ಹಾವೇರಿ | ವಿಶ್ವ ಕಾರ್ಮಿಕ ದಿನಾಚರಣೆ: ಏಳು ನೌಕರರಿಗೆ ಅತ್ಯತ್ತಮ ಕಾರ್ಮಿಕ ಪ್ರಶಸ್ತಿ ಪ್ರದಾನ

Date:

“ಕ.ವಿ.ಪ್ರ.ನಿ. ಸಂಘ ಸ್ಥಳೀಯ ಸಮಿತಿ ಆಶ್ರಯದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಏಳು ನೌಕರರಿಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ನೀಡುವ ಮೂಲಕ ಹಾವೇರಿ ಪಟ್ಟಣದ ಹೆಸ್ಕಾಂ ಆವರಣದಲ್ಲಿ ಇರುವ ಸಮುದಾಯ ಭವನದಲ್ಲಿ ಆಚರಿಸಲಾಯಿತು.

- Advertisement -

ಬೆಳಿಗ್ಗೆ ಕಾರ್ಮಿಕ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಕ.ವಿ.ಪ್ರ.ನಿ ನೌಕರರ ಸಂಘದ ಮಾಜಿ ಕಾರ್ಯಾಧ್ಯಕ್ಷರಾದ ವಿಜಯಕುಮಾರ ಮುದಕಣ್ಣನವರ ಕಾರ್ಮಿಕ ದಿನಾಚರಣೆಗೆ ಚಾಲನೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ನಂತರ ಪ್ರಾಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯಕುಮಾರ ಮಾತನಾಡಿ, “ಸುರಕ್ಷಿತತೆಗೆ ನಮ್ಮ ನೌಕರರು ಹೆಚ್ಚಿನ ಆದ್ಯತೆ ನೀಡಬೇಕು. ಕಾರ್ಮಿಕ ಸಂಘಟನೆಗಳ ಹೊರತಾಗಿ ಆಡಳಿತ ಮಂಡಳಿಯವರೇ ಅತ್ಯುತ್ತಮ ಸೇವೆ ಸಲ್ಲಿಸಿದ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಮಾಡಬೇಕು” ಎಂದರು.

ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಪ್ರಧಾನ ಭಾಷಣದಲ್ಲಿ ಮಾತನಾಡಿ, “ರೈತರು, ಕಾರ್ಮಿಕರು, ಸೈನಿಕರು ಮತ್ತು ಶಿಕ್ಷಕರೇ ದೇಶದ ನಾಲ್ಕು ಸ್ತಂಭಗಳು. ಯಾವುದೇ ಒಂದು ಕುಸಿದರೂ ವ್ಯವಸ್ಥೆ ಅವ್ಯಸ್ಥೆಯಾಗುತ್ತದೆ. ಹಾವೇರಿ ವೃತ್ತದ ವಿದ್ಯುತ್ ಇಲಾಖೆಯ ನೌಕರರು ಸೇವೆ ಅತ್ಯುತ್ತಮವಾಗಿದ್ದು, ಸಂಘಟನೆಯನ್ನೂ ಕಾಪಾಡಿಕೊಂಡದ್ದು ಶ್ಲಾಘನೀಯ” ಎಂದರು. 

ಮುಖ್ಯ ಅತಿಥಿಯಾಗಿದ್ದ ಪ್ರಭಾರಿ ಕಾರ್ಯ ನಿರ್ವಾಹಕ ಇಂಜನೀಯರ ಸಿ.ಬಿ. ಹೊಸಮನಿ ಮಾತನಾಡಿ, “ಸದಾಕಾಲ ಅಗೋಚರ ಶಕ್ತಿಯೊಂದಿಗೆ ಕೆಲಸ ಮಾಡುವ ನಮ್ಮ ಲೈನ್‌ಮನ್ನರು ತಮಗೆ ಕೊಟ್ಟಿರುವ ಸುರಕ್ಷಿತಾ ಸಲಕರಣೆಗಳನ್ನು ಬಳಸಿ ಕೆಲಸ ಮಾಡಬೇಕು. ದಕ್ಷತೆಯಲ್ಲಿ ಪ್ರತಿ ಕುಟುಂಬದ ಸುರಕ್ಷತೆ ಅಡಗಿದೆ” ಎಂದರು.

1003327409

ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಲಿಂಗಯ್ಯ ಹಿರೇಮಠ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, “ಸಂಘಟನೆಯಲ್ಲಿಯೇ ಶಕ್ತಿ ಇದೆ. ಕೂಡಿ ನಡೆದರೆ ಯಶಸ್ಸು ಖಂಡಿತ. ಕಾರ್ಮಿಕರ ಒಗ್ಗಟ್ಟನ್ನು ಮುರಿಯುವ ಶಕ್ತಿಗಳಿಗಿಂತ ಕಾಯುವ ಸಂಕಲ್ಪವೇ ಮುಖ್ಯ” ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿ ಶಿವಾನಂದ ಬಿ ಹಾದಿಮನಿ ಅವರು ನಮ್ಮಲ್ಲಿ ಒಗ್ಗಟ್ಟಿರುವುದರಿಂದಲೇ ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಂಡಿರುವೆವು. ನಾವು ಸಹ ಇಲಾಖೆಯ ಉನ್ನತಿಗಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸಂಘ ಮತ್ತು ಆಡಳಿತ ಮಂಡಳಿ ವ್ಯವಸ್ಥೆಯ ಎರಡು ಕಣ್ಣುಗಳು ಇದ್ದಂತೆ” ಎಂದು ಹೇಳಿದರು

ಈ ಸಂದರ್ಭದಲ್ಲಿ ಏಳು ಜನ ನೌಕರರಿಗೆ ಕಾರ್ಮಿಕ ಪ್ರಶಸ್ತಿಯನ್ನು ನೀಡಲಾಯಿತು. ನಗರ ಸಭೆಯ ವಾಲ್‌ಮನ್ ಬಿಷ್ಟಣ್ಣ ಹನುಮಂತ ಕೊರವರ ಮತ್ತು ಮಹಿಳಾ ಪ್ರತಿನಿಧಿ ಶ್ರೀಮತಿ ನೀಲಮ್ಮ ಹಡಪದ ಅವರು ಒಳಗೊಂಡಂತೆ ಸರ್ವಶ್ರೀ ಎಸ್. ಎಂ ಹಾವೇರಿ, ದಾದಾಪೀರ ಯು ಹಾವೇರಿ, ಅನೀಲಕುಮಾರ ಪತ್ತಾರ, ಮಹೇಶ ಹುಣಸಿಕಟ್ಟಿ ಹಾಗೂ ಎಸ್.ಕೆ ಕಬ್ಬೂರ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಹುಲಸೂರ | ತಹಸೀಲ್‌ ಕಚೇರಿಯಲ್ಲಿ ಭಗವಾನ್‌ ಬುದ್ಧ ಜಯಂತಿ ಆಚರಣೆ

ಸಮಾರಂಭವನ್ನು ಉದ್ದೇಶಿಸಿ ಸರ್ವಶ್ರೀ ಮೊಹ್ಮದ ಅಮಾನುಲ್ಲಾ. ಎ.ಕೆ. ಯಮನೂರ, ಎನ್.ಪಿ. ಹಾವೇರಿ, ಕೆ.ಎನ್. ಅಗಡಿ. ಓ ಸತೀಶ, ಎಂ.ಕೆ. ತರಿಕೇರಿ ಮುಂತಾದವರು ಮಾತನಾಡಿದರು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಆರಂಭದಲ್ಲಿ ನಾಗರಾಜ ಬಿ. ಮಡ್ಲೂರ ಕಾರ್ಮಿಕ ಗೀತೆ ಹಾಡಿದರು. ಸ್ಥಳೀಯ ಸಮಿತಿಯ ಅಧ್ಯಕ್ಷರಾದ ಶಂಕರ ಕಾಳಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಎಚ್. ಸಿ. ಮರಿದ್ಯಾಮಣ್ಣನವರ ನಡೆಸಿಕೊಟ್ಟರು. ಕೊನೆಯಲ್ಲಿ ಸಹ ಕಾರ್ಯದರ್ಶಿ ಎಂ.ಬಿ. ಮಿಶ್ರಿಕೋಟಿ ಎಲ್ಲರನ್ನು ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | UAPA, NSA ಕಾಯ್ದೆಗಳು ಸಂವಿಧಾನಿಕ ಹಕ್ಕುಗಳ ದಮನಕ್ಕೆ ಅಸ್ತ್ರವಾಗುತ್ತಿವೆ : ಪ್ರೊ. ಫಣಿರಾಜ್

ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನವಾಗಿ ಆರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ,...

ಉಡುಪಿ | ಕಟ್‌ಬೇಲ್ತೂರು ರೈಲ್ವೆ ಸೇತುವೆ ಅಪಾಯಕಾರಿ ತಿರುವು ಸರಿಪಡಿಸಲು ಆಗ್ರಹಿಸಿ ಸಿಪಿಎಂ ಪ್ರತಿಭಟನೆ

ಕಟ್‌ಬೇಲ್ತೂರು ಗ್ರಾಮದ ರೈಲ್ವೆ ಸೇತುವೆಯಲ್ಲಿರುವ ಅಪಾಯಕಾರಿ ತಿರುವನ್ನು ತಕ್ಷಣ ಸರಿಪಡಿಸಿ, ಸಾರ್ವಜನಿಕರ...

ಉಡುಪಿ | ಮಲ್ಪೆ–ತೀರ್ಥಹಳ್ಳಿ ಹೆದ್ದಾರಿ ಕಾಮಗಾರಿ ಅಂತಿಮ ಹಂತ; ಬಾಕಿ ಭೂಸ್ವಾಧೀನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ರಾಷ್ಟ್ರೀಯ ಹೆದ್ದಾರಿ 169ಎರ ಮಲ್ಪೆ–ಕರಾವಳಿ ಬೈಪಾಸ್‌ವರೆಗಿನ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು...