ಗದಗ | ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಸಂಕಲ್ಪ: ಡಿಡಿಪಿಐ ಕೆ.ಡಿ. ಬಡಿಗೇರ

Date:

“2026-27ನೇ ಸಾಲಿನ SSLC ಪರೀಕ್ಷೆಯಲ್ಲಿ ಗದಗ ಜಿಲ್ಲೆಯ ಫಲಿತಾಂಶವನ್ನು ಗಣನೀಯವಾಗಿ ಸುಧಾರಿಸುವುದರ ಜೊತೆಗೆ ರಾಜ್ಯಮಟ್ಟದಲ್ಲಿ ಮೊದಲ ಐದು ಸ್ಥಾನಗಳೊಳಗೆ ಜಿಲ್ಲೆಯನ್ನು ತರುವ ಮಹತ್ವಾಕಾಂಕ್ಷೆಯ ಗುರಿಯನ್ನು ನಾವೆಲ್ಲರೂ ಹೊಂದಬೇಕು. ಈ ಗುರಿ ಸಾಧಿಸಲು ಪ್ರತಿಯೊಬ್ಬ ಅಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಕಂಕಣಬದ್ಧರಾಗಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಯಶಸ್ಸು ಸಾಧ್ಯ” ಎಂದು ಶಾಲಾ ಶಿಕ್ಷಣ ಇಲಾಖೆಯ ಗದಗ ಜಿಲ್ಲೆಯ ನೂತನ ಉಪನಿರ್ದೇಶಕರಾದ   ಕೆ.ಡಿ. ಬಡಿಗೇರ ಅವರು ಹೇಳಿದರು.

- Advertisement -

ಗದಗ ನಗರದ   ಮಹಾವೀರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2026-27ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಸುಧಾರಣೆ, ಗುಣಮಟ್ಟದ ಕಲಿಕೆ ಹಾಗೂ ಶೈಕ್ಷಣಿಕ ಸಾಧನೆ ಹೆಚ್ಚಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಜಿಲ್ಲೆಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ...

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್...

ಜಿಲ್ಲೆಯ ಪ್ರತಿಯೊಂದು ಶಾಲೆಯೂ ತನ್ನದೇ ಆದ ಶಾಲಾವಾರು ಕ್ರಿಯಾಯೋಜನೆಯನ್ನು ರೂಪಿಸಿಕೊಂಡು ಫಲಿತಾಂಶ ಸುಧಾರಣೆಗೆ ಮುಂದಾಗಬೇಕು. ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸುವುದು, ನಿರಂತರ, KAAMS ವರದಿಗಳ ಸಮರ್ಪಕ ನಿರ್ವಹಣೆ, ಶಾಲಾ ಸುರಕ್ಷತೆಗೆ ಆದ್ಯತೆ, AI ತಂತ್ರಜ್ಞಾನದ ಬಳಕೆ ಹಾಗೂ ಶಿಕ್ಷಕರ ಕಾರ್ಯನಿರ್ವಹಣೆಯಲ್ಲಿ ತಂತ್ರಜ್ಞಾನ ಅಳವಡಿಕೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿ, ಪ್ರತಿಭಾವಂತ ಹಾಗೂ ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೆ ಮೇಧಾವಿ ಹಾಗೂ ಸಂಜೀವಿನಿ ವರ್ಗಗಳು ಮಿಷನ್ 60+ ಅನುಷ್ಠಾನ ಕುರಿತು ತಿಳಿಸಿದರು.

ಇದಲ್ಲದೆ ಮಾದರಿ ಪ್ರಶ್ನೆಪತ್ರಿಕೆಗಳ ನಿರಂತರ ಅಭ್ಯಾಸ ಮತ್ತು ಮೌಲ್ಯಮಾಪನ, ಪೋಷಕರ ಸಹಭಾಗಿತ್ವ, ಮನೆ ಭೇಟಿ ಕಾರ್ಯಕ್ರಮ, ಡಿಸೆಂಬರ್ ಅಂತ್ಯದೊಳಗೆ ಪಠ್ಯಕ್ರಮ ಪೂರ್ಣಗೊಳಿಸುವಿಕೆ, SSLC ವಿದ್ಯಾರ್ಥಿಗಳ ಕಡ್ಡಾಯ ನೋಂದಣಿ, ಶಾಲೆಗಳ ಮೂಲಭೂತ ಸೌಕರ್ಯಗಳ ಸುಧಾರಣೆ, ಕರಿಯರ್ ಗೈಡೆನ್ಸ್, ಕಾಲಕಾಲಕ್ಕೆ ಇಲಾಖೆಯಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸುವುದು,ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ಇಲಾಖೆಯ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ  ಸಮಗ್ರ  ಶಿಕ್ಷಣ  ಕರ್ನಾಟಕದ  DYPC  ಎಂ.ಎಚ್. ಕಂಬಳಿ ಅವರು ಸಮಗ್ರ ಶಿಕ್ಷಣ ಕರ್ನಾಟಕದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನ,ಸಾಮರ್ಥ್ಯ ವೃದ್ಧಿ,ಸಮುದಾಯ ಭಾಗವಹಿಸುವಿಕೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವಗಳು, ಕುರಿತು ಮಾಹಿತಿ ನೀಡಿದರು. DYPC (ಗುಣಮಟ್ಟ) ರವಿ  ಪ್ರಕಾಶ್ ಅವರು ಅನುದಾನ ಬಳಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಯ ಕುರಿತು ಮಾತನಾಡಿದರು.

SSLC ನೋಡಲ್ ಅಧಿಕಾರಿಗಳಾದ  ಎಚ್.ಬಿ. ರಡ್ಡೇರ ಅವರು SSLC ಪರೀಕ್ಷಾ ಸಿದ್ಧತೆ, ವಿದ್ಯಾರ್ಥಿಗಳ ನೋಂದಣಿ, NMMS ಸೇರಿದಂತೆ ಪ್ರಮುಖ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿವರಿಸಿದರು. DIET ಉಪನ್ಯಾಸಕರಾದ ಶ್ರೀಮತಿ ಸುಧಾ ಬನ್ನಿಕಲ್ ಅವರು FLN ಕಾರ್ಯಕ್ರಮದ ಮಹತ್ವ ಮತ್ತು ಅನುಷ್ಠಾನದ ಕುರಿತು ಮಾತನಾಡಿದರು. APCO  ಶಿವಕುಮಾರ ಕುರಿ ಅವರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಿಕೆ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳ (CWSN) ಶೈಕ್ಷಣಿಕ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ  ವೇದಿಕೆಯಲ್ಲಿ  ಶಿಕ್ಷಣಾಧಿಕಾರಿ  ಮಲ್ಲಿಕಾರ್ಜುನ ಗೋಟುರ ಹಿರಿಯ ಉಪನ್ಯಾಸಕರಾದ  ಬಿ.ಎಫ್. ಅರವಟಿಗಿ, ವೈ ಕೆ ಹಂದ್ರಾಳ, ಕ್ಷೇತ್ರ ಸಮನ್ವಯಾಧಿಕಾರಿ  ಎಸ್ ಪಿ ಪ್ರಭಯ್ಯನಮಠ,   ಎನ್ ಆರ್ ನಿಡಗುಂದಿ,  ಮಾಧ್ಯಮಿಕ ನೌಕರರ ಸಂಘದ ಅಧ್ಯಕ್ಷರಾದ  ಎಂ.ಕೆ. ಲಮಾಣಿ, ಕಾರ್ಯದರ್ಶಿಗಳಾದ   ಆನಂದ ಪಾಟೀಲ,  ಉಮೇಶ್ ಹಿರೇಮಠ  ಕ್ಷೇತ್ರ ಶಿಕ್ಷಣಾಧಿಕಾರಿ  ವಿ.ವಿ. ನಡವಿನಮನಿ,  ಗಂಗಾಧರ ಅಣ್ಣಿಗೇರಿ, ಉಪನಿರ್ದೇಶಕರ ಕಚೇರಿಯ   ಎಂ.ಎಚ್. ಸವದತ್ತಿ ಹಾಗೂ   ಆರ್.ಜಿ. ಕವಲಗೇರಿ ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಪ್ರೌಢ ಶಿಕ್ಷಣ ಸಂಯೋಜಕರು,ಬಿ ಆರ್ ಪಿ ಗಳು ಜೊತೆಗೆ 285 ಕ್ಕೂ ಹೆಚ್ಚು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಕಾರ್ಯಾಗಾರದಲ್ಲಿ ಭಾಗವಹಿಸಿ ಶೈಕ್ಷಣಿಕ ಫಲಿತಾಂಶ ಸುಧಾರಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಎಸ್.ಬಿ. ದೊಡ್ಡಣ್ಣವರ  ಪ್ರಾರ್ಥಿಸಿದರು. ಎಚ್.ಬಿ. ರಡ್ಡೇರ  ಕಾರ್ಯಕ್ರಮ ನಿರೂಪಿಸಿದರು.   ಶ್ರೀಧರ ಬಡಿಗೇರ ಅವರು ವಂದಿಸಿದರು.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ ಶಾಖೆಯೂ ಶೀಘ್ರದಲ್ಲೇ ಮೌಲ್ಯಯುತ ಗ್ರಾಹಕರನ್ನು ಹೊಂದಿ ಅಭಿವೃದ್ಧಿ ಹೊಂದಲಿ: ಸುಧಾ ನಿತ್ಯಾನಂದ

ಉಭಯ ಜಿಲ್ಲೆಗಳಲ್ಲಿ ಐದು ಶಾಖೆಗಳನ್ನು ಹೊಂದಿರುವ ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್...

ಮೈಸೂರಿನಲ್ಲಿ ನ.13ರಂದು ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸೋದ್ಯಮ ಹಾಗೂ ವಿಜ್ಞಾನ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು...

ದಕ್ಷಿಣ ಕನ್ನಡ | ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಮಂಗಳೂರು: ಹೈನುಗಾರಿಕೆಯನ್ನು ಬಲಪಡಿಸಿ, ರೈತರ ಹಿತವನ್ನು ಕಾಪಾಡುವ ಉದ್ದೇಶದಿಂದ ಹಾಲಿನ ದರ...