ಧಾರವಾಡ ಐಐಟಿ ಉದ್ಘಾಟನೆ; ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ₹9.49 ಕೋಟಿ ವೆಚ್ಚ

Date:

ಅಬ್ಬರದ ಪ್ರಚಾರದ ನಡುವೆ ಕಳೆದ ಮಾರ್ಚ್‌ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಧಾರವಾಡ ಐಐಟಿ ಕ್ಯಾಂಪಸ್ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಸರ್ಕಾರ ಬರೋಬ್ಬರಿ ₹9.49 ಕೋಟಿ ವೆಚ್ಚ ಮಾಡಿದೆ.

ಈ ವೆಚ್ಚದಲ್ಲಿ ಪ್ರಧಾನಿ ಪ್ರಯಾಣ ವೆಚ್ಚ ಅಥವಾ ವಸತಿ ವೆಚ್ಚ ಸೇರಿಲ್ಲ. ಕೇವಲ ಕಾರ್ಯಕ್ರಮಕ್ಕೆ ಬಿಜೆಪಿ ₹9.49 ಕೋಟಿ ವೆಚ್ಚ ಮಾಡಿದೆ.

ಜೆಡಿಎಸ್‌ನ ಮುಖಂಡ ಗುರುರಾಜ ಹುಣಸಹಿಮರದ ಅವರು ಆರ್‌ಟಿಐನಡಿ ಸ್ವೀಕರಿಸಿದ ಮಾಹಿತಿಯಿಂದ ಕಾರ್ಯಕ್ರಮದ ಹಣಕಾಸು ವೆಚ್ಚ ಬಹಿರಂಗಗೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ನಾಟಕದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಧಾರವಾಡ ಐಐಟಿಯ ಹೊಸ ಕ್ಯಾಂಪಸ್‌ನ ಉದ್ಘಾಟನೆಗೆ ಜನರನ್ನು ಕರೆತರಲು, ಮಧ್ಯಾಹ್ನದ ಊಟ, ವೇದಿಕೆಯ ಸಿದ್ಧತೆಗಳು, ಬ್ರ್ಯಾಂಡಿಂಗ್, ಪ್ರಚಾರಗಳು ಮತ್ತು ಇತರ ವೆಚ್ಚಗಳಿಗಾಗಿ ಒಟ್ಟು ₹9.49 ಕೋಟಿ ಖರ್ಚು ಮಾಡಿದೆ.

ಜೆಡಿಎಸ್‌ನ ಮುಖಂಡ ಗುರುರಾಜ ಹುಣಸಹಿಮರದ ಅವರು ಆರ್‌ಟಿಐನಡಿ ಸ್ವೀಕರಿಸಿದ ಮಾಹಿತಿ ಪ್ರಕಾರ, ₹9.49 ಕೋಟಿ ವೆಚ್ಚದಲ್ಲಿ ಟೆಂಟ್ ಮತ್ತು ಬ್ಯಾರಿಕೇಡ್‌ಗಳಿಗೆ ₹4.68 ಕೋಟಿ, ಸಾರಿಗೆ ವೆಚ್ಚ ₹2.83 ಕೋಟಿ, ಆಹಾರ ಸೌಲಭ್ಯಕ್ಕಾಗಿ ₹86 ಲಕ್ಷ ಹಾಗೂ ಧ್ವನಿ ವರ್ಧಕ, ಎಲ್‌ಇಡಿ, ಸಿಸಿಟಿವಿ ಮುಂತಾದ ವೆಚ್ಚಕ್ಕೆ ₹40 ಲಕ್ಷ ಸುರಿಯಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಕೆಲವು ದಿನಗಳ ಮೊದಲು ಧಾರವಾಡದಲ್ಲಿ ಖಾಯಂ ಐಐಟಿ ಕ್ಯಾಂಪಸ್‌ ಶಂಕುಸ್ಥಾಪನೆ ಮಾಡುವುದರ ಜೊತೆಗೆ, ಕರ್ನಾಟಕದಾದ್ಯಂತ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಭಾಗವಹಿಸಿದ ಬಹುತೇಕರಿಗೆ ಆಹಾರ ಮತ್ತು ಸಾರಿಗೆ ಸೌಲಭ್ಯಗಳನ್ನು ನೀಡಲಾಯಿತು.

”ಖಾಸಗಿ ವಾಹನಗಳನ್ನೂ ಬಾಡಿಗೆಗೆ ಪಡೆಯಲಾಗಿದೆ. ಸುಮಾರು 60,000 ಜನರಿಗೆ ಊಟದ ವ್ಯವಸ್ಥೆ ಒದಗಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಬ್ಬ ವ್ಯಕ್ತಿಗೆ ತಲಾ 1 ಸಾವಿರ ರೂಪಾಯಿ ನೀಡುವುದಾಗಿ ಬಿಜೆಪಿಯವರು ಜನರಿಗೆ ಆಮಿಷವೊಡ್ಡಿದ್ದಾರೆ. ಕಾರ್ಯಕ್ರಮ ನಡೆದ ನಾಲ್ಕು ದಿನಗಳ ನಂತರ ತಾನು ಆರ್‌ಟಿಐಗೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ನಾಲ್ಕು ದಿನಗಳ ಹಿಂದೆಯಷ್ಟೇ ನನಗೆ ಜಿಲ್ಲಾಧಿಕಾರಿ ಕಚೇರಿಯಿಂದ ಉತ್ತರ ದೊರಕಿದೆ” ಎಂದು ಗುರುರಾಜ್‌ ಅವರು ಹೇಳಿದ್ದಾರೆ.

“ರಾಜ್ಯ ಬಿಜೆಪಿ ಸರ್ಕಾರ ಮೋದಿ ಅವರ ಚುನಾವಣಾ ಪ್ರಚಾರಕ್ಕಾಗಿ ಸಾರ್ವಜನಿಕರ ತೆರಿಗೆ ಹಣವನ್ನು ಪರೋಕ್ಷವಾಗಿ ಖರ್ಚು ಮಾಡಲಾಗುತ್ತಿದೆ. ಅಲ್ಲದೆ ಈ ಕಾರ್ಯಕ್ರಮವು ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶದಂತೆ ತೋರುತ್ತಿತ್ತು” ಎಂದು ಗುರುರಾಜ ಹುಣಸಹಿಮರದ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಆದರೆ, ಮೋದಿಯವರ ಎರಡು ಗಂಟೆಯ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಕೋಟ್ಯಾಂತರ ರೂಪಾಯಿ ಖರ್ಚಾಗಿರುವುದು ಇದೀಗ ಬೆಳಕಿಗೆ ಬಂದಿದೆ.

ಶಿವಮೊಗ್ಗ ಕಾರ್ಯಕ್ರಮಕ್ಕೆ ಸುಮಾರು ನಾಲ್ಕು ಕೋಟಿ ವೆಚ್ಚ

ಹೌದು, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮವನ್ನು ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿತ್ತು. ಎರಡರಿಂದ ಮೂರು ಗಂಟೆಯ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಕೆಎಸ್‌ಆರ್‌ಟಿಸಿಯ ಸುಮಾರು 1,600 ಬಸ್‌ಗಳು ಬಳಕೆಯಾಗಿವೆ. ಬರೀ ಇದರ ಬಿಲ್‌, ಮೂರು ಕೋಟಿ ತೊಂಬತ್ತು ಲಕ್ಷ ರೂಪಾಯಿ.

ಫೆಬ್ರವರಿ 27ರ ಕಾರ್ಯಕ್ರಮಕ್ಕೆ ಬಳಸಲಾಗಿರುವ ಬಸ್‌ಗಳ ಸಂಖ್ಯೆ ಮತ್ತು ಅದಕ್ಕೆ ತಗುಲಿರುವ ಖರ್ಚಿನ ವಿವರ ಆಕಾಶ್ ಪಾಟೀಲ್ ಎಂಬುವವರ ಮಾಹಿತಿ ಹಕ್ಕು ಅರ್ಜಿಯಿಂದ ಹೊರಬಿದ್ದಿದೆ.

ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗಕ್ಕೆ ಮಾಹಿತಿ ಹಕ್ಕು ಸಲ್ಲಿಸಿದ್ದ ಆಕಾಶ್ ಪಾಟೀಲ್, “ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಕೆಎಸ್‌ಆರ್‌ಟಿಸಿಯ ಎಷ್ಟು ಬಸ್‌ಗಳನ್ನು ಬಳಸಲಾಗಿತ್ತು. ಇದರಿಂದಾದ ಖರ್ಚು ಎಷ್ಟು ಮತ್ತು ಈ ಮೊತ್ತವನ್ನು ಪಾವತಿಸಿದರು ಯಾರು?” ಎಂದು ಕೇಳಿದ್ದರು.

ಆಕಾಶ್ ಪಾಟೀಲ್ ಅವರ ಪ್ರಶ್ನೆಗೆ ಮಾಹಿತಿ ನೀಡಿರುವ ಕೆಎಸ್‌ಆರ್‌ಟಿಸಿ, “ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಜನರನ್ನು ಕರೆತರಲು ಸುಮಾರು 1,600 ಬಸ್‌ಗಳನ್ನು ಬಳಸಲಾಗಿದೆ. ಇದಕ್ಕೆ ₹3,93,92,565 ವೆಚ್ಚ ಆಗಿದೆ” ಎಂದು ಮಾಹಿತಿ ನೀಡಿದೆ.

ಈ ಸುದ್ದಿ ಓದಿದ್ದೀರಾ? ಧಾರವಾಡ ಐಐಟಿ ಉದ್ಘಾಟನೆ; ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ₹9.49 ಕೋಟಿ ವೆಚ್ಚ

1,600 ಬಸ್‌ಗಳ ಬಾಡಿಗೆಯನ್ನು ಶಿವಮೊಗ್ಗದ ಕಾರ್ಯಪಾಲಕ ಇಂಜಿನಿಯರ್‌ ಪಾವತಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಕೇವಲ ಎರಡರಿಂದ ಮೂರು ಗಂಟೆಯ ಕಾರ್ಯಕ್ರಮಕ್ಕೆ ಬರೀ ಜನರನ್ನು ಕರೆತಲು ಮೂರು ಕೋಟಿ ತೊಂಬತ್ತು ಲಕ್ಷ ರೂಪಾಯಿ ಖರ್ಚಾಗಿರುವುದು ಅಚ್ಚರಿ ಮೂಡಿಸಿದೆ. ಜನರನ್ನು ಕರೆತರಲಷ್ಟೇ ಇಷ್ಟು ರೂಪಾಯಿ ಖರ್ಚಾಗಿರುವಾಗ ಇನ್ನೂ ಬೇರೆ ಬೇರೆ ಕಾರ್ಯಕ್ಕೆ ಇನ್ನೆಷ್ಟು ಖರ್ಚಾಗಿರಬಹುದು ಎನ್ನುವ ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಸ್ಲಿಂ ಮೀಸಲಾತಿ | ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ರವಿವರ್ಮ ಕುಮಾರ್

ಮುಸ್ಲಿಂರನ್ನು ಹಿಂದುಳಿದ ಪಟ್ಟಿಗೆ ಸೇರಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಹಿಂದುಳಿದ ಮೀಸಲಾತಿ ಮುಸ್ಲಿಂರಿಗೆ...

ಪೆನ್‌ಡ್ರೈವ್ ಆತಂಕ ಕೊನೆಗೊಳಿಸಿ – ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ; ಸಿಪಿಐಎಂ ಆಗ್ರಹ

"ಕಳೆದ ಎರಡು ಮೂರು ದಿನಗಳಿಂದ ಹಾಸನದಲ್ಲಿ ಪೆನ್‌ಡ್ರೈವ್ ವಿಚಾರ ಭಾರೀ ಚರ್ಚೆಯಾಗುತ್ತಿದೆ....

ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ ಎಂದ ನಟಿ ಶೃತಿ: ಮಹಿಳಾ ಆಯೋಗದಿಂದ ನೋಟಿಸ್

“ಪ್ರೀ ಬಸ್ ಬಿಟ್ಟ ತಕ್ಷಣ ಹೆಣ್ಣುಮಕ್ಕಳು ತೀರ್ಥಯಾತ್ರೆ ಹೋಗ್ತೇವೆಂದು ಹೇಳಿ, ಎಲ್ಲಿಗೆ...

ಹಾಸನದ ‘ಪೆನ್‌ಡ್ರೈವ್’ ನಮಗೂ ತಲುಪಿದೆ; ಎಸ್ಐಟಿ ರಚಿಸಲು ಸಿಎಂಗೆ ಮನವಿ: ಮಹಿಳಾ ಆಯೋಗ

ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಹಾಸನದ ಪೆನ್‌ಡ್ರೈವ್‌ ಬಗ್ಗೆ...