ಟಿಪ್ಪು ಸೆಕ್ಯುಲರ್ ಸೇನೆಯ ವತಿಯಿಂದ ಇಂದು ದೇವನಹಳ್ಳಿಯಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ ಹುಟ್ಟುಹಬ್ಬದ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿಪ್ಪು ಸೆಕ್ಯುಲರ್ ಸೇನಾ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಎಂ ಮಹಿದ್ದೀನ್ ಪಾಷಾ ತಾಲೂಕು ಅಧ್ಯಕ್ಷರಾದ ರಸುಲ್ ಖಾನ್ ನಗರ ಅಧ್ಯಕ್ಷರಾದ ಸಮಿಉಲ್ಲಾ ಶಿಡ್ಲಘಟ್ಟ ತಾಲೂಕು ಅಧ್ಯಕ್ಷರಾದ ಟಿಪ್ಪು ಮೌಲಾ ಚಿಕ್ಕಬಳ್ಳಾಪುರ ಎಂ ಎಂ ಬಾಷಾ ಬಿಎಸ್ ರಫಿ ಉಲ್ಲಾ ಸೈಯದ್ ಮುಬಾರಕ್ ಮನ್ಸೂರ್ ಅಲಿ ಖಾನ್ ಮಹಮ್ಮದ್ ಇಸಾಕ್ ಖಾನ್ ಮತ್ತು ಯುವಕರು ಟಿಪ್ಪು ಸುಲ್ತಾನ್ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ದೇಶಕ್ಕಾಗಿ ಹಾಗೂ ರಾಜ್ಯಕ್ಕಾಗಿ ಟಿಪ್ಪು ಸುಲ್ತಾನ್ ತಮ್ಮ ಮಕ್ಕಳನ್ನು ಹಾಗೂ ಪ್ರಾಣವನ್ನು ತ್ಯಾಗ ಮಾಡಿದ್ದನ್ನು ನೆನಪಿಸಿದರು. ರೇಷ್ಮೆ ಉದ್ಯಮದ ಅಭಿವೃದ್ಧಿ ಮತ್ತು ರಾಕೆಟ್ ತಂತ್ರಜ್ಞಾನದ ಇತಿಹಾಸದಲ್ಲಿ ಟಿಪ್ಪು ಸುಲ್ತಾನ್ ಅವರ ಪಾತ್ರ ಹಿರಿದಾದದ್ದು ಎಂದು ಬಣ್ಣಿಸಿದರು.
ಮುಂಬರುವ 2027ನೇ ಇಸವಿಯಿಂದ ರಾಜ್ಯ ಸರ್ಕಾರದ ವತಿಯಿಂದಲೇ ಅಧಿಕೃತವಾಗಿ ಟಿಪ್ಪು ಜಯತಿಯನ್ನು ಆಚರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಯಿತು. ಒಂದು ವೇಳೆ ಸರ್ಕಾರದಿಂದ ಜಯಂತಿ ಆಚರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಜಯಂತಿ ಆಚರಿಸಲು ಹಿಂದೇಟು ಹಾಕುವುದಾದರೆ, ಟಿಪ್ಪು ಸುಲ್ತಾನ್ ಅವರ ಹೆಸರಿನಲ್ಲಿ ಒಂದು ವಿಶೇಷ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಲಾಯಿತು.ಇದರಿಂದ ಮುಂದಿನ ಪೀಳಿಗೆಗೆ ಅವರ ಇತಿಹಾಸ ಮತ್ತು ಕೊಡುಗೆಗಳ ಬಗ್ಗೆ ತಿಳಿಯಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕರು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಟಿಪ್ಪು ಸುಲ್ತಾನ್ ಅವರ ಆದರ್ಶಗಳನ್ನು ಪಾಲಿಸುವಂತೆ ಸಂದೇಶ ಸಾರಿದರು.




