ಗದಗ | ವಸಾಹತುಶಾಹಿತ್ವವು ಒಳಿತು ಕೆಡಕುಗಳ ಸಂತೆ: ಪ್ರೊ. ಕೆ. ವೆಂಕಟೇಶ

Date:

“ವಿನಾಶ ಮತ್ತು ವಿಮೋಚನೆ ಕ್ರಿಯೆಗಳೆರಡೂ ಭಾರತದ ಮೇಲೆ ವಸಾಹತುಶಾಹಿತ್ವವು ಉಂಟು ಮಾಡಿದ ಪರಿಣಾಮಗಳು. ಬ್ರಿಟೀಷರ ಕ್ರೌರ್ಯ, ಜೀವ ವಿರೋಧಿ ಕೃತ್ಯಗಳಿಗೆ ರಿಯಾಯತಿ ತೋರದೇ ಬ್ರಿಟೀಷ್ ಸಂದರ್ಭದ ಜನಪರ ಮಾನವೀಯ ಘಟನೆಗಳನ್ನೂ ಸಹ ಮರೆಯಬಾರದು” ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು ಡಾ. ಕೆ. ವೆಂಕಟೇಶರವರು ಹೇಳಿದರು.

- Advertisement -

ಗದಗ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಮಾಜ-ವಿಜ್ಞಾನ ಸಂಘವು ‘ವಸಾಹತುಶಾಹಿ ಪ್ರಜ್ಞೆ : ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳು’ ಎಂಬ ವಿಷಯದ ಕುರಿತು ಒಂದು ದಿನದ ಬಹುಶಿಸ್ತೀಯ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮವು ಮಹಾವಿದ್ಯಾಲಯದ ಸಭಾಂಗಣದಲ್ಲಿ ನೆರವೇರಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

“ಕೆ.ಎಲ್.ಇ.ಯಂತಹ ಚಾರಿತ್ರಿಕ ವಿದ್ಯಾಸಂಸ್ಥೆಯೊಂದು ವರ್ತಮಾನದ ಸುಡು ಸಂಗತಿಯೊಂದರ ಕುರಿತು ಆರೋಗ್ಯಪೂರ್ಣ ಚರ್ಚೆಯೊಂದನ್ನು ಏರ್ಪಡಿಸಿರುವುದು ಅದರ ಸಾಮಾಜಿಕ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಎನ್ನುವ ಮೂಲಕ ವಿಚಾರ ಸಂಕಿರಣದ ಆಶಯ ನುಡಿಗಳನ್ನು ಪ್ರೊ. ಕೆ. ವೆಂಕಟೇಶ ಅವರು ಪ್ರಾರಂಭಿಸಿದರು.

“ಬಹುಕಾಲದ ಹಿಂದೆಯೇ ವಸಾಹತುಶಾಹಿ ಆಡಳಿತ ಕೊನೆಗೊಂಡರೂ ಅದರ ಭಿನ್ನ ಭಿನ್ನ ಪಳಯುಳಿಕೆಗಳು ಇಂದಿಗೂ ನಮ್ಮ ಕಣ್ಣೆದುರಿಗಿವೆ. ಪ್ರತಿನಿತ್ಯವೂ ಎದುರುಬದುರಾಗುತ್ತಿವೆ. ಆರ್ಥಿಕ ಸಂಪತ್ತನ್ನು ವಶಪಡಿಸಿಕೊಳ್ಳುವ ಮೂಲ ಉದ್ದೇಶದ ವಸಾಹತೀಕರಣವು ಭಾರತೀಯ ಜನತೆಯ ಸಂಸ್ಕೃತಿ, ಮೌಲ್ಯ, ಕಲೆ, ನೃತ್ಯ, ಶಿಕ್ಷಣ ವ್ಯವಸ್ಥೆಯ ಮೇಲೆ ಮಾಡಿದ ಅತಿದೊಡ್ಡ ದಾಳಿಯಾಗಿದೆ” ಎಂದರು.

“ವಸಾಹತು ರಾಷ್ಟ್ರವಾಗಿದ್ದ ಕೀನ್ಯಾದಲ್ಲಿ ವ್ಯಕ್ತಿಯೊಬ್ಬ ತನ್ನ ಮಾತೃ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾನೆ ಎನ್ನುವ ಕಾರಣಕ್ಕೆ ಹತ್ತು ವರ್ಷಗಳ ಕಾಲ ಜೈಲುವಾಸಕ್ಕೆ ತಳ್ಳಲಾಗಿತ್ತು. ನಮ್ಮ ಸಂಸ್ಕೃತಿ, ಧರ್ಮ, ಭಾಷೆಗಳ ಮೇಲೆ ವಸಾಹತುಶಾಹಿ ಮಾಡಿದ ವಿನಾಶದ ಗಾಯಗಳಿವೆ.  ಇದರ ಜೊತೆಗೆ ನಮ್ಮ ಸಂಸ್ಕೃತಿ ಪರಂಪರೆಯ ಕೆಲವು ಗಾಯಗಳಿಗೆ ವಸಾಹತುಶಾಹಿ ಧೋರಣೆಯು ವಿಮೋಚನೆಯ ಮುಲಾಮಾಗಿಯೂ ಕೆಲಸ ಮಾಡಿದೆ” ಎಂದರು.

“ನಮ್ಮ ಶಿಕ್ಷಣ ವ್ಯವಸ್ಥೆಯಂತೂ ಹೆಚ್ಚು ವಸಾಹತುಶಾಹಿ ಮನಸ್ಥಿತಿ ಹೊಂದಿದೆ. ‘ವಸಾಹತುಶಾಹಿ ಚಿಂತನೆಗಳು ನಮ್ಮ ಚಿಂತನೆಗಳಲ್ಲ’ ಎನ್ನುವ ಕಾರಣಕ್ಕೆ ರಾಮ ಮನೋಹರ ಲೋಹಿಯಾ ವಿದ್ಯಾಬ್ಯಾಸಕ್ಕಾಗಿ ಜರ್ಮನಿಗೆ ತೆರಳುತ್ತಾರೆ. ಬ್ರಿಟೀಷರ ವರ್ಣತಾರತಮ್ಯ ನೀತಿಯನ್ನು ಜಗತ್ತಿನ ಅತಿದೊಡ್ಡ ಶೋಷಣೆ ಎನ್ನುತ್ತಾರೆ. ವಸಾಹತುಶಾಹಿಯ ಕಾರಣಕ್ಕೆ ಭಾರತದ ಮೂಲ ನಿವಾಸಿಗಳಿಗೆ ಕೀಳರಿಮೆ ಉಂಟಾಯಿತೆನ್ನುವ ಲೋಹಿಯಾರವರು ಬ್ರಿಟೀಷರ ಬದಲಾಗಿ ಆಪ್ರಿಕನ್ನರು ಅಥವಾ ನಿಗ್ರೋಗಳು ಭಾರತವನ್ನು ಆಳಿದರೆ ನಮ್ಮ ವರ್ಣನೀತಿ ಬದಲಾಗುತ್ತಿತ್ತು ಎನ್ನುತ್ತಾರೆ. ಇಂತಹ ವಿಸ್ಮೃತಿಗಳ ಮಧ್ಯ ಜನಭಾಷೆ ಮತ್ತು ಜನಸಂಸ್ಕೃತಿಗಳ ಮೇಲೆ ದಬ್ಬಾಳಿಕೆಯ ಮಧ್ಯೆಯೂ ಸಮಾಜದ ಬಹುಪಾಲು ಜನರಿಗೆ ವಸಾಹತುಶಾಹಿತ್ವವು ವಿಮೋಚನೆಯಾಗಿ ಕಂಡಿದೆ” ಎಂದರು.

ವಸಾಹತುಶಾಹಿತ್ವವು ವಿಮೋಚನೆಯ ದಾರಿ : ವಸಾಹತು ನೀತಿಯ ಒಳಿತನ್ನು ಗುಣಗಾಣಿಸುವ ಸಮೂಹವೂ ನಮ್ಮ ನಡುವೆ ಇದೆ. ಕುವೆಂಪುವಿನಂತಹ ಮಹಾನ್ ಲೇಖಕರು ‘ಬ್ರಿಟೀಷರು ಭಾರತಕ್ಕೆ ಪ್ರವೇಶಿಸದಿದ್ದರೆ ನಾನು ಧಣಿಗಳ ಮನೆಯ ಸಗಣಿ ಬಾಚುತ್ತಿದ್ದೆ’ ಎನ್ನುವ ಮಾತು ವಸಾಹತುಶಾಹಿ ಕಾಲದ ಬ್ರಿಟೀಶ್ ಶಿಕ್ಷಣ ವ್ಯವಸ್ಥೆಯು ಶೂದ್ರ ಮತ್ತು ತಳ ವರ್ಗ, ಸ್ತ್ರೀಯರ ಪಾಲಿಗೆ ಬಿಡುಗಡೆಯ ದಾರಿಯಾಗಿ ಕಂಡಿರುವುದನ್ನು ಸೂಚಿಸುತ್ತದೆ” ಎಂದು ಪ್ರೊ. ಕೆ. ವೆಂಕಟೇಶ್ ಎಂದರು.

ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ವೀಣಾ ಈ ಪ್ರಾಸ್ತಾವಿಕವಾಗಿ ಮಾತನಾಡಿ, “ಬ್ರಿಟೀಷರಿಂದ ನಾವು ರಾಜಕೀಯ ಬಿಡುಗಡೆಯನ್ನು ಎಂದೋ ಪಡೆದಿದ್ದೇವೆ. ಆದರೆ ಸಾಂಸ್ಕೃತಿಕ ಬಿಡುಗಡೆ ಸಾಧ್ಯವಾಗಬೇಕು. ಗಾಂಧಿ ಅಧುನಿಕತೆಯು ಭಾರತಕ್ಕೆ ಶಾಪ ಎನ್ನುತ್ತಾರೆ. ನಾವಿಂದು ಬ್ರಿಟೀಷರಿಲ್ಲದೇ ಬ್ರಿಟೀಷರ ಹಿಡಿತದಲ್ಲಿದ್ದೇವೆ” ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ. ಎ.ಕೆ.ಮಠ ಎಲ್ಲರನ್ನೂ ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀಮತಿ. ರಜನಿ ಪಾಟೀಲ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣದಲ್ಲಿ ಮಂಡಿಸಲ್ಪಡುವ ಲೇಖನಗಳ ಸಂಕಲನ ‘ಛಾಯೆ’ ಬಿಡುಗಡೆಗೊಂಡಿತು.

ಈ ಸುದ್ದಿ ಓದಿದ್ದೀರಾ? ಹಾವೇರಿ | ಮಳೆಯಿಂದ 349 ಮನೆಗಳಿಗೆ ಹಾನಿ; 161 ಅರ್ಜಿ ತಿರಸ್ಕಿರಿಸಿದ ಆಡಳಿತ

ಉದ್ಘಾಟನಾ ಕಾರ್ಯಕ್ರಮದ ನಂತರದ ತಾಂತ್ರಿಕ ಗೋಷ್ಠಿಗಳಲ್ಲಿ ಅಸ್ಸಾಂ ವಿಶ್ವವಿದ್ಯಾಲಯ, ಸಿಲಚಾರ್‌ನ ರಾಜ್ಯಶಾಸ್ತ್ರ ಪ್ರಾಧ್ಯಾಪಕರು ಹರ್ಷ ಎಸ್ ಮತ್ತು ಉತ್ತರ ಪ್ರದೇಶದ ನೋಯ್ಡಾದ ಜೆ.ಎಸ್.ಎಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಡಾ. ಅನುಷ ಹೆಗ್ಡೆ ವಸಾಹತುಶಾಹಿ ಅನುಭವದ ಕುರಿತಾದ ವಿಚಾರಗಳನ್ನು ಹಂಚಿಕೊಂಡರು.

ಮುಖ್ಯಾಂಶಗಳು:

* ವಸಾಹತು ಪ್ರಜ್ಞೆ ಒಂದು ಮನಸ್ಥಿತಿ. 

* ಚರಿತ್ರೆಯನ್ನು ಆರಾಧನೆ ಮತ್ತು ಪೂರ್ವಾಗ್ರಹ ಮನಸ್ಥಿತಿಯಿಂದ ನೋಡಿದರೆ ಅರಿವಿಗಿಂತ ಅಪಾಯ ಜಾಸ್ತಿ

* ಚರಿತ್ರೆಯ ವಸ್ತುನಿಷ್ಠ ಅಧ್ಯಯನ ಈ ಕಾಲದ ಅಗತ್ಯ

* ಪಾಶ್ಚಿಮಾತ್ಯರಿಂದ ಬಂದದ್ದು ಎಲ್ಲವೂ ಶ್ರೇಷ್ಠವಲ್ಲ, ಎಲ್ಲವೂ ತಿರಸ್ಕೃತವಲ್ಲ

ವಿಚಾರ ಸಂಕಿರಣದಲ್ಲಿ ದೇಶ ಮತ್ತು ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ಪ್ರತಿನಿಧಿಗಳು ಆಗಮಿಸಿ ಸುಮಾರು ಎಪ್ಪತ್ತು ಪ್ರಬಂಧಗಳನ್ನು ಮಂಡಿಸಿದರು. ವಿಚಾರಸಂಕಿರಣದಲ್ಲಿ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಬರ ಘೋಷಣೆ ರೈತರಿಗೆ ಮಾಡಿದ ಅವಮಾನ: ಚನ್ನರಾಯಪ್ಪ ಟೀಕೆ

ರಾಜ್ಯ ಸರ್ಕಾರ ಬರ ಪರಿಸ್ಥಿತಿಯಲ್ಲಿ ರೈತರಿಗೆ ₹2,500 ಆರ್ಥಿಕ ನೆರವು ನೀಡಲು...

ಧಾರವಾಡ | ಭಾರತದ ಸಂವಿಧಾನ ಜನರ ಅಶೋತ್ತರಗಳನ್ನು ಪ್ರತಿ ಬಿಂಬಿಸುವ ಕೃತಿಯಾಗಿದೆ: ಡಾ. ರಾಘವೇಂದ್ರ ಪಾಟೀಲ

"ಭಾರತದ ಸಂವಿಧಾನ ಜನರ ಅಶೋತ್ತರಗಳನ್ನು ಪ್ರತಿ ಬಿಂಬಿಸುವ ಕೃತಿಯಾಗಿದೆ. ಭಾರತದ ಸಂವಿಧಾನ...

ಹಾವೇರಿ | ಬೆಟಗೇರಿ ಕೃಷ್ಣಶರ್ಮ, ವಿ.ಕೃ. ಗೋಕಾಕರು ಕನ್ನಡ ವಿವೇಕ ಕಟ್ಟಿದವರು: ಕವಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ

ಬೆಟಗೇರಿ ಕೃಷ್ಣಶರ್ಮ ಮತ್ತು ವಿ.ಕೃ. ಗೋಕಾಕರು ತಮ್ಮ ಬರವಣಿಗೆಯಲ್ಲಿ ನೆಲದ ಸಂವೇದನೆಗಳ...

ಸಿಂದಗಿ | ರಾಮಾನಂದ ತೀರ್ಥರ ಜನ್ಮದಿನದೊಳಗೆ ವೀರಸೌಧ ಅಭಿವೃದ್ಧಿಗೆ ಕ್ರಮ

ಹೈದರಾಬಾದ್ ವಿಮೋಚನಾ ಚಳವಳಿಯ ಪಿತಾಮಹ ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವಾದ ಅಕ್ಟೋಬರ್...