ಸತತ ಹೋರಾಟದಿಂದ ಕಬ್ಬಿಗೆ ರೂ. 3,800 ದರ ನಿಗದಿ; ಏರಿಕೆಯ ನಿರೀಕ್ಷೆ: ಬಸವಂತಪ್ಪ ಕಾಂಬಳೆ

Date:

ರೈತರ ಸಂಘಟನೆಯ ಒಗ್ಗಟ್ಟು, ಪಕ್ಷಾತೀತ ಹೋರಾಟ ಮತ್ತು ಸಂಘಟನಾತ್ಮಕ ಶಿಸ್ತಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ಮಣಿಯಲೇಬೇಕಾಗಿದೆ. ರೈತರ ನಿರಂತರ ಹೋರಾಟದ ಪರಿಣಾಮವಾಗಿಯೇ ಪ್ರಸಕ್ತ ಹಂಗಾಮಿನಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ ₹4,270 ದರ ನಿಗದಿಪಡಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಹೇಳಿದರು.

- Advertisement -

ನಗರದಲ್ಲಿ ಮಾತನಾಡಿದ ಅವರು, “ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟ ಯಾವುದೇ ರಾಜಕೀಯ ಪಕ್ಷದ ಹಂಗಿಲ್ಲದೆ ನಡೆಯುತ್ತಿದೆ. ಸಂಘಟನೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಇರಬಹುದು. ಆದರೆ ಹೋರಾಟದ ನೇತೃತ್ವ ಮಾತ್ರ ರೈತ ಸಂಘಟನೆಯದ್ದೇ ಆಗಿರುತ್ತದೆ. ಯಾವುದೇ ಪಕ್ಷದ ನಾಯಕರ ಮುಲಾಜಿಗೆ ಒಳಗಾಗದೆ ರೈತರ ಹಿತಕ್ಕಾಗಿ ಹೋರಾಟ ನಡೆಸಲಾಗುತ್ತಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿವಾದಾತ್ಮಕ ಮತಾಂತರ ನಿಷೇಧ ಕಾಯ್ದೆ ರದ್ದತಿಯತ್ತ ರಾಜ್ಯ ಸರ್ಕಾರದ...

ಈ ಕಾಯ್ದೆಯ ರಚನಾ ಪ್ರಕ್ರಿಯೆಯಲ್ಲಿಯೇ ಹಲವು ಲೋಪಗಳಿದ್ದವು ಎಂಬುದು ಹಳೆಯ ಸರ್ಕಾರಿ ದಾಖಲೆಗಳಿಂದಲೇ ಸಾಬೀತಾಗಿದೆ. 2022ರಲ್ಲಿ ಸುಗ್ರೀವಾಜ್ಞೆ ಹಾಗೂ ಮಸೂದೆಗೆ ಸಂಪುಟದ ಅನುಮೋದನೆ ಪಡೆಯುವ ಮುನ್ನವೇ ರಾಜ್ಯ ಕಾನೂನು ಇಲಾಖೆಯು ಇದರ ಹಲವು...

ಶಿವಮೊಗ್ಗ | ವಿಮಾನ ಹಾರಾಟ ಸ್ಥಗಿತಕ್ಕೆ ಕಾರಣ ಯಾರು?

ಮಲೆನಾಡಿನ ಬಹುದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ, ಈಗ ಚರ್ಚೆಯ ಕೇಂದ್ರವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನ ಸೇವೆಗಳು ನಿರಂತರವಾಗಿ ಮುಂದುವರಿಯಬೇಕೆಂಬುದು ಮಲೆನಾಡಿನ ಜನರ ನಿರೀಕ್ಷೆ. ಆದರೆ,...

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ವ್ಯಕ್ತಿಗಿಂತ ಸಂಘಟನೆಯ ತೀರ್ಮಾನವೇ ಅಂತಿಮ

ನಮ್ಮದು ಒಂದೇ ಕಮಿಟಿ, ಒಂದೇ ಹೋರಾಟ. ಸಂಘಟನೆಯಲ್ಲಿ ವ್ಯಕ್ತಿಯ ತೀರ್ಮಾನಕ್ಕಿಂತ ಸಮಿತಿಯ ತೀರ್ಮಾನವೇ ಅಂತಿಮ. ಸಂಘಟನೆಯ ಶಿಸ್ತು ಮತ್ತು ಸಾಮೂಹಿಕ ನಿರ್ಧಾರಗಳಿಗೆ ಬದ್ಧವಾಗಿ ಕೆಲಸ ಮಾಡುವುದು ನಮ್ಮ ಹೋರಾಟದ ಶಕ್ತಿ. ವ್ಯಕ್ತಿ ಕೇಂದ್ರಿತ ಧೋರಣೆಗಿಂತ ಸಂಘಟನೆಯ ಸಾಮೂಹಿಕ ನಾಯಕತ್ವ ಮುಖ್ಯ ಎಂಬುದನ್ನು ನಾವು ನಂಬಿದ್ದೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಇತರ ಸಂಘಟನೆಗಳ ಮುಖಂಡತ್ವದ ಧೋರಣೆಯನ್ನು ಟೀಕಿಸಿದರು.

2007-08ರ ಹೋರಾಟದ ಕಿಚ್ಚು ಇಂದಿಗೂ ಆರಿಲ್ಲ

ಕರ್ನಾಟಕ ರಾಜ್ಯ ರೈತ ಸಂಘದ ಕಬ್ಬು ಬೆಳೆಗಾರರ ಹೋರಾಟಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. 2007-08ರಲ್ಲಿ ಆರಂಭವಾದ ಹೋರಾಟದ ಸಂದರ್ಭದಲ್ಲಿ ಕೆಲವು ಸಕ್ಕರೆ ಕಾರ್ಖಾನೆ ಮಾಲೀಕರು ರೈತ ಸಂಘಟನೆಯ ಪ್ರಮುಖರ ಮೇಲೆ ದೌರ್ಜನ್ಯ ಎಸಗಿದ್ದರು. ಆದರೂ ರೈತರು ಹೋರಾಟದಿಂದ ಹಿಂದೆ ಸರಿಯಲಿಲ್ಲ. ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಕ್ಕರೆ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹1,250 ದರ ನಿಗದಿಯಾಗಿತ್ತು.

ಹೋರಾಟ ಯಶಸ್ಸಿನ ಹಂತ ತಲುಪಿದ್ದ ಸಂದರ್ಭದಲ್ಲಿ ಕೆಲವು ಕಾರ್ಖಾನೆ ಮಾಲೀಕರು ನೂರಾರು ರೌಡಿಗಳನ್ನು ಕರೆತಂದು ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದರು. ಇದರಿಂದ ರೈತರ ಹೋರಾಟಕ್ಕೆ ತಾತ್ಕಾಲಿಕ ಹಿನ್ನಡೆಯಾಯಿತು. ಆದರೆ ರೈತರ ಹೋರಾಟದ ಕಿಚ್ಚು ಮಾತ್ರ ಆರಲಿಲ್ಲ ಎಂದು ಅಂದಿನ ಘಟನೆಗಳನ್ನು ಸ್ಮರಿಸಿದರು.

2010-11ರ ನಂತರ ಮತ್ತೆ ಸಾವಿರಾರು ಸಂಖ್ಯೆಯಲ್ಲಿ ಪಕ್ಷಾತೀತವಾಗಿ ಕಬ್ಬು ಬೆಳೆಗಾರರು ಬೀದಿಗಿಳಿದರು. ಅಂದು ಯುವಕರು ಕೈಯಲ್ಲಿ ಕಬ್ಬು ಹಿಡಿದುಕೊಂಡು ಕಾರ್ಖಾನೆ ಮಾಲೀಕರ ವಿರುದ್ಧ ಹೋರಾಟಕ್ಕೆ ಧುಮುಕಿದರು. ಈ ಬಾರಿ ಕಾರ್ಖಾನೆ ಮಾಲೀಕರ ಗುಂಡಾಗಿರಿಗೆ ಅವಕಾಶ ನೀಡಬಾರದು ಎಂದು ಯುವಕರು ಪಣತೊಟ್ಟಿದ್ದರು. ಸರ್ಕಾರ ನಿಗದಿಪಡಿಸಿದ್ದ ₹1,500 ದರವನ್ನು ಹೋರಾಟದ ಬಲದಿಂದ ₹1,800ಕ್ಕೆ ಏರಿಸುವಂತೆ ಮಾಡಲಾಯಿತು. ಇದು ಸಂಘಟಿತ ರೈತ ಹೋರಾಟದ ಶಕ್ತಿ ಎಂಬುದನ್ನು ಮರೆಯಬಾರದು ಎಂದರು.

ಅಲ್ಲಿಂದೀಚೆಗೆ ಕರ್ನಾಟಕ ರಾಜ್ಯ ರೈತ ಸಂಘ ಶಿಸ್ತು, ಸಮಿತಿ ನಿರ್ಧಾರ ಮತ್ತು ಸಾಮೂಹಿಕ ನಾಯಕತ್ವದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಧೋಳದ ರೈತರ ಹೋರಾಟವನ್ನು ಇಡೀ ರಾಜ್ಯ ಗಮನಿಸುತ್ತಿದೆ. ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಪ್ರಹ್ಲಾದ್ ಜೋಶಿ ಅವರ ರೈತ ಸಂಘಟನೆಗಳ ಸಭೆಗೂ ನಮ್ಮನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಕಬ್ಬಿನ ದರ ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳನ್ನು ಸಂಘಟನೆಯ ನಾಯಕರು ಮಂಡಿಸಿದ್ದರು ಎಂದು ತಿಳಿಸಿದರು.

ಪ್ರಸ್ತುತ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ಲಭ್ಯತೆ ಕಡಿಮೆ ಇರುವುದರಿಂದ ಹಾಲಸಿದ್ದನಾಥ ಕಾರ್ಖಾನೆ ನಿಗದಿಪಡಿಸಿರುವ ₹4,270 ದರ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸಕ್ಕರೆ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿರುವುದರಿಂದಲೂ ಕಬ್ಬಿನ ದರ ಹೆಚ್ಚಳಕ್ಕೆ ಅವಕಾಶವಿದೆ ಎಂದು ಕಾಂಬಳೆ ಅಭಿಪ್ರಾಯಪಟ್ಟರು.

ಈ ವರ್ಷ ಕನಿಷ್ಠ ₹4,500 ದರ ಸಿಗಬೇಕಾಗಿತ್ತು. ಆದರೆ ರೈತ ಸಂಘಟನೆಗಳಲ್ಲಿನ ಒಗ್ಗಟ್ಟಿನ ಕೊರತೆಯಿಂದ ನಿರೀಕ್ಷಿತ ಮಟ್ಟದ ದರ ನಿಗದಿಯಾಗಿಲ್ಲ ಎಂಬುದು ಬೇಸರದ ಸಂಗತಿ. ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದರೆ ಇನ್ನೂ ಉತ್ತಮ ದರ ಪಡೆಯಲು ಸಾಧ್ಯವಾಗುತ್ತಿತ್ತು ಎಂದು ಹೇಳಿದರು.

ಹೋರಾಟದ ಶಕ್ತಿಯಿಂದಲೇ ದರ ನಿಗದಿ: ದೊಂಡಪ್ಪ ಯರಗಟ್ಟಿ

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ದೊಂಡಪ್ಪ ಯರಗಟ್ಟಿ ಮಾತನಾಡಿ, “ರೈತರ ಹೋರಾಟದ ಶಕ್ತಿಯನ್ನು ಅರಿತೇ ಸಕ್ಕರೆ ಕಾರ್ಖಾನೆ ಮಾಲೀಕರು ಈ ದರ ನಿಗದಿಪಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದೂ ಈ ದರ ನಿಗದಿಗೆ ಪ್ರಮುಖ ಕಾರಣವಾಗಿದೆ” ಎಂದರು.

ಸಕ್ಕರೆ ಮಾರಾಟವಾದ ನಂತರ ದೊರೆಯುವ ಮೊತ್ತದಲ್ಲಿ ಶೇ.75ರಷ್ಟು ಪಾಲನ್ನು ಕಬ್ಬು ಬೆಳೆಗಾರರಿಗೆ ಹಾಗೂ ಶೇ.25ರಷ್ಟು ಪಾಲನ್ನು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ನೀಡುವ ಕುರಿತು ಮಾತುಕತೆ ನಡೆದಿದೆ ಎಂದು ತಿಳಿಸಿದರು.

ರೈತರ ಬೆವರಿನ ಬೆಲೆಗೆ ನ್ಯಾಯ ಸಿಗಬೇಕಾದರೆ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನ ಹೋರಾಟ ನಡೆಸುವುದು ಅನಿವಾರ್ಯ ಎಂಬ ಸಂದೇಶವನ್ನು ಈ ಹೋರಾಟ ಮತ್ತೊಮ್ಮೆ ಸಾರಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕಾಲಘಟ್ಟದ ದುರಂತ, ಸಮಾಜದ ನಿಶ್ಯಬ್ದ-ಆಜಂ ಖಾನ್

ಹನ್ನೊಂದು ತಿಂಗಳ ಜೈಲುವಾಸವನ್ನು ಮುಗಿಸಿ ಬಿಡುಗಡೆಗೊಂಡು ಮನೆಗೆ ತೆರಳುವ ದಿನ.  ಅದೆಷ್ಟು...

ಬೀದರ್‌ | ಕನೇರಿ ಸ್ವಾಮಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹ

ಭಾರತದ ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂದು ಹೇಳಿಕೆ ನೀಡಿರುವ ಕನೇರಿ ಕಾಡಸಿದ್ದೇಶ್ವರ...

ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ತಕ್ಷಣ ನೀರು ಹರಿಸಲು ಆಗ್ರಹ; ನ.16ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆ

ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಅಡಿಕೆ, ಬಾಳೆ, ತೆಂಗು,...

ಶಿವಮೊಗ್ಗ | ನೆಹರು ಕ್ರೀಡಾಂಗಣದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಕಡಿವಾಣ

ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಶಿವಮೂರ್ತಿ ಸರ್ಕಲ್ ಸಮೀಪದ ಐತಿಹಾಸಿಕ ನೆಹರು ಕ್ರೀಡಾಂಗಣದ...