“ವಿವಿ ಘಟಿಕೋತ್ಸವ ಕ್ಯಾಂಪಸ್ಸಿನಲ್ಲಿಯೇ ನಡೆತಬೇಕೆಂಬುದು ಇಂದಿಗೂ ಅಚಲ ನಿಲುವು. ವಿಶ್ವವಿದ್ಯಾಲಯದ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಅಗತ್ಯವಿರುವ ಅನುದಾನ, ನೇಮಕಾತಿ, ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು, ಸೂಕ್ತ ಆಡಳಿತಾತ್ಮಕ ನಿರ್ದೇಶನಗಳು ಸೇರಿದಂತೆ ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು” ಎಂದು ಹೋರಾಟ ಸಮಿತಿ ಮನವಿ ಮುಖಂಡರು ಮನವಿ ಮಾಡಿದರು.
ಹಾವೇರಿ ವಿಶ್ವವಿದ್ಯಾಲಯ ಉಳಿವಿಗಾಗಿ, ಅಭಿವೃದ್ಧಿಗಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಮಾನ್ಯ ಎಸ್.ಪಿ ಯಶೋಧಾ ಒಂಟಿಗೋಡಿ ಹಾಗೂ ಜಿಲ್ಲಾಧಿಕಾರಿ ವಿಜಯಮಾಹಾಂತೇಶ ದಾನಮ್ಮನವರ ಅವರಿಗೆ ನಿನ್ನೆ ವಿವಿ ಉಳಿಸಿ ಹೋರಾಟ ಸಮಿತಿ ಮನವಿ ಪತ್ರ ಸಲ್ಲಿಸಿತು.
“ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸದಿದ್ದರೆ ಘಟಿಕೋತ್ಸವ ಕಾರ್ಯಕ್ರಮ ನಡೆಯುವಲ್ಲಿ ವಿ.ವಿ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿರುವುದು ಖಂಡನೀಯವಾದುದು. ವಿಶ್ವ ವಿದ್ಯಾಲಯದ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲೇಬೇಕು” ಎಂದು ಮನವಿ ಮಾಡಿದರು.
“ಮಾಧ್ಯಮದವರಿಗೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವರದಿ ಮಾಡಿಕೊಳ್ಳಲು ಅವಕಾಶ ನಿರಾಕರಿಸಿರುವುದು ಕೂಡ ಸರಿಯಾದುದಲ್ಲ. ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಹಾಗೂ ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಮಾಧ್ಯಮದವರನ್ನು ಕೇವಲ ಉತ್ಸವ ಮೂರ್ತಿಗಳಂತೆ ನಡೆಸಿಕೊಳ್ಳುವುದು ಸರಿಯಾದ ವಿಧಾನವಲ್ಲ. ಇದನ್ನು ಸಹಿಸಲು ಅಸಾಧ್ಯವಾದುದು. ಆದ್ದರಿಂದ ಮಾಧ್ಯಮದವರನ್ನು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರೇ ವರದಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಪಾಲ್ಗೊಳಿಸಬೇಕು” ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿ.ವಿ ಉಳಿಸಿ ಹೋರಾಟ ಸಮಿತಿಯ ಮುಖಂಡರಾದ ಬಸವರಾಜ ಪೂಜಾರ, ಪರಿಮಳ ಜೈನ್, ಎಂ ಆಂಜನೇಯ, ಬಸವರಾಜ್ ಎಸ್, ಶಿವಬಸಪ್ಪ ಹಾ ಗೋವಿ, ಉಡಚಪ್ಪ ಮಾಳಗಿ, ಮಂಜುಳಾ ಎಸ್ ಎಕ್ಕಿ, ಡಾ. ತಿಪ್ಪೇಸ್ವಾಮಿ ಹೊಸಮನಿ, ಮಕಬುಲ್ ಎಂ.ಕೆ, ಅರುಣ ನಾಗಾವತ್, ಖಲಂದರ್ ಅಲ್ಲಿಗೌಡ್ರ, ಚೈತ್ರಾ ಕೊರವರ, ಎಸ್ ಎ ಪಾಣಿಗಟ್ಟಿ, ಶಶಿಕಲಾ ಅಕ್ಕಿ, ಪುಟ್ಟಪ್ಪ ಹರವಿ, ಎಸ್ ಎಸ್ ಹಿರೇಮಠ, ರಾಜು ಉಪ್ಪಾರ, ಸುಮಾ ಪುರದ, ಶಾರದಾ ಹಿರೇಮಠ, ಗೌರಮ್ಮ ಕುಲಕರ್ಣಿ, ಚಂದ್ರಕಲಾ, ವಿಶ್ವ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.




