ಬೆಂಗಳೂರಿನಲ್ಲೊಂದು ಜೈಲ್ ರೆಸ್ಟೋರೆಂಟ್; ಏನಿದು?

Date:

  • ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿದೆ ಜೈಲ್ ರೆಸ್ಟೋರೆಂಟ್‌
  • ಪೊಲೀಸ್‌ ಹಾಗೂ ಖೈದಿಗಳ ರೀತಿ ಬಟ್ಟೆ ಧರಿಸಿದ ವೇಟರ್‌ಗಳಿಂದ ಸರ್ವ್‌

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದಿಲ್ಲೊಂದು ವಿನೂತನ ಪ್ರಯೋಗ ನಡೆಯುತ್ತಿರುತ್ತದೆ. ಇದೀಗ ನಗರದಲ್ಲಿ ಜೈಲ್‌ ವಿನ್ಯಾಸ ಹೊಂದಿರುವಂತಹ ವಿಶಿಷ್ಟವಾದ ರೆಸ್ಟೋರೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ‘ಸೆಂಟ್ರಲ್​​ ಜೈಲ್​ ರೆಸ್ಟೋರೆಂಟ್’ ಇದೆ. ಸಾಮಾನ್ಯವಾಗಿ ಇತರೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳಿಗೆ ಹೋದಾಗ ಅಲ್ಲಿ ಜಗಮಗಿಸುವ ಲೈಟ್‌ಗಳು, ಅಲಂಕಾರ, ಚಿತ್ತಾರ ಕಣ್ಣಿಗೆ ಆನಂದ ನೀಡುವಂತಹ ರಚನೆ ಸಾಮಾನ್ಯವಾಗಿ ಎಲ್ಲ ಹೊಟೇಲ್‌ಗಳಲ್ಲಿಯೂ ಇರುತ್ತದೆ. ಆದರೆ, ಈ ಒಂದು ಹೋಟೆಲ್​ಗೆ ಹೋದರೆ ಜೈಲಿನ ಒಳಗಡೆ ಹೋದ ಹಾಗೆ ಭಾಸವಾಗುತ್ತದೆ.

ಈ ಹೋಟೆಲ್‌ ಅನ್ನು ಸಂಪೂರ್ಣವಾಗಿ ಜೈಲಿನ ರೀತಿ ನಿರ್ಮಾಣ ಮಾಡಿದ್ದು, ಹೊರಗಡೆ ಮುಖ್ಯ ದ್ವಾರದಲ್ಲಿ ಸೆಂಟ್ರಲ್ ಜೈಲ್ ಎಂದು ಬರೆಯಲಾಗಿದೆ. ರೆಸ್ಟೋರೆಂಟ್ ಒಳಗಡೆ ಹೋದರೆ ಸಂಪೂರ್ಣವಾಗಿ ಜೈಲಿನ ರೀತಿ ರಚನೆ ಮಾಡಿದ್ದಾರೆ. ಪೊಲೀಸ್‌ ಹಾಗೂ ಖೈದಿಗಳ ರೀತಿ ಬಟ್ಟೆ ಧರಿಸಿದ ವೇಟರ್‌ಗಳು ಸರ್ವ್‌ ಮಾಡುತ್ತಿದ್ದಾರೆ. ಜೈಲಿನಲ್ಲಿ ಬಳಸುವ ಹಾಗೇ ಸಿಲ್ವರ್‌ ತಟ್ಟೆ ಹಾಗೂ ಸಿಲ್ವರ್ ಪಾತ್ರೆಗಳಲ್ಲಿಯೇ ಊಟವನ್ನು ನೀಡುತ್ತಾರೆ. ರೆಸ್ಟೋರೆಂಟ್‌ನಲ್ಲಿ ಒಳಗಡೆ ಜೈಲು ಕಂಬಿಗಳಿದ್ದು, ಅಲ್ಲಿಯೇ ಊಟ ಮಾಡಬೇಕು.Jail Restaurant

ಉದ್ಯಮಿ ಹರ್ಷ್ ಗೋಯೆಂಕಾ ಎಂಬವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಬ್ರ್ಯಾಂಡ್‌ ಹೆಸರು ಬಳಸಿ ನಕಲಿ ಬಟ್ಟೆ ತಯಾರು: ಸಿಸಿಬಿ ದಾಳಿ

ಅರ್ಮಾನಿ, ಲಿವೈಸ್, ಅಲ್ಲೆನ್ ಸೊಲ್ಲಿ, ಬುರ್ಬೆರಿ ಲೆದರ್ ಟ್ಯಾಗ್ಸ್, ಪೋಲೊ, ಎಲ್​ಪಿ...

ಝೀರೋ ಟ್ರಾಫಿಕ್‌ನಲ್ಲಿ ಬಂದ ಮಗುವಿಗೆ ಚಿಕಿತ್ಸೆ ನೀಡದ ನಿಮ್ಹಾನ್ಸ್‌; ಸಾವು

ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಒಂದು ವರ್ಷದ ಪುಟ್ಟ ಕಂದಮ್ಮನಿಗೆ...

ಬೆಂಗಳೂರು | ಪ್ರಿಯಕರನ ಮೊಬೈಲ್‌ನಲ್ಲಿತ್ತು 13 ಸಾವಿರ ನಗ್ನ ಫೋಟೋ: ದೂರು ದಾಖಲಿಸಿದ ಪ್ರಿಯತಮೆ

ಸಹೋದ್ಯೋಗಿ, ಪ್ರಿಯತಮೆ ಸೇರಿದಂತೆ ಮಹಿಳೆಯರ 13,000ಕ್ಕೂ ಹೆಚ್ಚು ನಗ್ನ ಫೋಟೋಗಳನ್ನು ಮೊಬೈಲ್‌ನಲ್ಲಿ...

ಭಾರತದ ಅಭಿವೃದ್ಧಿಗೆ ಬಂಡವಾಳಶಾಹಿ ಮಾತ್ರವೇ ಏಕೈಕ ಪರಿಹಾರ: ಇಸ್ಫೋಸಿಸ್ ನಾರಾಯಣ ಮೂರ್ತಿ

ಭಾರತದಂತಹ ಬಡ ದೇಶವು ಅಭಿವೃದ್ಧಿ ರಾಷ್ಟ್ರವಾಗಲು ಸಹಾನುಭೂತಿಯುಳ್ಳ ಬಂಡವಾಳಶಾಹಿಯ ಅಗತ್ಯವಿದೆ. ಅದೊಂದೇ...