ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆಯುತ್ತಿರುವ ‘ಅನ್ನದಾಸೋಹ’ ಯೋಜನೆಗೆ ಜೂನ್ 1 ರಂದು 100ನೇ ದಿನ ತಲುಪಲಿರುವ ಹಿನ್ನೆಲೆ ಅನ್ನದಾಸೋಹದ ನೂರುದಿನದ ಆಚರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಾಕ್ಷರಾದ ನಂಜುಂಡೆಗೌಡ ತಿಳಿಸಿದ್ದಾರೆ.
ಅನ್ನದಾಸೋಹದ 100ನೇ ದಿನದ ಕಾರ್ಯಕ್ರಮದ ದಿನವೇ ಇತ್ತೀಚೆಗೆ ಪ್ರಕಟವಾದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆ ಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆ ಮಾಡಿರುವ ಪತ್ರಕರ್ತರ ಸಾಧಕ ಮಕ್ಕಳಿಗೆ ಇದೇ ವೇದಿಕೆಯಲ್ಲಿ ಪ್ರತಿಭಾ ಪುರಸ್ಕಾರ’ ನೀಡಿ ಸನ್ಮಾನಿಸಿ ಗೌರವಿಸಲಾಗುವುದು. ಜೊತೆಗೆ ಪತ್ರಕರ್ತರ ಹಿತರಕ್ಷಣೆ ಮತ್ತು ಆರ್ಥಿಕ ಭದ್ರತೆಯ ದೃಷ್ಟಿಯಿಂದ ಈ ಸಮಾರಂಭದಲ್ಲಿ ಕೆನರಾ ಬ್ಯಾಂಕ್ ಸಹಯೋಗದೊಂದಿಗೆ “ಕೆನರಾ ಕಿಕ್ ಸ್ಟಾರ್ಟ್” ಯೋಜ ನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಇದರ ಅಡಿಯಲ್ಲಿ ಪತ್ರಕರ್ತರು ಪಾಲಿಸಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಇದನ್ನೂ ಓದಿದ್ದೀರಾ?ಹಾಸನ | ರಸ್ತೆ ಅಪಘಾತ: ವ್ಯಕ್ತಿ ಸಾವು
ಕಾರ್ಯ ಕ್ರಮದ ದಿವ್ಯ ಸಾನಿಧ್ಯವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಹಾಸನ ಶಾಖಾ ಮಠದ ಶ್ರೀಗಳಾದ ಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿ ಅವರು ವಹಿಸಲಿದ್ದಾರೆ ಎಂದರಲ್ಲದೆ, ಈ ವಿಶಿಷ್ಟ ಕಾರ್ಯ ಕ್ರಮಕ್ಕೆ ಜಿಲ್ಲೆಯ ಎಲ್ಲಾ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇ ಕೆಂದು ವಿನಂತಿಸಿದ್ದಾರೆ. ಈ ವೇಳೆ ಪತ್ರಕರ್ತರಾದ ಹರೀಶ್, ಉದಯ್ ಕುಮಾರ್ ಉಪಸ್ಥಿತರಿದ್ದರು.




