ಗದಗ |ಮಗ ಸಾಲ ಮಾಡಿದ್ದಕ್ಕೆ ತಾಯಿಗೆ ಫೈನಾನ್ಸ್‌ ಕಂಪನಿ ಕಿರುಕುಳ; ಕಚೇರಿಯಲ್ಲಿ ಕೂಡಿ ಹಾಕಿ ಹಿಂಸೆ

Date:

ಫೈನಾನ್ಸ್‌ ಕಂಪನಿಯಲ್ಲಿ ಮಗ ಮಾಡಿದ್ದ ಸಾಲ ತೀರಿಸುವಂತೆ ಕಂಪನಿಯ ಸಿಬ್ಬಂದಿಗಳು ಸಾಲಗಾರನ ತಾಯಿಗೆ ಕಿರುಕುಳ ನೀಡಿದ್ದು, ಇಡೀ ದಿನ ಕಚೆರಿಯಲ್ಲಿ ಕೂಡಿ ಹಾಕಿ ಹಿಂಸಿಸಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಫೈನಾನ್ಸ್ ಕಂಪನಿಯ ಧೋರಣೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕಂಪನಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

- Advertisement -

ಬಜಾಜ್ ಫೈನಾನ್ಸ್‌ ಕಂಪನಿಯಲ್ಲಿ ಗದಗ ನಗರದ ಡಂಬಳ ನಾಕಾ ನಿವಾಸಿ ಹೂವಯ್ಯ ಅವರು 2021ರಲ್ಲಿ 1.30 ಲಕ್ಷ ರೂ. ಸಾಲಪಡೆದಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಹೂವಯ್ಯ, ಪ್ರತಿ ತಿಂಗಳು ಸಮಯಕ್ಕ ಸರಿಯಾಗಿ ಮಾಸಿಕ ಕಂತನ್ನು (ಇಎಂಐ) ಪಾವತಿಸುತ್ತಿದ್ದರು. ಆದರೆ, ಕಳೆದ ಎರಡು ತಿಂಗಳಿನಿಂದ ಕಂತು ಪಾವತಿಸಿರಲಿಲ್ಲ ಎಂದು ತಿಳಿದುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ | ಮುಂದುವರಿದ ಬಿಸಿಲ ಬೇಗೆ: ಮಳೆ ನಿರೀಕ್ಷೆಯಲ್ಲಿ...

ಮಳೆಗಾಲ ಮುಗಿಯುವ ಹಂತದಲ್ಲಿದ್ದರೂ ಬಾಗಲಕೋಟೆ ಜಿಲ್ಲೆಯಲ್ಲಿ ವಾತಾವರಣ ಮಾತ್ರ ಬೇಸಿಗೆಯ ಸ್ವರೂಪ ಪಡೆದುಕೊಂಡಿದೆ. ಮಳೆಗಾಗಿ ಎದುರು ನೋಡುತ್ತಿರುವ ರೈತರಿಗೆ ಬಿಸಿಲು ಮತ್ತಷ್ಟು ಆತಂಕ ಮೂಡಿಸಿದ್ದು, ಜಿಲ್ಲೆಯಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ತಾಪಮಾನ...

‘SIR ಪ್ರಕ್ರಿಯೆ ಕುರಿತು ನಮಗೆ ಏನನ್ನೂ ತಿಳಿಸದೇ ತೀರ್ಮಾನ’:...

ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ (ECI) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂಥದ್ದೊಂದು ಗಂಭೀರ ಸ್ವರೂಪದ ಬಿರುಕು ಮೂಡಿದೆ. ಎಸ್‌ಐಆರ್ (Special Intensive Revision - SIR /...

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ:...

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ ಗುಲಾಬಿ ಎಣ್ಣೆ ತಯಾರಿಕಾ ಘಟಕ, ಪ್ರವಾಸಿ ತಾಣ ಮಾಡಬೇಕು. ಟಿಪ್ಪು ಕಾಲದ ಚಾಮನ್ ಎಂಬ ಹೆಸರನ್ನು ಉಳಿಸಬೇಕು. ಗುಲಾಬಿ ಕೇವಲ ಒಂದು...

ಎರಡು ತಿಂಗಳಿನಿಂದ ಹೂವಯ್ಯ ಇಎಂಐ ಪಾವತಿ ಮಾಡದ ಕಾರಣಕ್ಕೆ, ಡಿಸೆಂಬರ್ 26ರಂದು ಬೆಳ್ಳಂಬೆಳಗ್ಗೆ ಹೂವಯ್ಯ ಅವರ ಮನೆಗೆ ನುಗ್ಗಿದ ಗದಗ ಬಜಾಜ್ ಫೈನಾನ್ಸ್‌ ಕಂಪನಿಯ ಸಿಬ್ಬಂದಿಗಳು ಹೂವಯ್ಯ ಅವರ ತಾಯಿ ಗಂಗವ್ವ ಅವರನ್ನು ಕಚೇರಿಗೆ ಕರೆದೊಯ್ದು ಕೂಡಿ ಹಾಕಿದ್ದಾರೆ. ಇಡೀ ದಿನ ಕಚೇರಿಯಲ್ಲಿಯೇ ಕೂರಿಸಿಕೊಂಡು ಕಿರುಕುಳ ನೀಡಿದ್ದಾರೆ. ನನ್ನನ್ನು ಹೊರಗೆ ಬಿಡಿ, ಸಾಲ ಮಾಡಿಯಾದರೂ ಕಂತು ಕಟ್ಟುತ್ತೇನೆಂದು ಗಂಗವ್ವ ಕೇಳಿಕೊಂಡರೂ ಸಿಬ್ಬಂದಿಗಳು ಆಕೆಯನ್ನು ಹೊರಗೆ ಕಳಿಸಿಲ್ಲ ಎಂದು ಆರೋಪಿಸಲಾಗಿದೆ.

ಗಂಗವ್ವ ಅವರನ್ನು ಇಡೀ ದಿನ ಕಚೇರಿಯಲ್ಲಿ ಕೂಡಿಹಾಕೊಂಡಿದ್ದ ವಿಷಯ ತಿಳಿದ ಸ್ಥಳೀಯರು ಬಜಾಜ್ ಫೈನಾನ್ಸ್‌ ಕಂಪನಿಯ ಕಚೇರಿಗೆ ತೆರಳಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಫೈನಾನ್ಸ್‌ ಕಂಪನಿಗಳು ಬಡ ಜನರಿಗೆ ಕಿರುಕುಳ ನೀಡುತ್ತಿವೆ. ಈ ಕಂಪನಿಗಳ ಮೇಲೆ ಪೊಲೀಸ್‌ ಇಲಾಖೆ ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಸವರಾಜ ಆತ್ಮಹತ್ಯೆ ಪ್ರಕರಣ: 15 ಮಂದಿ ವಿರುದ್ಧ ಕೇಸ್, ಮೂವರ ಬಂಧನ

ಮಸ್ಕಿ ತಾಲ್ಲೂಕಿನ ಮೆದಕಿನಾಳ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ...

ಉಡುಪಿ | ಆದಿದ್ರಾವಿಡ ಸಹಕಾರ ಸಂಘದಿಂದ ಶೇ.15 ಡಿವಿಡೆಂಡ್ ಘೋಷಣೆ

ತೆಂಕುಬಿರ್ತಿ, ಬ್ರಹ್ಮಾವರದ ಆದಿದ್ರಾವಿಡ ಸಹಕಾರ ಸಂಘ ನಿಯಮಿತದ 9ನೇ ವಾರ್ಷಿಕ ಮಹಾಸಭೆ...

ರಾಯಚೂರು | ಆಯುಷ್ ವೈದ್ಯರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಆಯುಷ್ ವೈದ್ಯರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು, ರೋಗಿಗಳಲ್ಲದವರ ದೂರಿನ ಆಧಾರದ ಮೇಲೆ...