“ರಾಜ್ಯದಲ್ಲಿ ಮುಂಗಾರು ಮಳೆ ಸ್ವಲ್ಪ ವಿಳಂಬವಾಗಿದ್ದರೂ ಸಹ ಈ ವಾರದಿಂದ ಮುಂಗಾರು ಮಳೆ ಪ್ರಾರಂಭಗೊಂಡಿದೆ. ಇದರಿಂದ ರೈತರು ತಮ್ಮ ಮುಂಗಾರು ಬಿತ್ತನೆಯ ಚಟುವಟಿಕೆ ಪ್ರಾರಂಭಿಸಲು ಎಲ್ಲ ಜಮೀನುಗಳನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮಳೆಯಾದ ತಕ್ಷಣ ರೈತರು ಬಿತ್ತನೆ ಪ್ರಾರಂಭ ಮಾಡುವರು. ರೈತರಿಗೆ ಸಮರ್ಪಕ ಬೀಜ, ಗೊಬ್ಬರ ವಿತರಿಸಲು ಈಗಿನಿಂದಲೇ ಕ್ರಮ ಕೈಗೊಳ್ಳಬೇಕು. ಎಂದು ಶಿರಹಟ್ಟಿ ಲಕ್ಷೇಶ್ವರ ತಾಲೂಕು ಸಮಗ್ರ ರೈತ ಹೋರಾಟ ಮುಖಂಡರು ಒತ್ತಾಯಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕೆಂಚಲಾಪೂರ ಓಣಿಯ ಹತ್ತಿರ ಬರುವ ಮಂಜುನಾಥ ಮಾಗಡಿ ಅವರ ಜೀನಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಮಗ್ರ ರೈತ ಹೋರಾಟ ವೇದಿಕೆಯ ಮುಖಂಡರು ಮಂಜುನಾಥ ಮಾಗಡಿ ರವಿಕಾಂತ ಅಂಗಡಿ ಮಾತನಾಡಿ, “ರೈತರಿಗೆ ತಮಗೆ ಬೇಕಾದ ಸಮಯದಲ್ಲಿ ಬೀಜ ಗೊಬ್ಬರವನ್ನು ಪಡೆಯಬೇಕಾದರೆ ಹೋರಾಟವನ್ನು ಮಾಡಬೇಕಾಗಿದೆ ಹಾಗೂ ಕಷ್ಟಪಟ್ಟು ಬೆಳೆದ ಬೆಳೆ ಬಂದಾಗ ಅವುಗಳಿಗೆ ಸೂಕ್ತ ಬೆಲೆ ಪಡೆಯಬೇಕಾದರು ಅದಕ್ಕೂ ಸಹ ಹೋರಾಟ ಮಾಡಿ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು.
ರೈತ ಮುಖಂಡರು “ಮಹೇಶ್ ಹೂಗೆಸೊಪ್ಪಿನ ಮಾತನಾಡಿ, “ರೈತರ ಹೆಸರು ಹೇಳಿ ಅಧಿಕಾರಕ್ಕೆ ಬರುವ ಸರಕಾರಗಳು ಖುರ್ಚಿ ಮೇಲೆ ಕುಂತ ತಕ್ಷಣ ರೈತರನ್ನು ಮರೆತುಬಿಡುತ್ತಾರೆ. ಇದರಿಂದಾಗಿ ರೈತರ ಗೋಳು ಕೇಳುವವರು ಇಲ್ಲದಂತಾಗಿದೆ. ಇದರಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕುವಂತಾಗಿದೆ” ಎಂದು ಹೇಳಿದರು.
“ಇದನ್ನೆಲ್ಲಾ ಅರ್ಥ ಮಾಡಿ ಕೊಂಡು ಕೇಂದ್ರ ರಾಜ್ಯ ಸರ್ಕಾರಗಳು ರೈತರಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕ ಬೀಜ ಗೊಬ್ಬರ ವಿತರಿಸಲು ಈಗಿನಿಂದಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಬೀಜ ಗೊಬ್ಬರ ಪಡೆಯಲು ನೀಡಿರುವ ಕೆಲವು ನಿಯಮಗಳನ್ನು ಸಡಿಲಗೊಳಿಸಿ ಎಲ್ಲ ರೈತರಿಗೂ ಬೀಜ ಗೊಬ್ಬರ ಪೂರೈಕೆ ಆಗುವಂತೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸಮಯದಲ್ಲಿ ರೈತ ಮುಖಂಡರು ಹೊನ್ನಪ್ಪ ವಡ್ಡರ ಚನ್ನಪ್ಪ ಷಣ್ಮುಖಿ ಬಸವರಾಜ ಹಿರೇಮನಿ, ಟಾಕಪ್ಪ ಸಾತಪೂತೆ, ಮಂಜು ಮುಳುಗುಂದ, ಮಲ್ಲಿಕಾರ್ಜುನ ನೀರಲೋಟಿ, ನಾಮದೇವ ಮಾಂಡ್ರೆ, ಪವನ್ ಬಂಕಾಪುರ, ಮಾಂತೇಶ್ ಉಮಚಗಿ, ಪದ್ಮನಗೌಡ ಜಿ. ಪಾಟೀಲ, ಶಿವು ತಾರಿಕೊಪ್ಪ, ಬಸವರಾಜ ಜಾಲಗಾರ, ಈರಣ್ಣ ಕಟಗಿ, ಚಂದ್ರು ಮಾಗಡಿ, ಮುತ್ತು ನೀರಲಗಿ, ಸೇರಿದಂತೆ ಇನ್ನೂ ಅನೇಕ ರೈತ ಮುಖಂಡರು ಇದ್ದರು.




