ಉಡುಪಿ | ರಾಷ್ಟ್ರ ಪ್ರಶಸ್ತಿ ಪಡೆದರೂ ರಾಜ್ಯ ಪ್ರಶಸ್ತಿಗೆ ನಿಲುಕದ ಕಲಾವಿದ ಲಿಯಾಕತ್ ಅಲಿ

Date:

ಉಡುಪಿ ನಗರದ ಕಲಾ ಪ್ರೇಮಿಗಳಿಗೆ ಚಿರಪರಿಚಿತವಾದ ಸ್ಥಳವೆಂದರೆ ಅದುವೇ ಇನಾಯತ್‌ ಆರ್ಟ್‌ ಗ್ಯಾಲರಿ. ಬಣ್ಣಗಳ ಲೋಕದಲ್ಲಿ ಮನಸ್ಸು ತೇಲಾಡುವಂತೆ ಮಾಡುವ ಈ ಗ್ಯಾಲರಿಯಲ್ಲಿ ಜೀವಂತವಾಗಿರುವ ಕಲಾ ಪ್ರಪಂಚದ ಹಿಂದಿನ ಸ್ಫೂರ್ತಿಯೇ ಲಿಯಾಕತ್‌ ಅಲಿ. ಅಂಗವೈಕಲ್ಯವಿದ್ದರೂ ಸಹ ತಮ್ಮ ಕಲಾತ್ಮಕ ಶಕ್ತಿಯ ಮೂಲಕ ಚಿತ್ರಕಲೆಯಲ್ಲಿ ಅಸಾಧಾರಣ ಪ್ರತಿಭೆಯನ್ನು ಮೂಡಿಸಿರುವ ಅವರು, ಕಲೆ ಎನ್ನುವುದು ಕೇವಲ ಪ್ರತಿಭೆಯಲ್ಲ, ಅದು ಶ್ರಮ ಮತ್ತು ನಂಬಿಕೆಯ ಫಲವೆಂದು ತಮ್ಮ ಜೀವನದಿಂದ ತೋರಿಸಿದ್ದಾರೆ.

- Advertisement -
WhatsApp Image 2025 10 25 at 11.14.45 AM 1

ಲಿಯಾಕತ್ ಅಲಿ ಅವರ ಕಲಾ ಪಯಣ ಬಾಲ್ಯದಲ್ಲೇ ಆರಂಭವಾಯಿತು. ತಮ್ಮ ತಂದೆಯಿಂದಲೇ ಕಲಿತ ಚಿತ್ರಕಲೆ ಅವರನ್ನು ಜೀವನದ ಭಾಗವಾಯಿತು. ಚಿತ್ರಕಲೆ ಇವರಿಗೆ ಕೇವಲ ಹವ್ಯಾಸವಲ್ಲ ಅದು ಅವರ ಉಸಿರು. ಬಣ್ಣಗಳಲ್ಲಿ ಅವರು ಬದುಕಿನ ಕಥೆಗಳನ್ನು ಕಟ್ಟುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

1979ರಲ್ಲಿ ಸಿಂಡಿಕೇಟ್‌ ಬ್ಯಾಂಕ್ ಗೆ ಆರ್ಟಿಸ್ಟ್‌ ಆಗಿ ಸೇರಿದ ಲಿಯಾಕತ್ ಅಲಿ, ಬ್ಯಾಂಕ್‌ನ ವಿಶೇಷ ಸಂಚಿಕೆಗಳಿಗೆ ವಿನ್ಯಾಸ ಮಾಡುವ ಮೂಲಕ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಕೆಲಸದ ಜೊತೆಗೆ ಅವರು ಬಡ ಮಕ್ಕಳಿಗೆ ಚಿತ್ರಕಲೆಯ ತರಬೇತಿ ನೀಡುವ ಸಾಮಾಜಿಕ ಹೊಣೆಗಾರಿಕೆಯನ್ನು ಸಹ ಕೈಗೊಂಡರು.

ಈದಿನ.ಕಾಮ್‌ ಜೊತೆ ಮಾತನಾಡಿದ ಅವರು, ಕಲೆಯ ಆಸಕ್ತಿಯೇ ಮೊಬೈಲ್‌ನ ಕಾಲದಲ್ಲಿ ನಿಧಾನವಾಗಿ ಕುಗ್ಗಿದೆ. ಆದರೆ ನಾವು ಬಡ, ನಿರ್ಗತಿಕ, ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದೇವೆ ಎಂದು ಹೇಳಿದರು.

ಅವರ ಕಲೆಯು ಕೇವಲ ಚಿತ್ರದಲ್ಲಿ ಸೀಮಿತವಲ್ಲ, ಅದು ಸೇವೆಯ ರೂಪದಲ್ಲೂ ಕಾಣಿಸುತ್ತದೆ. ಉಚಿತವಾಗಿ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಚಿತ್ರಕಲೆ ಕಲಿಸುತ್ತಿರುವ ಅವರು, ಪ್ರಸ್ತುತ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಅವರೊಂದಿಗೆ ಅವರ ಪತ್ನಿ ಹಾಗೂ ಮೂವರು ಟೀಚರ್‌ ಗಳು ಸಹಕಾರ ನೀಡುತ್ತಿದ್ದಾರೆ.

ಕಳೆದ 27 ವರ್ಷಗಳಿಂದ ನಿರಂತರವಾಗಿ ಕಲಾ ಪ್ರದರ್ಶನಗಳನ್ನು ಆಯೋಜಿಸುತ್ತಿರುವ ಲಿಯಾಕತ್ ಅಲಿ, ಪ್ರತಿ ವರ್ಷ ಹೊಸ ಶೀರ್ಷಿಕೆ, ಹೊಸ ಕಲ್ಪನೆ, ಹೊಸ ಬಣ್ಣದ ಲೋಕವನ್ನು ಕಲಾಭಿಮಾನಿಗಳ ಮುಂದಿಡುತ್ತಿದ್ದಾರೆ. ಅವರ ಚಿತ್ರಗಳಲ್ಲಿ ಪ್ರಕೃತಿ, ಮಾನವೀಯತೆ, ಸಮಾಜದ ನೋವು ನಗುವುಗಳು ಜೀವಂತವಾಗಿ ಎದ್ದು ಕಾಣುತ್ತವೆ.

WhatsApp Image 2025 10 25 at 11.14.42 AM 1

1990ರಲ್ಲಿ ಆಗಿನ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಮನ್ ಅವರ ಕೈಯಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಗೌರವ ಇವರದಾಗಿದೆ. 2005ರಲ್ಲಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಹ ಅವರಿಗೆ ದೊರಕಿತು. ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದರೂ ಇಷ್ಟರವರೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅವರ ಹೆಸರಿಲ್ಲದೆ ಇರುವುದು ಉಡುಪಿಯ ಕಲಾಸಕ್ತರಿಗೆ ಬೇಸರ ತಂದಿದೆ. ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದರೂ ರಾಜ್ಯದ ಗೌರವದಿಂದ ವಂಚಿತರಾದ ಈ ಕಲಾವಿದರ ಸಾಧನೆ ಇಂದು ಪ್ರೇರಣೆಯಾಗಿದೆ. ಕಲೆಗಾಗಿ ಬದುಕಿ, ಕಲೆಯ ಮೂಲಕ ಸಮಾಜಕ್ಕೆ ಬೆಳಕು ನೀಡುವ ನಿಜವಾದ ಕಲಾವಿದರ ಬದುಕು ನಮಗೆಲ್ಲರಿಗೂ ಪ್ರೇರಣೆಯಾಗಲಿ.

ಅರ್
WhatsApp Image 2025 10 25 at 11.14.44 AM 1
WhatsApp Image 2025 10 25 at 11.14.43 AM
WhatsApp Image 2025 10 25 at 11.14.46 AM 1
WhatsApp Image 2025 10 25 at 11.14.46 AM
WhatsApp Image 2025 10 25 at 11.14.44 AM
WhatsApp Image 2025 10 25 at 11.14.42 AM 2
WhatsApp Image 2025 10 25 at 11.14.45 AM
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

‘SIR’ ಪರಿಶೋಧ-ಪ್ರತಿರೋಧ: ಸೆ.29ರಂದು ಮೈಸೂರಿನಲ್ಲಿ ಪ್ರಕಾಶ್ ರಾಜ್ ಸಂವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆ...

ಉಡುಪಿ | ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ

ಹೆತ್ತ ತಾಯಿಯನ್ನೇ ಮಗ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ...

ಬಳ್ಳಾರಿ | ಲಾರಿ ಪಲ್ಟಿ; ಸ್ಟೀನಿಂಗ್ ಯಂತ್ರ ಬಿದ್ದು ಯುವಕ ದುರ್ಮರಣ

ಜಿಲ್ಲೆ ಸಂಡೂರು ತಾಲ್ಲೂಕಿನ ಉಬ್ಬಳಗಂಡಿ ಗ್ರಾಮದ ಬಳಿ ಮೈನ್‌ಸ್‌ನ ಸ್ಟೀನಿಂಗ್ ಯಂತ್ರವನ್ನು...