ಹಾಸನ ಜಿಲ್ಲೆ ಆಲೂರು ವ್ಯಾಪ್ತಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, 5340 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಆಲೂರು ಪೊಲೀಸ್ ಠಾಣೆಯ ಪಿ.ಐ. ಪ್ರವೀಣ್ ಕುಮಾರ್ ಠಾಣೆಯಲ್ಲಿದ್ದಾಗ ನಿಡನೂರು ಗ್ರಾಮದ ಅಕ್ಕಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ 7-8 ಜನರು ಹಣವನ್ನು ಪಣಕ್ಕೆ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ಜಿ.ಎಸ್.ಸಿ ಅನ್ನು ದಾಖಲು ಮಾಡಿದ್ದು, ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಅಡ್ಡೆಮೇಲೆ ದಾಳಿ ಮಾಡಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | 215 ಗ್ರಾಂ. ಆಭರಣ ಕಳ್ಳತನ; ಪ್ರಕರಣ ದಾಖಲು
ಈ ವೇಳೆ ಶಿವಶಂಕರ್, ಅಭೀಷೇಕ್, ಕಾರ್ತಿಕ್, ಅರುಣ್ ಬಂಧಿತ ಆರೋಪಿಗಳು. ಜೂಜಾಟಕ್ಕೆ ಬಳಸಿರುವ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.




