ಎನ್.ಪಿ ಖಾತೆ ಮೂಲಕ ಬೆಳೆ ವಿಮೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿಸುವಂತೆಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ತಹಶಿಲ್ದಾರರ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
“2026-2027 ನೇ ಸಾಲಿನ ಬೆಳೆಗಳಿಗೆ ಫಸಲ್ ವಿಮಾ ಯೋಜನೆಯಡಿ ಬೆಳೆ ವಿಮೆ ನೊಂದಣಿ ಮಾಡಿಸಿಕೊಳ್ಳಲು ರೈತರು ಬ್ಯಾಂಕ್ ಗೆ ಹೋದಾಗ, ರೈತರು ಸಾಲ ಪಡೆದ ಕಟಬಾಕಿ ಹೊಂದಿರುವ ರೈತರಿಗೆ ಬ್ಯಾಂಕ್ ಖಾತೆಯು NP Non Performing Account ಇರುವುದರಿಂದ ಅರ್ಜಿ ಸ್ವೀಕರಿಸಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ” ಎಂದು ಕರವೇ ಮುಖಂಡರು ಅಸಮಾಧಾನ ವ್ಯಕ್ತಪಡಿಸದರು.
“ಬ್ಯಾಂಕ್ ಖಾತೆ ಎನ್.ಪಿ ಇದ್ದರೂ ರೈತನ ಜಮೀನು ಮತ್ತು ಬೆಳೆಯ ಮೇಲೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಬ್ಯಾಂಕ್ ಅಧಿಕಾರಿಗಳು ಅರ್ಜಿ ತೆಗೆದುಕೊಳ್ಳದ ಕಾರಣದಿಂದ ರೈತರಿಗೆ ಬೆಳೆ ವಿಮೆಯ ಸೌಲಭ್ಯದಿಂದ ವಂಚಿತರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೆಳೆ ನಷ್ಟ ಉಂಟಾದರೆ ಪರಿಹಾರ ಸಿಗುವುದಿಲ್ಲ. ಮತ್ತು ರೈತರ ವಿಮೆ ನೊಂದಣಿ ಸಮಯದಲ್ಲಿ ನೆಟವರ್ಕ ಸರ್ವರ ಮತ್ತು ತಾಂತ್ರಿಕ ದೋಷಗಳಿಂದ ಅಡತಡೆ ಆಗುತ್ತಿದ್ದು ರೈತರಿಗೆ ಕಿರಿಕಿರಿ ಉಂಟಾಗುತ್ತಿದ್ದೆ ಇದರಿಂದ ನೊಂದಣಿ ಕಾರ್ಯದ ಸಮಯವನ್ನು ವಿಸ್ತರಣೆ ಮಾಡಬೇಕು” ಎಂದು ವಿನಂತಿ ಕೊರಲಾಗಿಯಿತು.
“ದಯವಿಟ್ಟು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿ, ಎನ್.ಪಿ ಖಾತೆ ಇದ್ದರೂ ರೈತರಿಂದ ಬೆಳೆ ವಿಮೆ ಅರ್ಜಿಯನ್ನು ಸ್ವೀಕರಿಸಿ ವಿಮೆ ನೊಂದಣಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಈ ಕುರಿತು ತಕ್ಷಣ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು” ಎಂದು ಮನವಿ ಮಾಡಿದರು.
ಮನವಿ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಲೋಕೇಶ ಸುತಾರ, ಗೌರವಾಧ್ಯಕ್ಷರು ಪ್ರವೀಣ ಗಾಣಗೇರ, ಮುಖಂಡರು ಚನ್ನಬಸಯ್ಯ ಗಡ್ಡದೇವರಮಠ, ಬಸವರಾಜ ಮಲ್ಲೂರು, ಗಂಗಾಧರ ಕೊಂಚಗೇರಿಮಠ, ಅರುಣ ಮೆಕ್ಕಿ, ಈರಣ್ಣ ಶಿಗ್ಲಿ, ಕುಮಾರ ಕಣವಿ, ವಿನಾಯಕ ಮುಳಗುಂದ, ಫಕಿರೇಶ ಅಣ್ಣಿಗೇರಿ, ಶಿವಾನಂದ ಗೊಜನೂರು ಸೇರಿದಂತೆ ಅನೇಕ ಕರವೇ ಮುಖಂಡರು ಉಪಸ್ಥಿತರಿದ್ದರು.




