ಗದಗ | ಗಾಂಧೀಜಿ ಜಗತ್ತು ಕಂಡ ಅಪರೂಪದ ಶ್ರೇಷ್ಠ ವ್ಯಕ್ತಿ: ಎಂಎಲ್‌ಸಿ ಎಸ್‌.ವಿ ಸಂಕನೂರ

Date:

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಜಗತ್ತು ಕಂಡ ಅಪರೂಪದ ಶ್ರೇಷ್ಠ ವ್ಯಕ್ತಿ. ಸತ್ಯ, ಪ್ರೇಮ, ಅಹಿಂಸೆ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ತಿಳಿಸಿದರು.

- Advertisement -

ಗದಗದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿಯವರ 154ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಸತ್ಯಾಗ್ರಹ ಹಾಗೂ ಅಸಹಕಾರ ಚಳುವಳಿಗಳು ಗಾಂಧಿ ಅವರ ಹೋರಾಟದ ಅಸ್ತ್ರಗಳಾಗಿದ್ದವು. ಸುಧೀರ್ಘ ಹೋರಾಟದ ನಂತರ ನಮ್ಮ ದೇಶಕ್ಕೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ದೇಶದ ಜನರ ಕಲ್ಯಾಣಕ್ಕಾಗಿ ಗಾಂಧಿ ಅವರು ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಜಾತೀಯತೆ, ಅಸ್ಪೃಶ್ಯತೆ, ಭ್ರಷ್ಟಾಚಾರ ನಿರ್ಮೂಲನೆ, ಗೋರಕ್ಷಣೆ ಮಾಡಲು ಹಲವಾರು ಹೋರಾಟಗಳನ್ನು ದೇಶದ ಒಳಿತಿಗಾಗಿ ಮಾಡಿದ್ದಾರೆ” ಎಂದು ಅವರು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

“ಸ್ವಾತಂತ್ರ್ಯ ಸಿಕ್ಕ ನಂತರ ಭಾರತವನ್ನು ರಾಮರಾಜ್ಯವನ್ನಾಗಿ ಮಾಡುವ ಕನಸನ್ನು ಗಾಂಧೀಜಿ ಹೊಂದಿದ್ದರು. ಇಂದಿನ ನಾಯಕರು, ಅಧಿಕಾರಿಗಳು ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಸಂಪೂರ್ಣವಾಗಿ ರಾಮರಾಜ್ಯ ಮಾಡಲು ಆಗಿದೆಯೇ ಅಥವಾ ಇಲ್ಲವೋ ಎನ್ನುವ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ” ಎಂದರು.

ಹುಲಕೋಟಿ ಸಹಕಾರಿ ರೇಡಿಯೋ ನಿರ್ದೇಶಕ ಜೆ.ಕೆ.ಜಮಾದಾರ ಮಾತನಾಡಿ, “ಮಹಾತ್ಮಾ ಗಾಂಧೀಜಿಯವರು ಶತಮಾನದ ಶ್ರೇಷ್ಠೋತ್ತಮ ಮಾನವಾರಾಗಿದ್ದಾರೆ. ಗಾಂಧೀಜಿಯವರೆಂದರೆ ಅಂತಾರಾಷ್ಟ್ರೀಯ ಭಾವೈಕ್ಯತೆಯ ಸಂಕೇತ. ಗಾಂಧೀಜಿಯವರನ್ನು ಯುಗ ದೇವ ಎಂದು ಕೆಲವು ತಜ್ಞರು ಕರೆದಿದ್ದಾರೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾ ದಾಸರ, ಉಪಾಧ್ಯಕ್ಷೆ ಶ್ರೀಮತಿ ಸುನಂದಾ ಬಾಕಳೆ, ಜಿಲ್ಲಾ  ಪೊಲೀಸ  ವರಿಷ್ಟಾದಿಕಾರಿ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ  ರವಿ ಗುಂಜೀಕರ್ , ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ , ವಾರ್ತಾಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಬ ಮಡ್ಲೂರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಹಾಂತೇಶ ಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೆಶಕ ವೀರಯ್ಯ ಸ್ವಾಮಿ ಬಿ, ಸುಮನ್ ಕುಲಕರ್ಣಿ, ಮುಸ್ಕಾನ್ ಕುರಾನ್, ವೆಂಕಟೇಶ ಅಲ್ಕೋಡ, ಉಷಾ ಕಾರಂತ ಇದ್ದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ |ಕನ್ನಡ ಸಾಹಿತ್ಯ ಪರಿಷತ್ತಿಗೆ ಪಕ್ಷ ರಾಜಕಾರಣದ ಸೋಂಕು ಬೇಡ; ಅದು ಜನರ ವೇದಿಕೆ: ಎಸ್.ಜಿ. ಸಿದ್ದರಾಮಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಗೆ ಕಳೆದ ಹತ್ತು ವರ್ಷಗಳಿಂದ ಧಕ್ಕೆ ಉಂಟಾಗುತ್ತಿದ್ದು,...

ಕಲಬುರಗಿ | ಗಾಂಜಾ ಸೇವನೆ ಆರೋಪ: ಯುವಕನ ಬಂಧನ

ನಗರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು...

ಕಲಬುರಗಿ | ಕಿಯಾ ಕಾರು ಮಾರಾಟ ಮಳಿಗೆಯಲ್ಲಿ ₹2.73 ಕೋಟಿ ಹಣದ ದುರ್ಬಳಕೆ ಆರೋಪ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಗ್ರಾಹಕರಿಗೆ ಮಾರಾಟ ಮಾಡಿದ ಕಾರುಗಳ ಹಣವನ್ನು ಸಂಸ್ಥೆಯ ಖಾತೆಗೆ ಪಾವತಿಸದೆ ಕೋಟ್ಯಂತರ...

ಯಾದಗಿರಿ | 20 ವರ್ಷಗಳಿಂದ ನೀರು, ವಿದ್ಯುತ್ ಇಲ್ಲದೆ ನರಳಾಟ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜಲಾಪುರಳ್ಳಿ ಗ್ರಾಮದ ಹೊಲಗಳಲ್ಲಿ...