ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರೋಣ ವಿಭಾಗದ ಘಟಕದಿಂದ ಹೊಳೆಆಲೂರ-ಇಟಗಿ ಗ್ರಾಮಕ್ಕೆ ಬಸ್ಸಿಗೆ ಚಾಲನೆಯನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನಲ್ಲಿ ನೀಡಲಾಯಿತು.
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ (ರಿ) ಹೊಳೆ ಆಲೂರ ಘಟಕ ವತಿಯಿಂದ ಹೊಳೆಆಲೂರು-ಇಟಗಿ ಗ್ರಾಮಕ್ಕೆ ಬಸ್ ಬಿಡುವಂತೆ ಇತ್ತೀಚಿಗೆ ಮನವಿಯನ್ನು ಮಾಡಲಾಗಿದ್ದು, ಮನವಿಗೆ ಸ್ಪಂದಿಸಿ ರೋಣ ಘಟಕದ ಅಧಿಕಾರಿಗಳು ಬಸ್ ಸಂಚಾರ ಮಾಡಿದ್ದರಿಂದ ಇಂದು ಸಂಘಟನೆ ಅಧ್ಯಕ್ಷರು ಉಮೇಶ್ ಪೂಜಾರರವರ ನೇತೃತ್ವದಲ್ಲಿ ಬಸ್‌ಗೆ ಪೂಜೆ ಮಾಡಿ, ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗೋವಿಂದ ಖ್ಯಾಡದ, ಮುತ್ತಣ್ಣ ಹೂಗಾರ್,ಕಾರ್ತಿಕ ಬಡಿಗೇರ, ಸುರೇಶ್ ಗಾಣಿಗೇರ್, ಮಹೇಂದ್ರಗೌಡ ಪಾಟೀಲ್, ವಾಸು ಪವಾರ್, ಯಚ್ಚರಪ್ಪ ಪೂಜಾರ, ನಾಗರಾಜ ಕಂಠಿ, ಹನುಮಂತ ಹಳ್ಳಿಕೇರಿ,ಬಸು ಕಾತರಕಿ, ಮುತ್ತು, ಯಚ್ಚರಪ್ಪ ಬಿಳೆಕಲ್, ಇನ್ನು ಅನೇಕ ಉಪಸ್ಥಿತರಿದ್ದರು.




