ಧಾರವಾಡ | ಅಂಗಿ-ಪ್ಯಾಂಟ್ ಹರಿದರು ಕೈಯಲ್ಲಿ ಪುಸ್ತಕ ಇರಬೇಕು: ಡಾ. ಆನಂದ್ ಪಾಂಡುರಂಗಿ

Date:

ಸಾಮಾನ್ಯವಾಗಿ ಜನರು ತುಂಬಾ ಬಿಜಿ ಸಮಯವೇ ಸಿಗುವುದಿಲ್ಲ ಅನ್ನುತ್ತಾರೆ. ಸಮಯವಿರುವುದು ಎಲ್ಲರಿಗೂ ಒಂದೇ. ಸಾಧಕರಿಗೆ ಹೆಚ್ಚು, ಸಾಮಾನ್ಯರಿಗೆ ಕಡಿಮೆ ಸಮಯವನ್ನು ಸೃಷ್ಟಿ ನೀಡಿಲ್ಲ. ಇದ್ದ ಸಮಯವನ್ನು ಸರಿಯಾಗಿ ಸದು ಉಪಯೋಗ ಪಡಿಸಿಕೊಳ್ಳುವ ಕ್ಷಮತೆ ಸಾಧಕರಲ್ಲಿ ಇರುತ್ತದೆ ಎಂದು ಡಾ. ಆನಂದ್ ಪಾಂಡುರಂಗಿ ಹೇಳಿದ್ದಾರೆ.

- Advertisement -

ಧಾರವಾಡದಲ್ಲಿ  ಡಾ. ಎಂ.ಬಿ ದಿಲ್ ಶಾದ್ ಶಿಕ್ಷಣ ಮತ್ತು ಸೇವಾ ಸಮಿತಿ ಆಯೋಜಿಸಿದ್ದ ಡಾ. ಎಂ.ಬಿ ದಿಲ್ ಶಾದ್ ಅವರ 71ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಡಾ. ಎಂ.ಬಿ ದಿಲ್ ಶಾದ್, ಅವರು ನಾಡಿನ ಖ್ಯಾತ ವಾಗ್ಮಿ ಹಾಗೂ ಶ್ರೇಷ್ಠ ಶಿಕ್ಷಕರಾಗಿದ್ದರು. ಸತತ ಅಧ್ಯಯನದ ಮೂಲಕ ಹೊಸತನ್ನು ನಾಡಿಗೆ ಸಮರ್ಪಿಸಬೇಕೆಂಬ ಸದಭಿರುಚಿ ಉಳ್ಳುವರಾಗಿದ್ದರು. ಸಮಯದ ಸದುಪಯೋಗ ಪಡಿಸಿಕೊಳ್ಳುವ ಕುರಿತು ಇತರರಿಗೆ ಮಾದರಿ ವ್ಯಕ್ತಿಯಾಗಿ ದುಡಿದಿದ್ದರು” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ವಿದ್ಯಾರ್ಥಿಗಳು ಅವರ ಆದರ್ಶವನ್ನು ಪಾಲಿಸಬೇಕು. ಉಡುವ ರಂಗಿನ ಪ್ಯಾಂಟು ಹರಿದಿದ್ದರೂ ಸರಿ, ಕೈಯಲ್ಲಿ ಒಂದು ಪುಸ್ತಕವಿರಬೇಕು. ಆದರೆ, ಇಂದಿನ ಯುವ ಪೀಳಿಗೆ ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಅಂಗಿ ಪ್ಯಾಂಟು ಹರಿದಿದ್ದರು ಸರಿ ಎನ್ನುತ್ತಾರೆ. ವಿದ್ಯಾರ್ಥಿಗಳ ಜೀವನ ಬಹಳ ಅಮೂಲ್ಯವಾದದ್ದು. ಸಮಯವನ್ನು ಹಾಳು ಮಾಡಿಕೊಳ್ಳಬಾರದು” ಎಂದರು.

ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ನಿವೃತ್ತ ಜಂಟಿ ನಿರ್ದೇಶಕ  ಸದಾಶಿವು ಮರ್ಜಿ ಅವರು ಮಾತನಾಡಿ, “ದೀಲ್ ಶಾದ ಅವರು ಜಾತಿ ಧರ್ಮ ಭಾಷೆಯ ಸಂಕೋಲೆಗೆ ಬಂದಿಯಾಗದೆ ಮಾನವತಾವಾದಿಯಾಗಿ ಬದುಕಿದ್ದರು. ಅವರ ಬದುಕು ಓರ್ವ ಸಂತನ ಬದುಕಾಗಿತ್ತು. ನಾಡು ನುಡಿ ಪರಿಸರಕ್ಕಾಗಿ ತನ್ನ ಇಡೀ ಜೀವನವನ್ನು ಮುಡಪಾಗಿಟ್ಟಿದ್ದರು. ಮಾತು ಹೇಗೆ ಇರಬೇಕು ಎನ್ನುವುದಕ್ಕೆ ಅವರು ಮಾತು ಮಾದರಿಯಾಗಿತ್ತು” ಎಂದರು.

“ಅವರು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನೆಟ್ಟ ಲಕ್ಷಾಂತರ ಗಿಡ ಮರಗಳಲ್ಲಿ ಅವರ ನೆನಪುಗಳು ಇವೆ. ಸಾವಿರಾರು ಶಿಷ್ಯರನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ. ನಾಡಿನ ಸೇವೆಗಾಗಿ ಮನೆ ಮಠವನ್ನು ಮರೆತು ದುಡಿದ ಕಾಯಕ ಯೋಗಿಯಾಗಿದ್ದರು. ಅವರ ನೆನಪಿನಲ್ಲಿ ಸಂಸ್ಥೆಯನ್ನು ಕಟ್ಟಿಕೊಂಡು ಸಮಾಜಮುಖ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಿರುವ ಅವರ ಸಹೋದರರು ಹಾಗೂ ಅವರ ಕುಟುಂಬದವರ ಕಾರ್ಯ ಪ್ರಶಂಸನೀಯ” ಎಂದರು.

ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಎನ್ ಸಿದ್ದಕ್ಕಲವರ, ಎಂ ಎಂ ಕಾಜಿ, ಜೆ ಡಿ ಶಿಂದೆ, ಡಾ ಎನ್ ಎಂ ಮಕಾಂದರ್, ಮೌಲಾನಾ ಮುಜೀಬ್, ವನಿತಾ, ಆರಿಫಾ ಎ ಶೇಕ್, ಕೆ.ಎಸ್ ಬಂಗಾರಿ, ಬರಮಗೌಡ, ಮುತ್ತಗಿ, ನಾಯಕ್, ಸೀತಮ್ಮ, ಜೆ ಕೆ ಸಾಮ್ರಾಣಿ, ಎಸ್ ಕೆ ಗಂಗಣ್ಣವರ್, ಬೀ ಶಕುಂತಲಾ, ಎಸ್ ಎ ಚನ್ನವೀರಗೌಡರ್, ಎಸ್‌ಡಿ ರೊಟ್ಟಿ, ಡಾ. ಮಹರ ಅಪ್ರೋಜ್ ಕಾಠೇವಾಡಿ, ಡಾ. ಪ್ರಕಾಶ್ ಸಿದ್ದಕ್ಕನವರ, ಡಾ. ಜ್ಯೋತಿ ದೊಡ್ಡಮನಿ ಹಾಗೂ ಡಾ. ಖಲೀಲ್ ಅಹಮದ್ ಜೆ ದಿಲ್ ಶಾದ್, ರಜಿಯಾ ಶೌಕತ ಅಲಿ ದರೂರು, ಮೊಹಮ್ಮದ್ ರಫೀಕ್ ಬಿ ದಿಲ್ ಶಾದ್, ಜರೀನಾ ಬೇಗಮ್ ಹುಂಡೆಕಾರ್, ಉಜ್ಮಾ ಆಫ್ರಿನ್ ಹಾಗೂ ಡಾ. ಏನ್ ಬಿ ನಾಲತವಾಡ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...