“ಹದಿನೈದು ದಿನಕೊಮ್ಮೆ ಕಾರ್ಖಾನೆಗೆ ಹೋಗಿ ಸರಕಾರಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಪ್ರತಿ ಸಾರಿಯು 10.5ಕ್ಕಿಂತ ಹೆಚ್ಚು ರಿಕವರಿ ಬಂದಿದೆ. ಆದರೆ ಕಾರ್ಖಾನೆಯವರು ಸಕ್ಕರೆ ಆಯುಕ್ತರಿಗೆ ತಪ್ಪು ಮಾಹಿತಿ ನೀಡಿ ರೈತರ ಹಣ ಸುಲಿಗೆ ಮಾಡಲು ಹೊರಟಿದ್ದಾರೆ” ಕಬ್ಬು ಬೆಳೆಗಾರರು ಆರೋಪಿಸಿದರು.
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಜಿಲ್ಲಾಧಿಕಾರಿ ವಿಜಯ ಮಾಂತೇಶ್ ದಾನಮ್ಮನವರ ಅಧ್ಯಕ್ಷತೆಯಲ್ಲಿ ಗುರುವಾರ ಕಬ್ಬು ಬೆಳೆಗಾರರು ಸಮ್ಮುಖದಲ್ಲಿ ಕಾರ್ಖಾನೆಯವರ ಸಭೆ ನಡೆಯಿತು.
ನಮ್ಮ ಜಿಲ್ಲೆಯ ಕಬ್ಬಿಗೆ ರಿಕವರಿ 10.25ಕ್ಕಿಂತ ಹೆಚ್ಚು ಬರುತ್ತದೆ. 10.25 ರಿಕವರಿಗೆ ದರ ಕೊಡುವವರು ಕಾರ್ಖಾನೆ ಚಾಲು ಮಾಡಿಲಿ. ಇಲ್ಲದಿದ್ದರೆ ಕಾರ್ಖಾನೆಯನ್ನು ಬಂದ್ ಮಾಡಿಕೊಂಡು ಮನೆಯಲ್ಲಿ ಕುಳಿತುಕೊಳ್ಳಲಿ. ಇಲ್ಲವಾದರೆ ನಾವು ರಿಕವರಿ ಚೆಕ್ ಮಾಡಿದವರು ವಿರುದ್ಧ ಹೋರಾಟ ಮಾಡುತ್ತೇವೆ” ಎಂದು ಕಬ್ಬು ಬೆಳೆಗಾರರು ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಯೆ ನೀಡಿದ ಜಿಲ್ಲಾಧಿಕಾರಿಗಳು “ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು, ಸರ್ಕಾರದ ಗಮನಕ್ಕೆ ತಂದು, ಸರಿಪಡಿಸುವುದಾಗಿ ಭರವಸೆ ನೀಡಿದರು.
ಕಬ್ಬು ಬೆಳೆಗಾರರು ಕಬ್ಬು ಸಾಗಿಸಿದ 14 ದಿನದ ಒಳಗಾಗಿ ರೈತರ ಖಾತೆಗೆ ಹಣ ಪಾವತಿಸಬೇಕೆಂಬ ಆದೇಶವಿದೆ. ಆದರೆ ಇಲ್ಲಿಯವರೆಗೂ ಕಾರ್ಖಾನೆಯವರು ಹಣ ಪಾವತಿ ಮಾಡಿಲ್ಲ. ಪ್ರಸಕ್ತ ವರ್ಷ 2025 /26 ನೇ ಸಾಲಿನಲ್ಲಿ ಸುಮಾರು ₹70ಕೋಟಿಯಷ್ಟು ಬಿಲ್ ಬಾಕಿ ಇದೆ. ಕೂಡಲೇ ಒಂದು ವಾರದ ಒಳಗಾಗಿ ಎಲ್ಲ ರೈತರ ಬಿಲ್ಲುಗಳನ್ನು ಪಾವತಿಸಬೇಕು” ಎಂದು ಕಬ್ಬು ಬೆಳೆಗಾರರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು, “ನಿಯಮದ ಪ್ರಕಾರ ಬಿಲ್ ಪಾವತಿ ಮಾಡಬೇಕು. ಈಗಾಗಲೇ ತಡವಾಗಿದೆ. ಒಂದು ವಾರದೊಳಗೆ ಬಿಲ್ ಪಾವತಿ ಮಾಡಬೇಕು” ಎಂದು ಕಾರ್ಖಾನಾಧಿಕಾರಿಗಳಿಗೆ ತಿಳಿಸಿದಾಗ “ಒಂದು ವಾರದೊಳಗೆ ಬಿಲ್ ಪಾವತಿ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಮೂರು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು, ಕಬ್ಬು ಬೆಳೆಗಾರರ ಸಂಘಟನೆ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಹಾಗೂ ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.





