ಹಾವೇರಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಮೈಲಾರಪ್ಪ ಮಹದೇವ ವೃತ್ತದ ವರೆಗೂ ಪ್ರಜಾಪ್ರಭುತ್ವ ಉಳಿಸಿ, ಮತ ಬಚಾವೋ/ ದೇಶ ಬಚಾವೋ ಕೂಗುತ್ತಾ ಜಾಥಾ ನಡೆಸಿ ಪ್ರತಿಭಟನಾ ಸಮಾವೇಶ ನಡೆಸಿದರು.
ಈ ಪ್ರತಿಭಟನಾ ಸಮಾವೇಶದಲ್ಲಿ ಸಕ್ಕರೆ ಹಾಗೂ ಜವಳಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, “ಎಸ್ಐ ಅರ್ ಬಗ್ಗೆ ರಾಷ್ರ್ಟ ಮಟ್ಟದಲ್ಲಿ ನಮ್ಮನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಅರ್ಹ ಮತದಾರರ ಪಟ್ಟಿಯಿಂದ ಹೋಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಕೆಲಸ. ನಿಮ್ಮ ಓಟುಗಳು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಕಾರ್ಯಕರ್ತರ ಗಮನಕ್ಕೆ ತಂದರೆ ಸೇರಿಸುವ ಕೆಲಸ ಮಾಡಲಾಗುವುದು” ಎಂದರು.
ಕಾಂಗ್ರಸ್ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, “ಎಸ್ಐಆರ್ ಪ್ರಕ್ರಿಯೆ ಆರಂಭವಾಗಿ ಮೂರು ತಿಂಗಳು ಆಗಿದೆ. ದೇಶದಲ್ಲಿ ಒಟ್ಟು ಹದಿಮೂರು ಕೋಟಿ ಮೂವತ್ತು ಲಕ್ಷ ಮತದಾರರನ್ನು ತೆಗೆಯಲಾಗಿದೆ. ರಾಜ್ಯದಲ್ಲಿ ಒಂದು ಕೋಟಿ ಎಂಟು ಲಕ್ಷ ಮತದಾರರು ಅನರ್ಹ ಪಟ್ಟಿಗೆ ಸೇರಿಸಲಾಗಿದೆ. ಜಿಲ್ಲೆಯಲ್ಲಿ ಒಂದು ಲಕ್ಷ ಹದಿನೈದು ಸಾವಿರಕ್ಕೂ ಹೆಚ್ಚು ಮತದಾರರನ್ನು ಅರ್ಹ ಮತದಾರರ ಪಟ್ಟಿಯಿಂದ ತಗೆಯಲಾಗಿದೆ” ಎಂದರು.
“ಎಸ್ಐಆರ್ ಅನ್ನು ವಿರೋಧ ಮಾಡುತ್ತಿಲ್ಲ. ಅರ್ಹ ಮತದಾರರನ್ನು ಅನರ್ಹ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಮುಖ್ಯ ಚುನಾವಣೆ ಆಯೋಗದ ಅಧಿಕಾರಿ ಜ್ಞಾನೇಶಕುಮಾರ ಹೇಳುವರು” 2002ರಲ್ಲಿ ಇರದಿದ್ದರೂ ಪರವಾಗಿಲ್ಲ, 2025ರ ಪ್ರಕಾರ ಮಾಡುತ್ತೇವೆ. ಹಾಗೆ ತುಂಬಿ ಕಳುಹಿಸಿ ಎಂದು ಹೇಳಿದ್ದೀರಿ ಈಗ ಅರ್ಹ ಮತದಾರರನ್ನು ಹೊರಗೆ ಹಾಕುತ್ತಿದ್ದೀರಿ. ಇದು ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಕಿಡಿಕಾರಿದರು.
“ಕೂಡಲೇ ರಾಷ್ಟ್ರಪತಿಗಳು ಚುನಾವಣೆ ಆಯೋಗದ ಅಧಿಕಾರಿ ಜ್ಞಾನೇಶಕುಮಾರ ಅವರನ್ನು ಹುದ್ದೆಯಿಂದ ಪದಚ್ಯತಿ ಮಾಡಬೇಕು. ಅಲ್ಪಸಂಖ್ಯಾತ, ದಲಿತರು, ಅಲೆಮಾರಿ ಸಮುದಾಯದ ಓಟುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆದಿದೆ. ಇವರನ್ನು ಮತದಾರರ ಪಟ್ಟಿಯಲ್ಲಿ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ” ಎಂದು ಹೇಳಿದರು.
ಶಿಗ್ಗಾವಿ ಸವಣೂರು ಮಾಜಿ ಶಾಸಕರು ಅಜ್ಜಂಪುರ್ ಖಾದ್ರಿ ಮಾತನಾಡಿ, “ನಮ್ಮ ಹಕ್ಕನ್ನು ಕೇಳಲು, ಪ್ರತಿಭಟನೆ ಮಾಡಿದರೇ ಬಿಜೆಪಿ ಸರಕಾರ ಪ್ರಕರಣ ದಾಖಲಿಸುತ್ತಿದೆ. ದೇಶ ಗಂಡಾಂತರದಲ್ಲಿದೆ. ಬೂತ್ ಮಟ್ಟದಲ್ಲಿ ಬಿಜೆಪಿ ಸೋಲಿಸುವರೆಗೂ ನಿದ್ದೆ ಮಾಡಬಾರುದು. ಈಗಾಗಲೇ ಬಿಜೆಪಿ ಎಸ್ಐಆರ್ ಮೂಲಕ ಮತಗಳನ್ನು ಲೂಟಿ ಮಾಡುತ್ತಿದ್ದಾರೆ. ಎಸ್ಐಆರ್ ಮೂಲಕ ಪ್ರಜಾಪ್ರಭುತ್ವ ಕೊಲೆ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಚುನಾವಣೆ ಆಯೊಇಗದ ಮುಖ್ಯಾಧಿಕಾರಿ ಜ್ಞಾನೇಶಕುಮಾರ ಬಿಜೆಪಿ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೂಡಲೇ ಅವರನ್ನು ವಜಾಗೊಳಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನಾ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರು ಎಮ್.ಎಮ್ ಹಿರೇಮಠ, ಎಸ್.ಎಫ್.ಎನ್ ಗಾಜಿಗೌಡ್ರ, ಕೊಟ್ರೇಶನ್ನ, ನಗರಾಭಿವೃದ್ಧಿ ಅಧ್ಯಕ್ಷರು ಪ್ರಭುಗೌಡ್ರ ಬಿಷ್ಟಣಗೌಡ್ರ, ಬಸಣ್ಣ ಹೆಡೆಗೊಂಡ, ವಾಸಂತಿ ಬಾಗೂರು, ಸಂಜೀವ್ ಡಾಂಗೆ, ರಮೇಶ ಹರಿಜನ, ಆನಂದ ಅಕ್ಕೂರು, ರಮೇಶ ಮಡಿವಾಳ, ಶಾಂತಕ್ಕ ಶಿರೂರ, ಮಂಜುನಾಥಗೌಡ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




