ಗುಬ್ಬಿ | ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ. ಬಿ ನಂಜುಂಡಸ್ವಾಮಿ ಆಯ್ಕೆ

Date:

ಪುಸ್ತಕಗಳ ಓದುವವರ ಸಂಖ್ಯೆ ವಿರಳವಾದ ಸಂದರ್ಭದಲ್ಲಿ ಮನೆಯನ್ನೇ ಗ್ರಂಥಾಲಯ ಮಾಡಿ ಪ್ರತಿ ಪುಸ್ತಕದ ಮುನ್ನುಡಿಯಿಂದ ಬೆನ್ನುಡಿಯವರೆಗೆ ಓದುವ ವ್ಯಕ್ತಿ ಡಾ.ಬಿ.ನಂಜುಂಡಸ್ವಾಮಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದೇ ಅರ್ಥಪೂರ್ಣ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.

- Advertisement -

ನಾಡಿನ ಶ್ರೇಷ್ಠ ವಿಮರ್ಶಕರ ಪಟ್ಟಿಯಲ್ಲಿ ನಂಜುಂಡಸ್ವಾಮಿ ಅವರು ಕೂಡ ಒಬ್ಬರು ಎನ್ನುವುದು ನಮ್ಮ ಗುಬ್ಬಿ ತಾಲ್ಲೂಕಿನ ಹೆಮ್ಮೆ. ಖ್ಯಾತ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ನಿಕಟ ಸಂಪರ್ಕದಲ್ಲಿದ್ದು ನಾಡಿನ ಐತಿಹಾಸಿಕ ಹಿನ್ನಲೆಯ ಮಠಗಳ ಅಧ್ಯಯನ ನಡೆಸಿ ಅದನ್ನು ಲಿಖಿತ ರೂಪದಲ್ಲಿ ದಾಖಲೆ ಸೃಷ್ಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 50 ಕ್ಕೂ ಅಧಿಕ ಕೃತಿಗಳನ್ನು ರಚಿಸಿ ಸಂಪಾದಿಸಿ ಅಧಿಕೃತ ಮಾಹಿತಿ ದಾಖಲೆ ಸಹಿತ ಸಾಹಿತ್ಯ ಸಂಗ್ರಹದಲ್ಲಿ ಏಕೈಕ ಪಂಡಿತ ಎಂದರೂ ಅತಿಶಯೋಕ್ತಿಯಲ್ಲ. ಗುಬ್ಬಿಯ ಶ್ರೀ ಗೋಸಲ ಚನ್ನಬಸವೇಶ್ವರರ ಚರಿತ್ರೆಗೆ ದಾಖಲೆಯ ಪುಸ್ತಕ ರಚಿಸಿ ಸ್ವಾಮಿಯ ಭಕ್ತರಿಗೆ ಅವರ ಪವಾಡ ಬಗ್ಗೆ ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಜಿ.ಹೊಸಹಳ್ಳಿ ಸಂಸ್ಥಾನದ ಮೂಲಕ ಅಧಿಕೃತ ದಾಖಲೆಯನ್ನು ಕಲೆ ಹಾಕಿದ ನಂಜುಂಡಸ್ವಾಮಿ ವೀರಶೈವ ಧರ್ಮ ಸಂಸ್ಕೃತಿ ಸಾಹಿತ್ಯ ಕುರಿತ ಆಳವಾದ ಅಧ್ಯಯನ ನಡೆಸಿದವರು 300 ಕ್ಕೂ ಅಧಿಕ ಲೇಖನಗಳು ಪ್ರಕಟಗೊಂಡಿವೆ. ಶಿವಗಂಗಾ ಕ್ಷೇತ್ರ, ಸಿದ್ಧಾಂತ ಶಿಖಾಮಣಿ, ಹೊನ್ನಸಿರಿ, ಕಾಯಕ ಯೋಗಿ, ಹೊನ್ನುಡಿಕೆ ದರ್ಶನ, ಕಲ್ಪಸಿರಿ ಹೀಗೆ ಅನೇಕ ಕೃತಿಗಳನ್ನು ನಾಡಿಗೆ ನೀಡಿ ಎಲೆ ಮರೆಯ ಕಾಯಿಯಂತೆ ಆಯುರ್ವೇದ ವೈದ್ಯ ವೃತ್ತಿಯನ್ನು ನಡೆಸಿಕೊಂಡು ಸಾಹಿತ್ಯ ಕೃಷಿ ನಡೆಸಿದವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಸಮ್ಮೇಳನಾಧ್ಯಕ್ಷರಾಗಿ ಘೋಷಣೆ ಮಾಡಿದ್ದೇ ಅರ್ಥಪೂರ್ಣ. 

ತಾಳೆಗರಿ, ತಾಮ್ರ ಶಾಸನ ಓದುವ ಏಕೈಕ ಪಂಡಿತರು ಎಂಬ ಹೆಗ್ಗಳಿಕೆ ಗಳಿಸಿ ಮನೆಯನ್ನೇ ಗ್ರಂಥಾಲಯ ಮಾಡಿಕೊಂಡು ಎಲ್ಲಾ ಪುಸ್ತಕವನ್ನು ಓದುವ ಜೊತೆಗೆ ಕನ್ನಡ ವ್ಯಾಕರಣ ತಿದ್ದುವ ಹಾಗೂ ತಪ್ಪಿನ ಅಕ್ಷರಗಳ ಬಗ್ಗೆ ಸಂಬಂಧಿಸಿದ ಲೇಖಕರಿಗೆ ಪತ್ರ ಮೂಲಕ ತಿಳಿಸುವ ನೇರವಾದಿಯಾಗಿ ಕಂಡಿದ್ದಾರೆ. 64 ನೇ ವಯಸ್ಸಿನಲ್ಲಿ ಅವರ ಸಾಹಿತ್ಯಾಸಕ್ತಿ ಹದಿಹರೆಯದ ವಯಸ್ಸು ಮನಸ್ಸು ತೋರುತ್ತದೆ. ಅವರ ಸಾಹಿತ್ಯ ಕೃಷಿಗೆ ಉತ್ತೇಜನ ನೀಡುವ ಸಮ್ಮೇಳನ ಮತ್ತಷ್ಟು ಚಿಂತನೆ, ಅರಿವು, ಸಾಹಿತ್ಯಾಸಕ್ತಿ ಮೂಡಿ ಬರಲಿ ಎಂಬುದು ತಾಲ್ಲೂಕಿನ ಜನತೆಯ ಆಶಯವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಕೋಲಾರ | ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕರ ಆಪ್ತ ಸಹಾಯಕರಿಗೆ ಮನವಿ

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವುದು, ತಡೆಹಿಡಿದಿರುವ ಕನಿಷ್ಠ ವೇತನ ಜಾರಿಗೊಳಿಸುವುದು, ಗುತ್ತಿಗೆ...