ರಾಯಚೂರು ಲೋಹಿಯ ಪ್ರತಿಷ್ಠಾನದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಈರಣ್ಣ ರುದ್ರಾಕ್ಷಿ ಅವರಿಗೆ ಭೀಮನಗೌಡ ಇಟಿಗಿ ಶಾಂತಿನಗರದ ದುರ್ಗಾದೇವಿ ದೇವಸ್ಥಾನದಲ್ಲಿ ಗೌರವಿಸಿ ಸನ್ಮಾನಿಸಿದರು.
ಕಳೆದ ನಾಲ್ಕು ದಶಕಗಳಿಂದ ಜನಪದ ಸಾಂಸ್ಕೃತಿಕ ಕಲಾವಿದರಾಗಿ ಹಗಲುವೇಷ ಕಲಾವಿದರಾಗಿ ಕಲಾಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದ ಈರಣ್ಣ ರುದ್ರಾಕ್ಷಿ ಅವರಿಗೆ ಸರಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದ್ದು ಜನಪದ ಸಂಸ್ಕೃತಿಗೆ ನೀಡಿದ ಗೌರವವೆಂದು ಅಭಿಪ್ರಾಯ ಪಟ್ಟರು.
ಜನಪದ ಕಲೆ ಪರಂಪರೆ ಮಾಯವಾಗುವ ಇಂಥ ಆಧುನಿಕ ಯುಗದಲ್ಲಿ ರುದ್ರಾಕ್ಷಿ ಕುಟುಂಬವು ಕಲೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದು ನಿಜವಾದ ಮೆಚ್ಚುವ ಕಾರ್ಯವೆಂದು ಅಭಿಪ್ರಾಯಪಟ್ಟರು ಇನ್ನು ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಲಿ ಎಂದು ಅಭಿನಂದಿಸಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಹಂಚಿನಾಳ ಕ್ಯಾಂಪ್‌ನಲ್ಲಿ 25 ಬೀದಿ ನಾಯಿಗಳ ಸೆರೆ
ಈ ಸಂದರ್ಭದಲ್ಲಿ ದೇವದುರ್ಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹೆಚ್. ಶಿವರಾಜ್ ತಾಲೂಕ ಚಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ್ ಪಾಟೀಲ ಅಮರಾಪುರ ಮಲ್ಲನಗೌಡ ಪಾಟೀಲ್ ಗೆಜ್ಜೆ ಬಾಯಿ ವಕೀಲರು ವೆಂಕಟರೆಡ್ಡಿ ಮಾಲಿ ಪಾಟೀಲ್ ಶಾಕಾಪುರ್ ರವಿಚಂದ್ರ ರುದ್ರಾಕ್ಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು




