ರಾಜ್ಯ ಸರ್ಕಾರ ವಿವಿಧ ನಿಗಮ, ಮಂಡಳಿ ಹಾಗೂ ಸಂಸ್ಥೆಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ರಾಯಚೂರು ಜಿಲ್ಲೆಯಿಂದ ಒಟ್ಟು 12 ಮಂದಿಗೆ ಸ್ಥಾನ ಕಲ್ಪಿಸಲಾಗಿದೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳ ಮುಖಂಡರಿಗೆ ಈ ನೇಮಕಾತಿಯಲ್ಲಿ ಅವಕಾಶ ದೊರೆತಿದ್ದು, ರಾಜಕೀಯ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.
ನೇಮಕಗೊಂಡವರ ವಿವರ ಇಂತಿದೆ:
- ಜೀವ ವೈವಿಧ್ಯ ಮಂಡಳಿ – ಜಿ. ಶಿವಮೂರ್ತಿ.
- ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ನಿಗಮ – ಶ್ರೀನಿವಾಸ ಸಿಂಧನೂರು.
- ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ – ಚಂದ್ರಶೇಖರಪ್ಪ ಆಶಾಪುರ.
- ಕರ್ನಾಟಕ ತೊಗರಿ ಅಭಿವೃದ್ಧಿ ನಿಗಮ – ನಿರುಪಾದಿ ಗುಡಿಹಾಳ.
- ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ – ತಾಯಪ್ಪ ಮಾನ್ವಿ.
- ಗಾಂಧಿ ಸ್ಮಾರಕ ನಿಧಿ – ರಜ್ಜಬ್ ಅಲಿ ಮುದಗಲ್.
- ಮೈಸೂರು ರಾಜ್ಯ ಖನಿಜ ನಿಗಮ – ಹನುಮಂತಪ್ಪ ಮಸ್ಕಿ.
- ನಿಜಶರಣ ಅಂಬಿಗರ್ ಚೌಡಯ್ಯ ಅಭಿವೃದ್ದಿ ನಿಗಮ – ಈರಮ್ಮ ಮಾನ್ವಿ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ – ಜೆ. ಅಂಜನ್ ಕುಮಾರ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ – ವೆಂಕಟೇಶ ರಾಗ ಲಾಪರ್ವಿ
- ತುಂಗಭದ್ರಾ ಕಮಾಂಡ್ ಏರಿಯಾ ಅಭಿವೃದ್ಧಿ- ಶ್ರೀನಿವಾಸ ಜಿ. ಅಸ್ಕಿಹಾಳ.
- ಇತರೆ ನೇಮಕಾತಿ – ಚಂದ್ರಶೇಖರ ಕಂಚಾಪುರ (ಲಿಂಗಸುಗೂರು).
- ಜಿಲ್ಲೆಯಿಂದ ಒಟ್ಟು 12 ಮಂದಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಅವಕಾಶ ದೊರೆತಿರುವುದು ಜಿಲ್ಲೆಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೂ ತತ್ವಾರ; ರೋಗಿಗಳ ಪರದಾಟ!
ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ನಿಗಮಕ್ಕೆ ರಾಯಚೂರಿನ ಜಾವಿದ್ ಉಲ್ ಹಕ್ ಅವರನ್ನು ನಿರ್ದೇಶಕ ಹಾಗೂ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಆದರೆ, ಅವರು ಅನಾರೋಗ್ಯದ ಕಾರಣ ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ನಿಧನದ ಬಳಿಕವೂ ನೇಮಕಾತಿ ಪಟ್ಟಿಯಲ್ಲಿ ಹೆಸರು ಪ್ರಕಟವಾಗಿರುವುದು ಚರ್ಚೆಗೆ ಕಾರಣವಾಗಿದೆ.




