ದೊಡ್ಡಬಳ್ಳಾಪುರ | ಹೊರಗುತ್ತಿಗೆ ನಿಯಮಕ್ಕೆ ವಿರೋಧ; ಅರಣ್ಯ ಇಲಾಖೆ ಮುಂದೆ ನೌಕರರ ಮೌನ ಪ್ರತಿಭಟನೆ

Date:

ತಮ್ಮ ಜೀವದ ಹಂಗು ತೊರೆದು, ದಿನಗೂಲಿ ನೌಕರರಾಗಿ ಅರಣ್ಯ ರಕ್ಷಣೆ ಮಾಡುತ್ತಿದ್ದ ನೌಕರರನ್ನು ಏಕಾಏಕಿ ಅರಣ್ಯ ಇಲಾಖೆ ಹೊರಗುತ್ತಿಗೆ ವಿಭಾಗಕ್ಕೆ ಸೇರಿಸಿರುವುದನ್ನು ವಿರೋಧಿಸಿ ದಿನಗೂಲಿ ನೌಕರರು ಅರಣ್ಯ ಇಲಾಖೆ ಮುಂದೆ ಮೌನ ಪ್ರತಿಭಟನೆ ನಡೆಸಿದರು.

- Advertisement -

ದೊಡ್ಡಬಳ್ಳಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ 14 ಜನ ಕಳೆದ 25-30 ವರ್ಷದಿಂದ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಈವರೆಗೂ ಇವರು ನಮೂನೆ-ಎಫ್‌ಎಸಿ-63ರಡಿಯಲ್ಲಿ ಸರ್ಕಾರದಿಂದ ನೇರವಾಗಿ ಸಂಬಳ ಪಡೆಯುತ್ತಿದ್ದರು. ಇದೀಗ ಅರಣ್ಯ ಇಲಾಖೆ 14 ದಿನಗೂಲಿ ನೌಕರರನ್ನೂ ಗುತ್ತಿಗೆ ವಿಭಾಗಕ್ಕೆ ಸೇರಿಸಿ ಗುತ್ತಿಗೆಯವರಿಂದ ಸಂಬಳ ಪಡೆಯುವಂತೆ ಮಾಡಿದೆ. ಈ ನಿರ್ಧಾರ ದಿನಗೂಲಿ ನೌಕರರ ಬದುಕು ಅತಂತ್ರವಾಗುವಂತೆ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...
WhatsApp Image 2025 07 30 at 6.46.16 PM 1

ಮಾಧ್ಯಮದೊಂದಿಗೆ ಮಾತನಾಡಿದ ದಿನಗೂಲಿ ನೌಕರ ಮಂಜುನಾಥ್ ನಾಯ್ಕ್, “ದಿನಗೂಲಿ ನೌಕರರಿಗೆ ಸದ್ಯ ತಿಂಗಳ ಸಂಬಳ ನೌಕರರ ಅಕೌಂಟ್ ಗಳಿಗೆ ನೇರವಾಗಿ ಬರುತ್ತಿದೆ. ಆದರೆ, ಈಗ ಹಣ ದೋಚುವ ದುರುದ್ದೇಶದಿಂದ ಹೊರಗುತ್ತಿಗೆಯನ್ನ ಜಾರಿ ಮಾಡಿದ್ದಾರೆ. ಹೊರಗುತ್ತಿಯಲ್ಲಿ 10 ಜನರು ಮಾಡುವ ಕೆಲಸವನ್ನ 5 ಜನರ ಕೈಯಲ್ಲಿ ಮಾಡಿಸಿ 5 ಜನರ ಹಣವನ್ನ ಲೂಟಿ ಮಾಡುತ್ತಾರೆ. ಹೊರಗುತ್ತಿಗೆಯಲ್ಲಿ ನಮ್ಮನ್ನು ಕೇಳುವರೇ ಇಲ್ಲದ ಪರಿಸ್ಥಿತಿ ಇದೆ. ಪ್ರಾಣದ ಹಂಗು ತೊರೆದು ಅರಣ್ಯ ಕಾಪಾಡುತ್ತೇವೆ. ಈ ವೇಳೆ ನಮ್ಮ ಪ್ರಾಣಕ್ಕೆ ಹಾನಿಯಾದರೆ ನಮ್ಮ ಕುಟುಂಬಗಳಿಗೂ ಇವರು ಸುದ್ದಿ ತಿಳಿಸುವುದಿಲ್ಲ. ಹೊರಗುತ್ತಿಗೆಯವರನ್ನ ಕೇಳಿದ್ರೆ ಅರಣ್ಯ ಇಲಾಖೆಯ ಜವಾಬ್ದಾರಿ ಅಂತಾರೆ, ಅರಣ್ಯ ಇಲಾಖೆ ಕೇಳಿದ್ರೆ ಹೊರಗುತ್ತಿಗೆ ನೌಕರರೆಂದು ಸಬೂಬು ಹೇಳ್ತಾರೆ. ನುಣುಕಿಕೊಳ್ಳುವುದಕ್ಕಾಗಿಯೇ ಹೊರಗುತ್ತಿಗೆ ನಿಯಮ ತಂದಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹ: ಅ.15ರಿಂದ ಜಂತರ ಮಂಥರ್‌ನಲ್ಲಿ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಘನತೆಗೆ ಧಕ್ಕೆ ಉಂಟುಮಾಡಿ, ಅಕ್ರಮ ಚಟುವಟಿಕೆಗಳಿಗೆ ಕಾರಣರಾಗಿದ್ದಾರೆ...

ರಾಯಚೂರು | ಪೊತ್ನಾಳ ಗ್ರಂಥಾಲಯದಲ್ಲಿ ಮೂಲಸೌಕರ್ಯ ಕೊರತೆ: ಓದಲು ಬರುವ ವಿದ್ಯಾರ್ಥಿಗಳಿಗೆ ಪರದಾಟ

ಮಾನ್ವಿ ತಾಲ್ಲೂಕಿನ ಪೊತ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಯ ಮೈದಾನದಲ್ಲಿರುವ...

ಕಲಬುರಗಿ | ಪ್ರೀತಿಸಿದ ಯುವತಿಯನ್ನೇ ಮದುವೆಯಾಗಲು ಪಟ್ಟು: ಟವರ್ ಏರಿದ ಯುವಕ!

ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ ಯುವಕನೊಬ್ಬ, ಮದುವೆಗೆ...

ಅಳಿವಿನ ಅಂಚಿನಲ್ಲಿ ಅಕ್ಕಸಾಲಿಗರ ಕುಲಕಸುಬು: ಸರ್ಕಾರದ ನೆರವಿಗೆ ಚಿನ್ನ-ಬೆಳ್ಳಿ ಕೆಲಸಗಾರರ ಆಗ್ರಹ

ಒಮ್ಮೆ ರಾಜಾಶ್ರಯ ಪಡೆದಿದ್ದ ಪಾರಂಪರಿಕ ಕುಲಕಸುಬುಗಳಲ್ಲಿ ಒಂದಾಗಿದ್ದ ಚಿನ್ನ ಮತ್ತು ಬೆಳ್ಳಿ...