಶಿ ಸುಮಾರು ಐದು ಲಕ್ಷ ರೈತರಿಗೆ ಅವಮಾನ ಮಾಡಿದರು. ಅಲ್ಲದೆ, ನಾವು ನಿರಾಕರಿಸಿದರೂ ನಮ್ಮನ್ನು ದೆಹಲಿಗೆ ಕರೆಯಿಸಿ ರೈತ-ರೈತರ ಮಧ್ಯೆ ವೈಮನಸ್ಸು ಉಂಟು ಮಾಡಿ ಅಪಮಾನ ಮಾಡಿದ್ದಾರೆ. ಅನ್ನ ಬೆಳೆಯುವ ರೈತ ಬೀದಿಗಿಳುವಂತೆ ಮಾಡುತ್ತಿರುವುದು ಎಂತಹ ನ್ಯಾಯ. ಎಂಎಸ್ಪಿ  60 ಮತ್ತು ಕಬ್ಬಿನ ಬೆಂಬಲ ಬೆಲೆ 5500 ನೀಡುವವರೆಗೂ ಈ ಹೋರಾಟ ಹಿಂದೆ ಪಡೆಯುವುದಿಲ್ಲ” ಎಂದು ರೈತರು ಎಚ್ಚರಿಸಿದರು.

ರೈತರ ಆಕ್ರೋಶ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರತಿಭಟನೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಪ್ರತಿಭಟನೆ ಮುಗಿಯುವವರೆಗೆ ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ. ನರೇಂದ್ರ ಬೈಪಾಸ್ ಕಡೆಯಿಂದ ಹುಬ್ಬಳ್ಳಿಗೆ ಬರುವ ವಾಹನಗಳು ಅಗ್ರಿಕಲ್ಚರ್ ಯೂನಿವರ್ಸಿಟಿ – ಹೊಸ ಬಸ್ ನಿಲ್ದಾಣ – ಹಳೇ ಎಸ್.ಪಿ ಕಚೇರಿ ಸರ್ಕಲ್ – ಜುಬ್ಬಿ ಸರ್ಕಲ್ ಮಾರ್ಗವಾಗಿ ಸಂಚರಿಸುತ್ತಿದ್ದವು.

ಬೆಳಗಾವಿ ಕಡೆಯಿಂದ ಸವದತ್ತಿ, ನವಲಗುಂದ, ವಿಜಾಪುರಕ್ಕೆ ಹೋಗುವ ವಾಹನಗಳು ಹಳೇ ಎಸ್.ಪಿ ಕಚೇರಿ ಸರ್ಕಲ್ – ಮರಾಠಾ ಕಾಲನಿ ಮಾರ್ಗವಾಗಿ ಸಂಚಾರ. ಧಾರವಾಡದಿಂದ ಕಾರವಾರ ಮತ್ತು ಬೆಂಗಳೂರಿಗೆ ತೆರಳುವ ಲಘು ವಾಹನಗಳು ಹುಸೂರು – ವಾಣಿ ವಿಲಾಸ – ಎಂ.ಟಿ ಮಿಲ್ – ಇಂದಿ ಪಂಪ್ ಸರ್ಕಲ್ ಮೂಲಕ ಸಂಚಾರ. ಭಾರಿ ವಾಹನಗಳು ಗೋಕುಲ ರಸ್ತೆ – ತಾರಿಹಾಳ ಅಂಡರ್ ಬ್ರಿಡ್ಜ್ ಮೂಲಕ ಸಂಚರಿಸುತ್ತಿವೆ.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆಂಧ್ರಪ್ರದೇಶ ರಾಜ್ಯಪಾಲರಿಗೆ ಮನವಿ

ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಗೆ...

ಯಾದಗಿರಿ | ಬಂಡೋಳ್ಳಿಯಲ್ಲಿ ವಾಲ್ಮೀಕಿ ಶಾಖಾ ಮಠಕ್ಕೆ ಅಡಿಗಲ್ಲು; ಶಿಕ್ಷಣಕ್ಕೆ ₹25 ಕೋಟಿ ಅನುದಾನ

ಸುರಪುರ ಸಂವಿಧಾನ ಒದಗಿಸಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ ಹಾಗೂ ಸರ್ಕಾರದ ವಿವಿಧ...

ರಾಯಚೂರು | ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವಕ್ಕೆ ಎನ್‌.ಎಸ್.ಬೋಸರಾಜು ಶುಭ ಹಾರೈಕೆ

ನಾಳೆ ನ. 29ರಂದು ನಡೆಯಲಿರುವ ರಾಯಚೂರು ರಿಪೋರ್ಟಸ ಗಿಲ್ಡ್‌ನ 25ನೇ ವರ್ಷದ...