ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಡಾ. ಹೆಚ್.ಎನ್ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ಭಾನುವಾರ ಮಧ್ಯಾಹ್ನ 3 ಗಂಟೆಗೆ ಡಾ. ಹೆಚ್.ಎನ್ ಕಲಾಭವನದಲ್ಲಿ ಜಿಲ್ಲಾ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ನಾಟಕೋತ್ಸವ ಪ್ರದರ್ಶನದಲ್ಲಿ ಪ್ರಮುಖವಾಗಿ ಎರಡು ನಾಟಕ ಪ್ರದರ್ಶನ ವಾಗಲಿದ್ದು ಅದರಲ್ಲಿ ಒಂದು ಮಕ್ಕಳ ನಾಟಕ, ಮತ್ತೊಂದು ದೊಡ್ಡವರ ನಾಟಕ ಪ್ರದರ್ಶನ ವಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ಕಲ್ಯಾಣದ ಕೂಗು ಎಂದೇಳಿ ಮಕ್ಕಳ ನಾಟಕ ಇರುತ್ತೆ ತದನಂತರ ವೇದಿಕೆ ಕಾರ್ಯಕ್ರಮ ಹಾಗೂ ಸಂಜೆ 6 ಗಂಟೆಗೆ ಸಂಸಾರದಲ್ಲಿ ಸನಿದಪ ಸಾರ್ವಜನಿಕರ ನಾಟಕ ಪ್ರದರ್ಶನ ವಾಗುತ್ತದೆ. ನಾಟಕದ ಮೂಲಕ ಮಕ್ಕಳಲ್ಲಿ ಇತಿಹಾಸದ ಪ್ರಜ್ಞೆ ಮೂಡಿಸುವುದು. ಸಾರ್ವಜನಿಕರಿಗೆ ನಾಟಕದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಲಿದೆ.
ಸಂಪೂರ್ಣವಾಗಿ ಮೊಬೈಲ್ ಹೆಚ್ಚು ಬಳಕೆಯಿಂದ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಯೂಟ್ಯೂಬ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಗಳಲ್ಲಿ ಮುಳುಗಿ ಹೋಗಿ ನಮ್ಮ ಸಂಸ್ಕೃತಿಯನ್ನು ಮರೆತಿರುವ ಈ ಕಾಲಘಟ್ಟದಲ್ಲಿ ನೇರವಾಗಿ ಸೃಜನಶೀಲತೆಗೆ ಹೆಚ್ಚು ಒತ್ತು ಕೊಡುವ ನಾಟಕ ಪ್ರದರ್ಶನ ವಾಗಲಿದ್ದು ಎಲ್ಲಾ ಸಾರ್ವಜನಿಕರು ಬಂದು ವೀಕ್ಷಣೆ ಮಾಡಬೇಕು.
ಮೊದಲು ಎಲ್ಲಾ ಹಳ್ಳಿಗಳಲ್ಲಿ ವರ್ಷಕ್ಕೆ ಒಂದು,ಎರಡು ಬಾರಿ ನಾಟಕ ಹಾಗೂ ಜನಪದ ಕಲೆಗಳ ಪ್ರದರ್ಶನ ಆಗುತ್ತಿತ್ತು, ಇಡೀ ಹಳ್ಳಿಯ ಜನರು ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ರು, ಆದ್ರೆ ಈಗ ಮೊಬೈಲ್ ಫೋನ್ ನೇ ಜನರ ಪ್ರಪಂಚದ ರೀತಿ ಆಗಿದೆ. ಮತ್ತೆ ನಾಟಕ, ಸಂಸ್ಕೃತಿಯನ್ನು ಪ್ರದರ್ಶನ ಮಾಡಲಿದ್ದು ಎಲ್ಲಾ ಸಾರ್ವಜನಿಕರು ಬಂದು ನಾಟಕೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕು ಅದರ ಜೊತೆಯಲ್ಲಿ ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಈ ದಿನ.ಕಾಮ್ ಮೂಲಕ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಕೆ.ವಿ ನಾಯಕ ತಿಳಿಸಿದರು.
ಇದನ್ನು ಓದಿದ್ದೀರಾ..? ಚಿಕ್ಕಬಳ್ಳಾಪುರ | ರೈತರ ಜಮೀನು ರೈತರಿಗೆ ಬಿಡಿ: ಅನಿರ್ದಿಷ್ಟ ಹೋರಾಟ 66ನೇ ದಿನಕ್ಕೆ
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ.ಹೆಚ್.ಎನ್ ಪ್ರಾಧಿಕಾರದ ಅಧ್ಯಕ್ಷರಾದ ಶಿವಶಂಕರ್ ರೆಡ್ಡಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ.ವಿ ನಾಗರಾಜ್ ಮೂರ್ತಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಪರ ಆಯುಕ್ತರಾದ ನಾಗರಾಜಪ್ಪ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಕೆ.ವಿ ನಾಯಕ್, ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಬಿ.ನೀಲಮ್ಮ ಮುಂತಾದವರು ಭಾಗವಹಿಸಲಿದ್ದಾರೆ.




