ಧಾರವಾಡ | ಭಾರತದ ಸಂವಿಧಾನ ಜನರ ಅಶೋತ್ತರಗಳನ್ನು ಪ್ರತಿ ಬಿಂಬಿಸುವ ಕೃತಿಯಾಗಿದೆ: ಡಾ. ರಾಘವೇಂದ್ರ ಪಾಟೀಲ

Date:

“ಭಾರತದ ಸಂವಿಧಾನ ಜನರ ಅಶೋತ್ತರಗಳನ್ನು ಪ್ರತಿ ಬಿಂಬಿಸುವ ಕೃತಿಯಾಗಿದೆ. ಭಾರತದ ಸಂವಿಧಾನ ರಚನೆ ಸಂದರ್ಭದಲ್ಲಿ ಭಾಷೆ ಕುರಿತಾದ ಹೇಳಿಕೆಗಳು ದೇಶದ ಏಕತೆ ಹಾಗೂ ಸಮಗ್ರತೆಯನ್ನು ಗೌರವಿಸುವಂತಾಗಿವೆ. ಭಾಷೆ ವಿಷಯದಲ್ಲಿ ಸಂವಿಧಾನ ರಚನಾ ಸಮಿತಿ  ಬಹಳ ಜಾಗೃತಿಯಿಂದ ಎಲ್ಲಿಯೂ ಸಮಸ್ಯೆ ಸೃಷ್ಟಿಯಾಗದಂತೆ ರಚಿಸಿದ್ದಾರೆ” ಎಂದು ಸಾಹಿತಿ ಡಾ. ರಾಘವೇಂದ್ರ ಪಾಟೀಲ ಅಭಿಪ್ರಾಯಪಟ್ಟರು.

- Advertisement -

ಧಾರವಾಡ ಪಟ್ಟಣದ ಕವಿವ ಸಂಘವು ಆಯೋಜಿಸಿದ್ದ ಡಾ. ಸಂತೋಷ ಹಾನಗಲ್ ಅವರು ರಚಿಸಿದ ‘ಸಂವಿಧಾನ ನುಡಿ ಸಂಹಿತೆ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ...

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್...

“ಭಾರತದ ಸಂವಿಧಾನವು ನಮ್ಮ ಸಂಸ್ಕೃತಿಯ ಸಾರವಾದ ವಿಶ್ವ ಕುಟುಂಬ ಭಾವನೆಯ ದ್ಯೋತಕವಾಗಿದೆ. ಸಂವಿಧಾನ ರಚನಾ ಸಮಿತಿ ನಮ್ಮ ಜನ ಸಮುದಾಯದ ಬದುಕಿನ ಎಲ್ಲಾ ಸಂಗತಿಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಅದಕ್ಕೆ ಅಂತಿಮ ಸ್ವರೂಪ ನೀಡಿದ್ದಾರೆ” ಎಂದರು.

ಗಾಂಧೀಜಿಯವರೂ ಸಹ ಹಿಂದಿಯೇ ರಾಷ್ಟ್ರ ಭಾಷೆಯಾಗಬೇಕೆಂಬ ಪ್ರತಿಪಾದನೆಯನ್ನೆ ಎಲ್ಲರೂ  ಒಪ್ಪಿದ್ದರು. ಈ ಸಂವಿಧಾನ ನುಡಿ ಸಂಹಿತೆ ಸಂಕುಚಿತ ಭಾವನೆಯಾಚೆ ವಿಶಾಲ ದೃಷ್ಠಿಯಿಂದ  ನೋಡಬೇಕಷ್ಟೇ. ಮಕ್ಕಳು ಒಂದೇ ಭಾಷೆಗೆ ಸೀಮಿತವಾಗದೇ ಹೆಚ್ಚು ಭಾಷೆ ಕಲಿತರೆ ನಮ್ಮ ಸಂಸ್ಕೃತಿ ವಿಸ್ತಾರವಾದಂತೆ. ಕೃತಿಯು ಭಾಷಾಭಿಮಾನಿಗಳಿಗೆ ಭವಿಷ್ಯದಲ್ಲಿ ಉಪಯುಕ್ತವಾಗಲು ಸಾಧ್ಯ” ಎಂದರು.

ಡಾ. ಪ್ರಜ್ಞಾ ಮತ್ತಿಹಳ್ಳಿ ಕೃತಿ ಪರಿಚಯಿಸಿ, “ಭಾರತದ ಸಂವಿಧಾನವು ಒಂದು ಸಮಗ್ರ ದಾಖಲೆಯಾಗಿದೆ. ನಮ್ಮ ಸಂವಿಧಾನ ಮುತ್ಸದ್ಧಿಗಳು ಸಂವಿಧಾನ ರಚಿಸುವಾಗ ಎಲ್ಲಿಯೂ ಭಾಷೆಗೆ ಸಂಬಂಧಿಸಿದ ಗೊಂದಲ ಸೃಷ್ಟಿಗೆ ಅವಕಾಶ ನೀಡಿಲ್ಲ. ಈ ಕೃತಿ ಸಮಷ್ಠಿ ಪ್ರಜ್ಞೆಯಿಂದ ರಚಿತವಾಗಿದೆ. ವಿವಿಧತೆಯಲ್ಲಿ ಏಕತೆ ತಂದು ಸೌಹಾರ್ದಯುತವಾದ ಜೀವನ ನಡೆಸುವಂತೆ ಚರ್ಚೆ ಮಾಡಿಯೇ ಸಂವಿಧಾನ ರಚಿಸಿದ್ದಾರೆ. ಡಾ. ಸಂತೋಷ ಹಾನಗಲ್ ಅವರ ಈ ಕೃತಿ ಮುಂದಿನ ತಲೆಮಾರಿನವರಿಗೆ ಅಮೂಲ್ಯವಾದುದಾಗಿದೆ ಎಂದರು.

ಕೃತಿ ಲೇಖಕರಾದ ಡಾ. ಸಂತೋಷ ಹಾನಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, “ನನ್ನ ಈ ಕೃತಿ ಜನ ಸಾಮಾನ್ಯರ ಬದುಕಿನ ಆಧಾರವಾಗಿದೆ. ಭಾಷೆ ಸವಾಲುಗಳು ಹಿಂದಿಗಿಂತಲೂ ಇಂದು ಮುನ್ನೆಲೆಯಲ್ಲಿವೆ. ಈ ಕೃತಿ ನೀತಿ ನಿರ್ಧಾರಕರಿಗೆ, ಸಂಶೋಧಕರಿಗೆ ಖಂಡಿತಾ ಉಪಯುಕ್ತವಾಗಲಿದೆ” ಎಂದು ಹೇಳಿದರು.

ಪ್ರಾಧ್ಯಾಪಕರಾದ ಡಾ. ಸಣ್ಣವೀರಣ್ಣ ದೊಡಮನಿ ಉಪಸ್ಥಿತರಿದ್ದು ಡಾ. ಸಂತೋಷ ಹಾನಗಲ್ ಓರ್ವ ಸೃಜನಶೀಲ ಬರಹಗಾರರು. ಅತ್ಯುತ್ತಮ ಸಂಶೋಧಕರಲ್ಲೊಬ್ಬರು. ಅವರ ಸಂವಿಧಾನ ನುಡಿ ಸಂಹಿತೆ ಮನೋಜ್ಞವಾಗಿ ರಚನೆಯಾಗಿದೆ ಎಂದು ಹೇಳಿ ಕವನ ವಾಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಚಿಂತಕರಾದ ಡಾ. ಲೋಹಿತ ನಾಯ್ಕರ ಮಾತನಾಡಿ, “ಜಗತ್ತಿನಲ್ಲಿ ಯುದ್ಧ ನಡೆದದ್ದೇ ಭಾಷೆಗಾಗಿ. ಭಾಷೆಯಲ್ಲಿ ಪ್ರಖರತೆ ಬಹಳ. ಅದು ಬೆಂಕಿ ಇದ್ದಂತೆ. ಎಲ್ಲರಿಗೂ ಅವರವರ ಮಾತೃಭಾಷೆ ಮುಖ್ಯವಾಗಿರುತ್ತದೆ. ಭಾಷೆಗೆ ಸಂಬಂಧಿಸಿದಂತೆ ಏಕತೆ ತರುವುದು ಅಂದಿನ ದಿನ ಬಹಳ ಕಷ್ಟದ ಕೆಲಸವಾಗಿತ್ತು” ಎಂದು ಹೇಳಿದರು.

ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ವಿಶ್ವೇಶ್ವರಿ ಹಿರೇಮಠ, ಸಿ.ಕೆ. ನಾವದಗಿ, ಶ್ರೀಕಾಂತ ದಳವಾಯಿ, ಎಸ್.ಜಿ. ಪಾಟೀಲ ಸೇರಿದಂತೆ ಮುಂತಾದವರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ ಶಾಖೆಯೂ ಶೀಘ್ರದಲ್ಲೇ ಮೌಲ್ಯಯುತ ಗ್ರಾಹಕರನ್ನು ಹೊಂದಿ ಅಭಿವೃದ್ಧಿ ಹೊಂದಲಿ: ಸುಧಾ ನಿತ್ಯಾನಂದ

ಉಭಯ ಜಿಲ್ಲೆಗಳಲ್ಲಿ ಐದು ಶಾಖೆಗಳನ್ನು ಹೊಂದಿರುವ ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್...

ಮೈಸೂರಿನಲ್ಲಿ ನ.13ರಂದು ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸೋದ್ಯಮ ಹಾಗೂ ವಿಜ್ಞಾನ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು...

ದಕ್ಷಿಣ ಕನ್ನಡ | ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಮಂಗಳೂರು: ಹೈನುಗಾರಿಕೆಯನ್ನು ಬಲಪಡಿಸಿ, ರೈತರ ಹಿತವನ್ನು ಕಾಪಾಡುವ ಉದ್ದೇಶದಿಂದ ಹಾಲಿನ ದರ...

ಬಾಗಲಕೋಟೆ |ಜಿಲ್ಲೆಯ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸಿ: ವೀಣಾ ಕಾಶಪ್ಪನವರಿಗೆ ಕುತ್ಬುದ್ದೀನ್ ಖಾಜಿ ಮನವಿ

ಜಿಲ್ಲೆಯ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ...