ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆ ತಾಲ್ಲೂಕು ಹ್ಯಾಂಡ್ ಪೋಸ್ಟ್ ಬಳಿಯ ಜಕ್ಕಳ್ಳಿ ಗ್ರಾಮದ ಜಫ್ರುಲ್ಲಾ ಎಂಬುವರಿಗೆ ಸೇರಿದ ಗುಜರಿ ಗೋದಾಮಿಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಹಳೇ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿದೆಯೆಂದು ವರದಿಯಾಗಿದೆ.
ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಲೀಕ ಜಫ್ರುಲ್ಲಾ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಎರಡು ವಾಹನಗಳು, ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ ಎಂ.ಜಿ ಸೋಮಣ್ಣ ಮಾತನಾಡಿ, ಗೋದಾಮಿನಲ್ಲಿದ್ದ ಹಳೇ ಗುಜರಿ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಮಾಲೀಕರಿಗೆ ನಷ್ಟವಾಗಿದ್ದು, ಬೆಂಕಿ ನಂದಿಸಲಾಗಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇದುವರೆಗೆ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೇರಳ | ಬದಲಾವಣೆಯ ಗಾಳಿ ಬೀಸುತ್ತಿದೆ; ಯುಡಿಎಫ್ ಅಲೆ ಏಳುತ್ತಿದೆ: ಕೆ ಸಿ ವೇಣುಗೋಪಾಲ್

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಅಶೋಕ್, ಮಂಜು, ರವಿ, ಚಾಲಕರಾದ ಹೇಮಂತ್ ಕುಮಾರ್, ಸುನಿಲ್ ಕುಮಾರ್, ಅರುಣ್ ಕುಮಾರ್, ಮುನಿಸಿದ್ದ ನಾಯಕ, ಪ್ರಕಾಶ, ಎಲ್ಲಪ್ಪ ಪುಂಡಲಿಕ, ರಾಹುಲ, ಬಾಲಕೃಷ್ಣ ಇದ್ದರು.




