ಗದಗ | ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕ್ರಮಕ್ಕೆ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧಿಕಾರಿಗೆ ಮನವಿ

Date:

ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಡವರ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಹಾಗೂ ವಿವಿಧ ಜಿಲ್ಲೆಗಳು ಮತ್ತು ಹೊರರಾಜ್ಯಗಳಿಗೆ ಸಾಗಾಟ ಮಾಡುತ್ತಿರುವ ಅಕ್ರಮ ಜಾಲದ ವಿರುದ್ಧ ತುರ್ತು ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಗದಗ ಪಟ್ಟಣದ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

- Advertisement -

ಮನವಿ ಸಲ್ಲಿಸಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರು ಶರಣು ಎಸ್. ಗೋಡಿ ಮಾತನಾಡಿ, “ಸರ್ಕಾರ ಬಡಜನರ ಹಸಿವು ನೀಗಿಸಲು ಉಚಿತವಾಗಿ ನೀಡುತ್ತಿರುವ ಪಡಿತರ ಅಕ್ಕಿಯನ್ನು ಕೆಲವು ಅಕ್ರಮ ದಂಧೆಕೋರರು ಗ್ರಾಮ ಹಾಗೂ ನಗರ ಪ್ರದೇಶಗಳ ಮನೆ ಮನೆಗೆ ತೆರಳಿ ಅತೀ ಕಡಿಮೆ ದರಕ್ಕೆ ಖರೀದಿ ಮಾಡಿ, ಬಳಿಕ ದೊಡ್ಡ ಮಟ್ಟದಲ್ಲಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕ | ಡೆಮೊಕ್ರಟಿಕ್ ಪಕ್ಷದ ತೆಕ್ಕೆಯಲ್ಲಿ ಮತ್ತೊಂದು ಸೆನೆಟ್...

ಒಟ್ಟು 435 ಸೀಟುಗಳ ಸಂಖ್ಯಾಬಲವಿರುವ ಕೆಳಮನೆ “ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್”ನಲ್ಲಿ ಇನ್ನೂ 22 ಸೀಟುಗಳ ಮತ ಎಣಿಕೆ ನಡೆಯುತ್ತಿದ್ದು ಇಲ್ಲಿಯವರೆಗೂ 254 ಡೆಮೊಕ್ರಟಿಕ್ ಅಭ್ಯರ್ಥಿಗಳು ಮತ್ತು 169 ರಿಪಬ್ಲಿಕನ್ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಸಮೀಕ್ಷೆಗಳ...

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

“ಅಕ್ರಮವಾಗಿ ಸಂಗ್ರಹಿಸಲಾದ ಪಡಿತರ ಅಕ್ಕಿಯನ್ನು 6, 12, 14 ಹಾಗೂ 16 ಚಕ್ರದ ಲಾರಿಗಳ ಮೂಲಕ ಹಾವೇರಿ, ಹುಬ್ಬಳ್ಳಿ, ಮಂಡ್ಯ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತಿದೆ” ಎಂದು ಗಂಭೀರ ಆರೋಪ ಮಾಡಿದರು.

“ಹಲವಾರು ವರ್ಷಗಳಿಂದ ನಡೆಯುತ್ತಿರುವ ಈ ಅಕ್ರಮ ದಂಧೆಯನ್ನು ತಡೆಗಟ್ಟುವಲ್ಲಿ ಸಂಬಂಧಪಟ್ಟ ಆಹಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ಕೆಲ ಅಧಿಕಾರಿಗಳು ದಂಧೆಕೋರರ ಜೊತೆಗೆ ಶಾಮೀಲಾಗಿದ್ದಾರೆ ಎಂಬ ಸಾರ್ವಜನಿಕ ಆರೋಪಗಳು ಕೇಳಿಬರುತ್ತಿದ್ದು, ಇದರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.

ಮನವಿ ಮೂಲಕ “ಅಕ್ರಮ ಪಡಿತರ ಅಕ್ಕಿ ಸಂಗ್ರಹ ಹಾಗೂ ಸಾಗಾಟದ ವಿರುದ್ಧ ವಿಶೇಷ ದಾಳಿ ನಡೆಸಬೇಕು. ದಂಧೆಕೋರರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸಂಬಂಧಪಟ್ಟ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಸಬೇಕು. ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್ ಹಾಗೂ ವಿಶೇಷ ನಿಗಾ ವ್ಯವಸ್ಥೆ ಜಾರಿಗೊಳಿಸಬೇಕು. ಬಡವರ ಪಾಲಿನ ಪಡಿತರ ಅಕ್ಕಿ ಕಾಳಸಂತೆಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಲಾಯಿತು.

“ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಗದಗ ತಾಲೂಕು ಹಾಗೂ ಗದಗ-ಬೆಟಗೇರಿ ಅವಳಿ ನಗರದಲ್ಲಿ ಉಗ್ರ ಹೋರಾಟ, ಪ್ರತಿಭಟನೆ ಹಾಗೂ ಸಾರ್ವಜನಿಕ ಜಾಗೃತಿ ಚಳವಳಿ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಮನವಿ ಸಮಯದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ವಡವಿ, ಜಿಲ್ಲಾ ರೈತ ಘಟಕದ ಅಧ್ಯಕ್ಷ ಮುತ್ತಣ್ಣ ಮುಂಡವಾಡ, ಜಿಲ್ಲಾ ಕಾರ್ಯದರ್ಶಿ ಅಶ್ಫಾಕ್ ಬಾಗೋಡಿ ಹಾಗೂ ಲತೀಫ್ ಶಿರಹಟ್ಟಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪವನ್ ಕುಮಾರ್ ಕರಿನಾಯಕರ, ಶಿರಹಟ್ಟಿ ತಾಲೂಕು ಅಧ್ಯಕ್ಷ ವಿರೇಶ ಪ್ರಸಾರದ, ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ನಾಗೇಶ ಅಮರಾಪುರ, ನರಗುಂದ ತಾಲೂಕು ಅಧ್ಯಕ್ಷ ವಿನಾಯಕ ಚತ್ರಬಾವಿ, ಗದಗ-ಬೆಟಗೇರಿ ಅಧ್ಯಕ್ಷ ಇಸ್ಮಾಯಿಲ್ ಉಮಚಗಿ, ಮಾತೇಂಶ ಮಣಕವಾಡ, ಪ್ರವೀಣ ಆಚಾರಿ, ದೇವೇಂದ್ರ ಶಿಂದೆ, ಕೈಸರ್ ಮೊಹಮ್ಮದಅಲಿ, ಸೋಹೈಲ್ ನದಾಪ್, ಮಹಾಂತೇಶ ಉಮಚಗಿ, ಹಜರತ್ ಮನಿಯಾರ, ಇಮ್ರಾನ್ ಭಾವಿಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಮೌಲಾನಾ ಅಬುಲ್ ಕಲಾಂ ಅಜಾದ್ ಜಯಂತಿ ಆಚರಣೆ

ದೇಶದ ಮೊದಲ ಶಿಕ್ಷಣ ಸಚಿವ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್...

ಬಾಗಲಕೋಟೆ |ಭೋವಿ ಸಮುದಾಯದ ಆರ್ಥಿಕ ಸಬಲೀಕರಣಕ್ಕೆ ವಿವಿಧ ಯೋಜನೆ: ಅರ್ಜಿ ಆಹ್ವಾನ

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ಭೋವಿ ಸಮುದಾಯದ ಆರ್ಥಿಕ...

ಶಿರಸಿ | ಬನವಾಸಿಯಲ್ಲಿ ಸರಣಿ ಮನೆ ಕಳ್ಳತನ: 20 ಗ್ರಾಂ ಚಿನ್ನಾಭರಣ, ₹56 ಸಾವಿರ ನಗದು ಕಳವು

ಶಿರಸಿ: ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಮನೆ ಹಾಗೂ...

ರಾಯಚೂರು | ಪಡಿತರ ಚೀಟಿ ಇ-ಕೆವೈಸಿ ನ.30 ಕೊನೆ ದಿನ; ಜಿಲ್ಲೆಯಲ್ಲಿ 1.63 ಲಕ್ಷ ಫಲಾನುಭವಿಗಳ ಬಾಕಿ

ಜಿಲ್ಲೆಯ ಎಲ್ಲ ಪಡಿತರ ಚೀಟಿಗಳಲ್ಲಿನ ಸದಸ್ಯರು ಪ್ರತಿ ಐದು ವರ್ಷಗಳಿಗೊಮ್ಮೆ ಇ-ಕೆವೈಸಿ...