ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಳ್ಳಿ ಗುಗ್ಗು ಎಂದು ಸಂಬೋಧಿಸಿರುವುದು ಖಂಡನೀಯ. ಕೂಡಲೇ ಕ್ಷಮೆಯಾಚನೆ ಮಾಡಬೇಕೆಂದು ಜೆಡಿಎಸ್ ಪಕ್ಷದ ವತಿಯಿಂದ ನಗರದ ಸಾರ್ವಜನಿಕ ಕ್ಲಬ್‌ನಿಂದ ಮಿನಿವಿಧಾನಸೌಧವರೆಗೆ ಪ್ರತಿಭಟಿಸಿ ರಾಜ್ಯಪಾಲರಿಗೆ ಬರೆದ ಮನವಿ ತಹಶೀಲ್ದಾರ ನಾಗಮ್ಮ ಕಟ್ಟಿಮನಿ ಮುಖಾಂತರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕಿ ಕರೆಮ್ಮ ಜಿ ನಾಯಕ, ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇಲಾಖೆ ಹೊತ್ತಿರುವ ಗೃಹಮಂತ್ರಿ ಪ್ರಿಯಾಂಕ್ ಖರ್ಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಬಗ್ಗೆ ಹಳ್ಳಿಗುಗ್ಗು ಎಂಬ ಪದ ಬಳಕೆ ಮಾಡಿದ್ದು ಅಕ್ಷಮ್ಯ ಅಪರಾದ. ಕೂಡಲೇ ಕ್ಷಮೆಯಾಚಿಸಬೇಕೆಂದು ಹೇಳಿದರು.
ರಾಜ್ಯದ ಜನರಿಗೆ ಜನಪರ ಯೋಜನೆಗಳು ಜಾರಿಗೆ ತರದೇ ಟೀಕೆಗಳು ಮಾಡುವುದರಲ್ಲೇ ಕಾಂಗ್ರೆಸ್ ಸರಕಾರ ಕಾಲಹರಣ ಮಾಡುತ್ತಿದೆ. ಯಾರಿಗೂ ಅಧಿಕಾರ ಶಾಶ್ವತವಲ್ಲ ವಯಸ್ಸಿನ ಮೇಲೆ ಬದ್ಧತೆ ಇಟ್ಟಿಕೊಂಡು ಮಾತಾಡುವ ಸೌಜನ್ಯ ಮೈಗೊಡಿಸಿಕೊಳ್ಳಬೇಕೆಂಬ ಪ್ರಿಯಾಂಕ್ ಖರ್ಗೆ ಅವರು ಮೊದಲು ತಿಳಿದುಕೊಳ್ಳಬೇಕು. ಯಾವುದೇ ವ್ಯಕ್ತಿಯಾದರೂ, ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ನಾಲಿಗೆ ಮೇಲೆ ಹಿಡಿತ ಇಟ್ಟಿಕೊಂಡು ಮಾತನಾಡುವುದು ಕಲಿಯಬೇಕು. ಅಧಿಕಾರವಿದೇ ಯಾರ ಮೇಲೆಯಾದರೂ ಏನಾದರು ಮಾತನಾಡಬಹುದು ಎಂದು ಹುಚ್ಚು ಕಲ್ಪನೆ ಬಿಟ್ಟು ನಡೆಯುತ್ತಿರುವ ಅನ್ಯಾಯದ ವಿರುದ್ಧ ಬಡಜನರಿಗೆ ನ್ಯಾಯ ಒದಗಿಸುವ ಕೆಡೆಗೆ ಗಮನಹರಿಸುವಂತೆ ಎಂದು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗೃಹವಸ್ತುಗಳ ಬೆಲೆ ಗಗನಕ್ಕೇ ಏರಿದ್ದು, ಜನಸಾಮಾನ್ಯರು ವಸ್ತುಗಳು ಖರೀದಿಸಲು ಹಿಡಿಶಾಪ ಹಾಕುವಂತಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ಹಿನ್ನೆಲೆ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದ್ದು, ಅಭಿವೃದ್ಧಿಗೆ ಅನುದಾನ ನೀಡದೇ ಕಾಲಹರಣ ಮಾಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಮುಂಬರುವ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲ್ಪಿಸುತ್ತಾರೆ ಎಂದು ಆರೋಪಿಸಿದರು.
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದಲ್ಲಿ ಬರಪಿಡೀತ ತಾಲೂಕಿನ ರೈತರು ಹಲವು ತೊಂದರೆಗಳು ಅನುಭವಿಸುತ್ತಿದ್ದು, 2500ರೂ. ಬೆಳೆ ಪರಿಹಾರ ಘೋಷಣೆ ಮಾಡಿದ್ದಾರೆ. ತಾಲೂಕಿನಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಮೆಣಸಿನಕಾಯಿ ಬೆಳೆದ ರೈತರಿಗೆ ನೀರಿನ ಅಭಾವದಿಂದ ಬೆಳೆಗಳು ರಕ್ಷಣೆ ಮಾಡುವುದೇ ದೊಡ್ಡ ಸವಾಲಾಗಿದೆ. ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಡಿಸೆಬಂರ್ ಕೊನೆ ವಾರದವರೆಗೆ ನೀರು ಹರಿಸಬೇಕೆಂದು ನೀರಾವರಿ ಸಲಹಾ ಸಮಿತಿ ಗಮನಕ್ಕೆ ತಂದರೂ, ಕ್ಯಾರೇ ಎನ್ನುತ್ತಿದ್ದಾರೆ ಎಂದು ದೂರಿದರು.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಹಳ್ಳಿಗುಗ್ಗು ಎಂಬ ಪದ ಬಳಕೆ ಮಾಡಿರುವ ಪ್ರಿಯಾಂಕ್ ಖರ್ಗೆ ಕೂಡಲೇ ಕ್ಷೆಮೆಯಾಚನೆ ಕೇಳದೇ ಇದ್ದರೇ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಹಂಚಿನಾಳ ಕ್ಯಾಂಪ್‌ನಲ್ಲಿ 25 ಬೀದಿ ನಾಯಿಗಳ ಸೆರೆ
ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಬಸನಗೌಡ ದೇಸಾಯಿ, ಶರಣಪ್ಪ ಬಳೆ, ಅಮರೇಶ ಪಾಟೀಲ್, ಸಿದ್ದಣ್ಣ ಗಣೇಕಲ್, ರಮೇಶ ರಾಮನಾಳ, ಶಿವನಗೌಡ ಕಕ್ಕಲದೊಡ್ಡಿ, ಗೋವಿಂದರಾಜ್ ನಾಯಕ, ಶರಣಗೌಡ ಸುಂಕೇಶ್ವಹಾಳ, ಸಿದ್ದಣ್ಣ ದೊಂಡಂಬಳಿ, ತಮ್ಮಣ ವಕೀಲ, ರೇಣುಕಾಸ್ವಾಮಿ, ಮಯೂರುಸ್ವಾಮಿ, ಶಾಲಂ ಉದ್ದಾರ, ಚನ್ನಪ್ಪ ಗೆಜ್ಜೆಭಾವಿ, ಮಹಾದೇವಪ್ಪ ಚಿಕ್ಕಬೂದೂರು, ರಾಮಣ್ಣ ನಾಯಕ ಮದರಕಲ್, ಗೌರಿ ಜಿ.ನಾಯಕ, ಪ್ರಭು ದೊರೆ, ಮಹಿಬೂಬೂ ಸೇರಿದಂತೆ ಇತರರು ಇದ್ದರು.




